Bigg Boss: ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು ಇವರೇ!

0 1

Bigg Boss: ನಿನ್ನೆಯ ಬಿಗ್ ಬಾಸ್ ವೀಕೆಂಡ್ ಪಂಚಾಯ್ತಿ ಸಂಚಿಕೆಯ ಬಗ್ಗೆ ವೀಕ್ಷಕರು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಮೆರೆದ ಕ್ರೂರತೆ ಒಪ್ಪುವಂಥದ್ದಲ್ಲ, ಕಿಚ್ಚ ಸುದೀಪ್ ಅವರು ವಿನಯ್ ಅಂಡ್ ಗ್ಯಾಂಗ್ ಮಾಡಿದ ಕ್ರೂರತೆಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಎಲ್ಲರೂ ಬಯಸಿದ್ದರು. ಆದರೆ ನಿನ್ನೆಯ ಸಂಚಿಕೆಯಲ್ಲಿ ಆಗಿದ್ದೆ ಬೇರೆ.. ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು ಯಾರು ಎನ್ನುವ ಕುತೂಹಲ ಕೂಡ ಜನರಲ್ಲಿದೆ.

ಕಳೆದ ವಾರ ಯಾರು ಊಹಿಸದ ರೀತಿಯಲ್ಲಿ ಟ್ವಿಸ್ಟ್ ಗಳು ನಡೆದಿವೆ, ನಟಿ ಸಂಗೀತ ಶೃಂಗೇರಿ ಮತ್ತು ಪ್ರತಾಪ್ ಇಬ್ಬರಿಗೂ ಕೂಡ ಟಾಸ್ಕ್ ನಲ್ಲಿ ಕೆಮಿಕಲ್ ಬಳಸಿದ ಕಾರಣ ಇಬ್ಬರು 2 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಬಿಗ್ ಬಾಸ್ ಮನೆಗೆ ವೀಕೆಂಡ್ ಪಂಚಾಯ್ತಿ ಎಪಿಸೋಡ್ ಗಾಗಿ ಬಂದಿದ್ದಾರೆ. ನಿನ್ನೆ ತಪ್ಪು ಸರಿಗಳ ಚರ್ಚೆ ಕೂಡ ನಡೆದಿದೆ.

ನಿನ್ನೆಯ ಸಂಚಿಕೆಯಲ್ಲಿ ಸಂಗೀತ ಶೃಂಗೇರಿ ಮತ್ತು ಪ್ರತಾಪ್ ಇಬ್ಬರು ಕೂಡ ಸೇವ್ ಆಗಿದ್ದಾರೆ. ನಾಮಿನೇಷನ್ ಲಿಸ್ಟ್ ನಲ್ಲಿ ತನಿಷಾ, ಸ್ನೇಹಿತ್, ಸಿರಿ, ಮೈಕಲ್ ಇವರೆಲ್ಲ ಇದ್ದಾರೆ. ಈ ವಾರ ಹೊರಹೋಗೋದು ಯಾರು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದು ಅದಕ್ಕೀಗ ಉತ್ತರ ಸಿಕ್ಕಿದ್ದು, ಕಳೆದ ವಾರ ಕ್ಯಾಪ್ಟನ್ ಆಗಿ ಬಿಗ್ ಬಾಸ್ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ಪೂರೈಸದ ಸ್ನೇಹಿತ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ..

ಮೊದಲಿಗೆ ಸಿರಿ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಅನ್ನಿಸಿದರೂ ಸಹ, ಬಳಿಕ ಎಲಿಮಿನೇಟ್ ಆಗಿರುವುದು ಸ್ನೇಹಿತ್ ಎಂದು ತಿಳಿದುಬಂದಿದೆ.

Leave A Reply

Your email address will not be published.