Bigg Boss: ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ವರ್ತೂರ್ ಸಂತೋಷ್!

0 20

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10 ಮುಕ್ತಾಯದ ಹಂತಕ್ಕೆ ಬಂದಿದೆ, ಇನ್ನೆರಡೆ ವಾರದಲ್ಲಿ ಫಿನಾಲೆ ನಡೆಯಲಿದೆ. ಈ ವೇಳೆ ಫಿನಾಲೆಗೆ ಆಯ್ಕೆ ಆಗಿರುವ ಮೊದಲ ಸ್ಪರ್ಧಿ ಆಗಿದ್ದಾರೆ ಸಂಗೀತಾ ಶೃಂಗೇರಿ. ಕಳೆದ ವಾರ ನೀಡಿದ್ದ ಟಿಕೆಟ್ ಟು ಫಿನಾಲೆ ಟಾಸ್ಕ್ ನಲ್ಲಿ ಅತಿಹೆಚ್ಚು ಅಂಕ ಪಡೆದ 2ನೇ ಸ್ಪರ್ಧಿ ಆಗಿದ್ದರು ಸಂಗೀತ, ಮೊದಲ ಸ್ಥಾನದಲ್ಲಿ ಪ್ರತಾಪ್, 3ನೇ ಸ್ಥಾನದಲ್ಲಿ ನಮ್ರತಾ ಇದ್ದರು. ಈ ಮೂವರ ನಡುವೆ ಯಾರಿಗೆ ಫಿನಾಲೆ ಟಿಕೆಟ್ ಸಿಗಬೇಕು ಎನ್ನುವುದನ್ನು ಮನೆಯ ಇತರೆ ಸ್ಪರ್ಧಿಗಳ ವೋಟಿಂಗ್ ಮೂಲಕ ಆಯ್ಕೆ ಮಾಡಲಾಯಿತು.

ಈ ಆಯ್ಕೆಯ ಅನುಸಾರ ಸಂಗೀತ ಶೃಂಗೇರಿ ಅವರಿಗೆ ಫಿನಾಲೆ ಟಿಕೆಟ್ ಸಿಕ್ಕಿತು. ಆದರೆ ಇದು ಸರಿಯಿಲ್ಲ, ಅತಿಹೆಚ್ಚು ಅಂಕ ಪಡೆದ ಪ್ರತಾಪ್ ಅವರಿಗೆ ಅನ್ಯಾಯ ಆಗಿದೆ, ವೋಟಿಂಗ್ ಮೂಲಕ ಆಯ್ಕೆ ಮಾಡೋದಾದರೆ ಟಾಸ್ಕ್ ಯಾಕೆ ಬೇಕಿತ್ತು ಎನ್ನುವ ಆರೋಪ ಬಿಗ್ ಬಾಸ್ ಮೇಲೆ ಬಂದಿತ್ತು, ಆದರೆ ನಿನ್ನೆಯ ಸಂಚಿಕೆಯಲ್ಲಿ ಸುದೀಪ್ ಅವರು ಈ ಬಗ್ಗೆ ಮತ್ತು ಟಾಸ್ಕ್ ಗಳ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. ಮನೆಯ ಸ್ಪರ್ಧಿಗಳು ಕೂಡ ವೋಟಿಂಗ್ ಆಗಿದ್ದು ಸರಿ ಇದೆ ಎಂದು ಹೇಳಿದ್ದಾರೆ..

ಪ್ರತಾಪ್ ಅವರು ಕಷ್ಟಪಟ್ಟಿದ್ದಾರೆ ಅನ್ನೋದು ನಿಜ, ಆದರೆ ಟಾಸ್ಕ್ ಎಂದು ಬಂದಾಗ ಫಿನಾಲೆ ವಾರದಲ್ಲಿ ಇದ್ದ ಎನರ್ಜಿ ಬೇರೆ ವಾರಗಳಲ್ಲಿ ಇರಲಿಲ್ಲ. ಹಿಂದಿನಿಂದಲು ಇದೇ ರೀತಿ ಆಡಿದ್ದರೆ ಸರಿ ಇರುತ್ತಿತ್ತು, ಒಂದು ವಾರದ ಟಾಸ್ಕ್ ನಲ್ಲಿ ಚೆನ್ನಾಗಿ ಆಡಿ ಫಿನಾಲೆ ಟಿಕೆಟ್ ಪಡೆದರೆ, ಶುರುವಿನಿಂದಲೂ ಚೆನ್ನಾಗಿ ಆಡಿಕೊಂಡು ಬಂದಿರುವ ಕಲಾವಿದರಿಗೆ ಅನ್ಯಾಯ ಆದ ಹಾಗೆ ಆಗುತ್ತದೆ ಎಂದು ಸ್ಪರ್ಧಿಗಳು ಅಭಿಪ್ರಾಯ ವ್ಯಕ್ತ ಪಡಿಸಿದರು.

ಒಟ್ಟಿನಲ್ಲಿ ಈ ವಾರ ಸಂಗೀತ ಅವರು ಫಿನಾಲೆಗೆ ಆಯ್ಕೆಯಾಗಿದ್ದು, ಇನ್ನು 4 ಸ್ಪರ್ಧಿಗಳು ಮುಂದಿನ ವಾರದಲ್ಲಿ ಆಯ್ಕೆಯಾಗಲಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ನಮ್ರತಾ ಅವರು ಸೇವ್ ಆಗಿದ್ದು, ಇಂದಿನ ಸಂಚಿಕೆಯಲ್ಲಿ ಎಲಿಮಿನೇಟ್ ಆಗೋದು ಯಾರು ಎನ್ನುವ ವಿಚಾರ ಈಗಾಗಲೇ ತಿಳುದುಬಂದಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ, ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.