Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಗಳ 2 ವಾರಗಳ ಜರ್ನಿ ಮುಗಿದು, ಈಗ ಮೂರನೇ ವಾರದ ಆಟ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಟೀಮ್ ಗಳು ಅದಲು ಬದಲಾಗಿದೆ ಎಂದರೆ ತಪ್ಪಲ್ಲ. ತನಿಷಾ ಮತ್ತು ನಮ್ರತಾ ಇವರಿಬ್ಬರು ಎರಡು ಟೀಮ್ ಗಳ ಕ್ಯಾಪ್ಟನ್ ಆಗಿದ್ದಾರೆ. ನಮ್ರತಾ ಅವರ ಟೀಮ್ ಬ್ಲೂ ಬಣ್ಣ, ತನಿಷಾ ಅವರ ಟೀಮ್ ಯೆಲ್ಲೋ ಟೀಮ್ ಆಗಿದೆ.
ಈ ಬಾರಿ ತನಿಷಾ ಅವರ ಟೀಮ್ ನಲ್ಲಿ ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ಇಶಾನಿ, ಮೈಕಲ್, ಸ್ನೇಹಿತ್, ನೀತು ಇದ್ದಾರೆ. ಇನ್ನು ನಮ್ರತಾ ಟೀಂ ನಲ್ಲಿ ವಿನಯ್, ಕಾರ್ತಿಕ್, ಸಂಗೀತ, ರಕ್ಷಕ್, ಸಿರಿ ಮತ್ತು ಭಾಗ್ಯಶ್ರೀ ಇದ್ದಾರೆ. ಈ ಎರಡು ಟೀಮ್ ಗಳ ನಡುವೆ ಟಫ್ ಕಾಂಪಿಟೇಶನ್ ನಡೆಯುತ್ತಿದ್ದು, ನಿನ್ನೆ ನೀಡಿದ ಎರಡು ಟಾಸ್ಕ್ ಗಳಲ್ಲಿ ನಮ್ರತಾ ಅವರ ತಂಡವೆ ಗೆದ್ದಿದೆ. ಎರಡು ಟಾಸ್ಕ್ ಗೆದ್ದ ಬಳಿಕ ತನಿಶಾ ಅವರ ತಂಡದ ಮೇಲೆ ತಮಾಷೆ ಮಾಡಿದ್ದರು.
ತನಿಷಾ ಅವರ ತಂಡ ಕೂಡ ಸ್ಪೋರ್ಟಿವ್ ಆಗಿಯೇ ಎಲ್ಲವನ್ನು ತೆಗೆದುಕೊಂಡಿದ್ದಾರೆ. ಆದರೆ ಈ ಟಾಸ್ಕ್ ಗಳ ನಡುವೆಯೇ ಇಶಾನಿ ರಕ್ಷಕ್ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಟಾಸ್ಕ್ ಎಲ್ಲವು ಮುಗಿದ ಮೇಲೆ, ಮನೆಯ ಹೊರಗಡೆ ಇಶಾನಿ, ಸ್ನೇಹಿತ್, ಮೈಕಲ್, ತುಕಾಲಿ ಸಂತೋಷ್ ಇಬ್ಬರು ಕೂತು ಮಾತನಾಡುವಾಗ, ರಕ್ಷಕ್ ತಮಗೆ ಟಾರ್ಗೆಟ್ ಮಾಡಿ, ಬೇಕು ಅಂತಾನೆ ಕಮೆಂಟ್ಸ್ ಪಾಸ್ ಮಾಡ್ತಿದ್ದಾನೆ ಎಂದು ಹೇಳಿದ್ದಾರೆ ಇಶಾನಿ.
ರಕ್ಷಕ್ ತುಂಬಾ ಗಾಂಚಲಿ ತೋರಿಸ್ತಿದ್ದಾನೆ, ನಾನು ಟಾಸ್ಕ್ ಆಡೋದು ಅಂತ ಹೇಳಿದಾಗ, ನೀವಾ ಅಂತ ಒಂಥರ ಮಾಡಿದ..ನನ್ ಕಂಡರೆ ಒಂಥರ ಆಡ್ತಾನೆ, ಮೊದಲ ವಾರದ ಟಾಸ್ಕ್ ನಲ್ಲಿ ನಾನು ಮುಖಕ್ಕೆ ನೀರು ಎರಚಿದ್ದಕ್ಕೆ ಈ ಥರ ಆಡ್ತಿದ್ದಾನೆ ಅನ್ಸುತ್ತೆ. ಇನ್ನು ನೀರು ಹಾಕಬೇಕು ಅವನಿಗೆ. ಈಗ ನಾನೇನು ಮಾತಾಡಲ್ಲ, ಸುದೀಪ್ ಸರ್ ಬರ್ತಾರಲ್ಲ ಅವರು ಕೇಳಿದಾಗ ನಾನು ಉತ್ತರ ಕೊಡ್ತೀನಿ.. ಎಂದು ರಕ್ಷಕ್ ಬಗ್ಗೆ ಹೇಳಿದ್ದಾರೆ ಇಶಾನಿ.
ಈ ರೀತಿಯಾಗಿ ಬಿಗ್ ಬಾಸ್ ಮನೆಯಲ್ಲಿ ಹೊಸದೊಂದು ಜಗಳ ಶುರುವಾಗುವ ಸೂಚನೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಈ ಜಗಳಗಳು ದೊಡ್ಡದಾಗುತ್ತಾ ಅಥವಾ ಇಬ್ಬರು ಮಾತನಾಡಿ ಸರಿಮಾಡಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.