Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ವಾರದ ಪಂಚಾಯಿತಿ ಇಂದು ನಡೆಯಲಿದೆ. ಮೊದಲ ವಾರ ಸಾಕಷ್ಟು ಘಟನೆಗಳು ನಡೆದಿದೆ. ಹಾಗೆಯೇ ಸುಮಾರು 8 ಜನ ನಾಮಿನೇಟ್ ಕೂಡ ಆಗಿದ್ದಾರೆ. ಹಾಗಿದ್ದಲ್ಲಿ ಮನೆಯಿಂದ ಹೊರಬಂದ ಸ್ಪರ್ಧಿ ಯಾರು ಎನ್ನುವ ಕುತೂಹಲ ಶುರುವಾಗಿದೆ. ಈಗಾಗಲೇ ವೀಕೆಂಡ್ ಎಪಿಸೋಡ್ ಶೂಟಿಂಗ್ ನಡೆದಿದ್ದು, ಇಂದು ಹೊರಬಂದಿರುವುದು ಯಾರು ಎಂದು ತಿಳಿಸುತ್ತೇವೆ ನೋಡಿ..
ಈ ವಾರ ಬಿಗ್ ಬಾಸ್ ಮನೆಯಲ್ಲಿ ನಡೆದ ಕೆಲವು ಘಟನೆಗಳು ವೀಕ್ಷಕರಿಗೂ ಇಷ್ಟವಾಗಿರಲಿಲ್ಲ. ಬೇಕು ಎಂದೇ ಡ್ರೋನ್ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅನ್ನಿಸತೊಡಗಿತ್ತು. ಆ ವಿಚಾರದ ಬಗ್ಗೆ ಕಿಚ್ಚ ಸುದೀಪ್ ಅವರು ಮನೆಯ ಸ್ಫರ್ಧಿಗಳನ್ನು ಹೇಗೆ ತರಾಟೆಗೆ ತೆಗೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಸಹ ಜನರಲ್ಲಿದೆ, ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿರುವ ಪ್ರೊಮೋ ನೋಡಿದರೆ, ಸುದೀಪ್ ಅವರು ತುಕಾಲಿ ಸಂತು ಮತ್ತು ಭಾಗ್ಯಶ್ರೀ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮನೆಯವರು ಆಡಿದ ಮಾತುಗಳಿಂದ ಡ್ರೋನ್ ಪ್ರತಾಪ್ ಅವರು ಬಾತ್ ರೂಮ್ ಗೆ ಹೋಗಿ ಕಣ್ಣೀರು ಹಾಕಿದರು. ಆ ವೇಳೆ ಪ್ರತಾಪ್ ಅವರನ್ನು ನಮ್ರತಾ ಗೌಡ ಮತ್ತು ಸಂಗೀತ ಶೃಂಗೇರಿ ಸಮಾಧಾನ ಮಾಡಿದ್ದರು. ಪ್ರತಾಪ್ ಅವರು ಕಣ್ಣೀರು ಹಾಕಿದ್ದು, ಎಲ್ಲರಿಗೂ ಒಂದು ರೀತಿ ಬೇಸರ ಆಗಿದ್ದಂತೂ ನಿಜ. ಹಾಗಾಗಿ ಜನರು ಕೂಡ ಪ್ರತಾಪ್ ಪರವಿದ್ದು, ಸುದೀಪ್ ಅವರು ಎಲ್ಲರಿಗು ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಬಯಸಿದ್ದರು.
ಜನರ ನಿರೀಕ್ಷೆಯ ಹಾಗೆಯೇ ಸುದೀಪ್ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೊಂದು ಕಡೆಯಾದರೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಸದಸ್ಯರು ಯಾರು ಎನ್ನುವ ಕುತೂಹಲ ಕೂಡ ಶುರುವಾಗಿದ್ದು, ಈ ವಾರ ನೀತು ವನಜಾಕ್ಷಿ, ಸಿರಿಜಾ, ಸ್ನೇಕ್ ಶ್ಯಾಮ್, ಸೇರಿದಂತೆ 8 ಜನರು ನಾಮಿನೇಟ್ ಆಗಿದ್ದರು. ನಾಮಿನೇಟ್ ಆದವರ ಪೈಕಿ ಮೊದಲ ವಾರ ಮನೆಯಿಂದ ಹೊರಬಂದಿರುವುದು ಸ್ನೇಕ್ ಶ್ಯಾಮ್ ಅವರು.
ಸ್ನೇಕ್ ಶ್ಯಾಮ್ ಅವರಿಗೆ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳಲು ಅವಕಾಶ ಸಿಕ್ಕಿತ್ತು, ಆದರೆ ಈ ವಾರ ಅವರ involvement ಅಷ್ಟೇನು ಇರಲಿಲ್ಲ. ಜೊತೆಗೆ ಶ್ಯಾಮ್ ಅವರಿಗೆ ವಯಸ್ಸಾಗಿದೆ ಎಂದು ಮತ್ತು ಇನ್ನಿತರ ಕಾರಣಗಳಿಂದ ಮನೆಯ ಸದಸ್ಯರು ಅವರನ್ನು ನಾಮಿನೇಟ್ ಮಾಡಿದ್ದರು. ಈ ಕಾರಣದಿಂದಲು ಜನರ ವೋಟ್ ಜಾಸ್ತಿ ಸಿಗದೆ ಸ್ನೇಕ್ ಶ್ಯಾಮ್ ಅವರು ಇಂದು ಮನೆಯಿಂದ ಹೊರಬಂದಿದ್ದಾರೆ.