Bigg Boss: ಬಿಗ್ ಬಾಸ್ ಶೋ ಎಂದರೆ ಜನರಿಗೆ ಸಿಕ್ಕಾಪಟ್ಟೆ ಕುತೂಹಲ. ಎಲ್ಲಾ ಭಾಷೆಗಳಲ್ಲೂ ಕೂಡ ಈ ಶೋ ನಡೆಯುತ್ತಿದೆ. ಭಾರತದಲ್ಲಿ ಮೊದಲು ಬಿಗ್ ಬಾಸ್ ಶೋ ಶುರುವಾಗಿದ್ದು ಹಿಂದಿಯಲ್ಲಿ. ಪ್ರಸ್ತುತ ಹಿಂದಿ ಬಿಗ್ ಬಾಸ್ 17ನೇ ಸೀಸನ್ ನಡೆಯುತ್ತಿದೆ. ನಟ ಸಲ್ಮಾನ್ ಖಾನ್ ಅವರೇ ಈ ಶೋ ನಿರೂಪಣೆ ಮಾಡುತ್ತಿದ್ದಾರೆ. ಸದಾ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಕಾರಣವಾಗುವ ಬಿಗ್ ಬಾಸ್ ಮನೆ ಇದೀಗ ರೊಮ್ಯಾನ್ಸ್ ಕಾರಣಕ್ಕೆ ಸುದ್ದಿಯಾಗಿದೆ.
ಬಿಗ್ ಬಾಸ್ ಶೋನಲ್ಲಿ ಇಷಾ ಮಾಳವಿಯಾ ಅವರು ಸ್ಪರ್ಧಿಯಾಗಿ ಬಿಗ್ ಬಾಸ್ ಬಂದಿದ್ದಾರೆ. ಇವರ ಎಕ್ಸ್ ಬಾಯ್ ಫ್ರೆಂಡ್ ಅಭಿಷೇಕ್ ಸಹ ಇದೇ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದಾರೆ, ಅದರ ಜೊತೆಗೆ ಈಗಿನ ಬಾಯ್ ಫ್ರೆಂಡ್ ಸಮರ್ಥ್ ಜ್ಯುರೆಲ್ ಕೂಡ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವರಿಬ್ಬರ ನಡುವೆ ರೊಮ್ಯಾನ್ಸ್ ನಡೆಯುತ್ತಿದ್ದು, ಇದರಿಂದ ಇಷಾ ಅವರ ತಾಯಿಗೆ ಬೇಸರವಾಗಿ, ತಮ್ಮ ಮಗಳು ಬಿಗ್ ಬಾಸ್ ಮನೆಯಿಂದ ಬೇಗ ಬರಲಿ ಎಂದು ಆಶಿಸುತ್ತಿದ್ದಾರಂತೆ.
ಇಷಾ ಅವರು ಬಿಗ್ ಬಾಸ್ ಮನೆಯಲ್ಲಿದ್ದು, ಅವರ ಈಗಿನ ಬಾಯ್ ಫ್ರೆಂಡ್ ಸಮರ್ಥ್ ಬಂದಾಗ, ಎಕ್ಸ್ ಬಾಯ್ ಫ್ರೆಂಡ್ ಅಭಿಷೇಕ್ ಕಣ್ಣೀರು ಹಾಕಿದ್ದರು. ಸಮರ್ಥ್ ಕೂಡ ಬಿಗ್ ಬಾಸ್ ಮನೆಗೆ ಬಂದ ಬಳಿಕ ತಾನು ಇಷಾ ಬಾಯ್ ಫ್ರೆಂಡ್ ಎಂದು ಹೇಳಿದ್ದರು, ಆದರೆ ಇಷಾ ಅದಕ್ಕೆ ಒಪ್ಪಲಿಲ್ಲ. ನಂತರ ಅವನು ಬಾಯ್ ಫ್ರೆಂಡ್ ಅಲ್ಲ ಅಂತ ಹೇಳಿದ್ದೆ ಎನ್ನುವ ರೀತಿ ಮಾತನಾಡಿ, ಬಳಿಕ ಅವರೇ ನನ್ನ ಬಾಯ್ ಫ್ರೆಂಡ್ ಎಂದು ಒಪ್ಪಿಕೊಂಡರು.
ಇವರಿಬ್ಬರು ಜೊತೆಯಾಗಿ ಇರುವುದನ್ನು ನೋಡಿ ಎಕ್ಸ್ ಬಾಯ್ ಫ್ರೆಂಡ್ ಕಣ್ಣೀರು ಹಾಕಿದ್ದು ಇದೆ. ಸಮರ್ಥ್ ಮತ್ತು ಇಷಾ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ, ಜೊತೆಗೆ ಬಿಗ್ ಮನೆಯೊಳಗೆ ಇವರಿಬ್ಬರ ರೊಮ್ಯಾನ್ಸ್ ಕೂಡ ಜಾಸ್ತಿಯಾಗಿದೆ. ಇರೋದು ಬಿಗ್ ಬಾಸ್ ಮನೆಯಲ್ಲಿ, ತಮ್ಮ ಸುತ್ತ ಕ್ಯಾಮೆರಾಗಳಿವೆ ಎನ್ನುವುದನ್ನು ಮರೆತು ಈ ಜೋಡಿ ಅನುಚಿತವಾಗಿ ವರ್ತಿಸಿದ್ದಾರೆ. ಇವರಿಬ್ಬರ ರೊಮ್ಯಾನ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಷಾ ಕ್ಯಾಮೆರಾ ಎದುರಲ್ಲೇ ಈ ರೀತಿ ವರ್ತಿಸುತ್ತಿರುವುದನ್ನು ನೋಡಿ, ಇಷಾ ಅವರ ತಾಯಿ ಬೇಸರ ಮಾಡಿಕೊಂಡಿದ್ದು, ನಮ್ಮ ಮಗಳನ್ನು ಬೇಗ ಹೊರಗೆ ಕಳಿಸಿದರೆ ಒಳ್ಳೆಯದು ಎಂದಿದ್ದಾರಂತೆ. ಸಮರ್ಥ್ ಮನೆಯೊಳಗೆ ಹೋದಾಗಿನಿಂದ ಶೋ ನೋಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ ಇಷಾ ತಾಯಿ. ಇದೀಗ ಇಷಾ ತಾಯಿಯ ಮಾತುಗಳು ವೈರಲ್ ಆಗುತ್ತಿದ್ದು, ನೆಟ್ಟಿಗರು ಕೂಡ ಈ ಜೋಡಿಗೆ ಬಾಯಿಗೆ ಬಂದ ಹಾಗೆ ಉಗಿಯುತ್ತಿದ್ದಾರೆ.