Bigg Boss; ಪ್ರತಾಪ್ ಮಾಡಿದ ಆ ಒಂದು ತಪ್ಪಿಗೆ ಇಡೀ ಮನೆಗೆ ಶಿಕ್ಷೆ, ಎಗರಾಡಿದ ವಿನಯ್

Written by Pooja Siddaraj

Published on:

Bigg Boss: ಬಿಗ್ ಬಾಸ್ ಶೋನಲ್ಲಿ ಈಗ 10ನೇ ವಾರ ನಡೆಯುತ್ತಿದೆ. ಈ ವಾರದ ಟಾಸ್ಕ್ ಸಿಕ್ಕಾಪಟ್ಟೆ ಮಜವಾಗಿತ್ತು. ಬಿಗ್ ಬಾಸ್ ಮನೆ ಈ ವಾರ ಬಿಗ್ ಬಾಸ್ ಪ್ರಾಥಮಿಕ ಶಾಲೆ ಆಗಿತ್ತು. ಪ್ರತಿ ದಿನ 4 ಸ್ಪರ್ಧಿಗಳು ಟೀಚರ್ ಆದರೆ, 8 ಸ್ಪರ್ಧಿಗಳು ಸ್ಟುಡೆಂಟ್ ಆಗಿದ್ದರು. ಪ್ರತಿ ಟೀಚರ್ ಗೆ ಒಂದೊಂದು ವಿಷಯ ನೀಡಿ ಪಾಠ ಮಾಡಲು ತಿಳಿಸಲಾಗಿತ್ತು.

ಮನೆಯ ಎಲ್ಲಾ ಸ್ಪರ್ಧಿಗಳು ಕೂಡ ಮಕ್ಕಳ ಹಾಗೆ ಈ ಟಾಸ್ಕ್ ಎಂಜಾಯ್ ಮಾಡಿದರು. ನಿನ್ನೆಗೆ ಈ ಟಾಸ್ಕ್ ಮುಗಿದಿದೆ. ಸ್ಪರ್ಧಿಗಳು ಈ ವಾರ ತಮಗೆ ಇಷ್ಟವಾಗದ ವಿಚಾರಗಳನ್ನು ಮಾತನಾಡಿ, ಕ್ಲಾರಿಟಿಯನ್ನು ಕೂಡ ಪಡೆದಿದ್ದಾರೆ. ಅದೇ ವೇಳೆ ಇಂದಿನ ಎಪಿಸೋಡ್ ಪ್ರೋಮೋದಲ್ಲಿ ಪ್ರತಾಪ್ ಮಾಡಿದ ಒಂದು ಕೆಲಸಕ್ಕೆ ಇಡೀ ಮನೆಗೆ ಶಿಕ್ಷೆ ಸಿಗುವ ಹಾಗೆ ಆಗಿದೆ.

ಹೌದು ಇಂದಿನ ಸಂಚಿಕೆಯ ಪ್ರೊಮೋದಲ್ಲಿ ಪ್ರತಾಪ್ ಅವರು ಮುದ್ದೆ ಮಾಡುತ್ತಿರುವುದನ್ನು ನೋಡಬಹುದು, ಎಲ್ಲರೂ ಕೂಡ ಮುದ್ದೆ ಮಾಡು ಎಂದು ಮಾಡಿಸಿದ್ದಾರೆ. ಪ್ರತಾಪ್ ಕೂಡ ಚೆನ್ನಾಗಿಯೇ ಮುದ್ದೆ ಮಾಡಿದ್ದಾರೆ. ಆದರೆ ಅಡುಗೆ ಎಲ್ಲಾ ಆದ ನಂತರ ಗ್ಯಾಸ್ ಆಫ್ ಮಾಡುವುದನ್ನು ಮರೆತಿದ್ದಾರೆ. ಈ ಕಾರಣಕ್ಕೆ ಬಿಗ್ ಬಾಸ್ ಇಡೀ ಮನೆಗೆ ಗ್ಯಾಸ್ ಸಿಲಿಂಡರ್ ಸೌಲಭ್ಯವನ್ನು ಕಟ್ ಮಾಡಿದ್ದಾರೆ..

ಪ್ರತಾಪ್ ಮುದ್ದೆ ಮಾಡಿ, ಗ್ಯಾಸ್ ಆಫ್ ಮಾಡಲು ಮರೆತಿದ್ದಕ್ಕೆ ಈ ರೀತಿ ಆಗಿದೆ ಎಂದು ಮನೆಯ ಜನರು ಪ್ರತಾಪ್ ವಿರುದ್ಧ ಕಿಡಿಕಾರಿದ್ದಾರೆ. ಇದರ ಹೊಣೆಗಾರಿಕೆ ನಾನೇ ತೆಗೆದುಕೊಳ್ತಿನಿ ಎಂದು ಪ್ರತಾಪ್ ಹೇಳಿದ್ದು, ನಮ್ರತಾ ಅವರು ಇದು ಹೊಣೆ ತಗೊಳ್ಳೋದಲ್ಲ ಇಡೀ ಮನೆಗೆ ಶಿಕ್ಷೆ ಆಗಿದೆ ಎಂದು ಹೇಳಿದ್ದಾರೆ. ಇನ್ನು ವಿನಯ್, ರಾತ್ರಿ ಊಟ ಇಲ್ಲ ಅಂದ್ರೆ ನಾನು ಸುಮ್ಮನಿರೋದಿಲ್ಲ ಎಂದಿದ್ದಾರೆ.

ಒಟ್ಟಿನಲ್ಲಿ ಪ್ರತಾಪ್ ಮಾಡಿದ ಮುದ್ದೆ ಇಂದ ಮನೆಯಲ್ಲಿ ಹೊಸ ಜಗಳ ಶುರುವಾಗುವ ಎಲ್ಲಾ ಸೂಚನೆ ಇದ್ದು, ಇದರಿಂದ ಇನ್ನು ಏನೆಲ್ಲಾ ಅವಾಂತರ ಆಗುತ್ತದೆ ಎಂದು ತಿಳಿಯಲು ಇಂದಿನ ಸಂಚಿಕೆ ಪ್ರಸಾರ ಆಗುವವರೆಗೂ ಕಾಯಬೇಕಿದೆ.

Leave a Comment