Bigg Boss: ನಮ್ರತಾ ಮಾತು ಕೇಳಿ ಬೇರೆ ಸದಸ್ಯರಿಗೆ ಮೋಸ ಮಾಡುತ್ತಿದ್ದಾರಾ ಸ್ನೇಹಿತ್?

Written by Pooja Siddaraj

Published on:

Bigg Boss: ಬಿಗ್ ಬಾಸ್ ಮನೆಯ ವಾಸದಲ್ಲಿ ಈಗ ಸೆಕೆಂಡ್ ಹಾಫ್ ಶುರುವಾಗಿದೆ. 50 ದಿನಗಳ ಜರ್ನಿ ಮುಗಿಸಿದ ಬಳಿಕ ಮನೆಯಲ್ಲಿ ಕಾಂಪಿಟೇಶನ್ ಇನ್ನಷ್ಟು ಜೋರಾಗಿದೆ. ಟಾಸ್ಕ್ ಗಳು ಕೂಡ ಅಷ್ಟೇ ವಿಭಿನ್ನವಾಗಿ ಸಾಗುತ್ತಿದೆ. ಆದರ್ಶ್ ಜೊತೆಗೆ ಜಗಳ ಮತ್ತು ಕದನಗಳು ಕೂಡ ಜೋರಾಗಿಯೇ ನಡೆಯುತ್ತಿದೆ. ಇದರ ಜೊತೆಗೆ ಈಗ ಮತ್ತೆ ಹಳೆಯ ಶತ್ರು ತಂಡಗಳ ನಡುವೆ ವಾರ್ ಕೂಡ ಶುರುವಾಗಿದೆ..

ನಿನ್ನೆಯ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆ ಎರಡು ತಂಡಗಳಾಗಿ ವಿಭಜನೆ ಆಗಿದ್ದು, ಒಂದು ಗಂಧರ್ವರ ತಂಡ, ಮತ್ತೊಂದು ರಾಕ್ಷಸರ ತಂಡ. ಗಂಧರ್ವದ ತಂಡದ ಕ್ಯಾಪ್ಟನ್ ವರ್ತೂರ್ ಸಂತೋಷ್ ಆಗಿದ್ದು, ಇವರ ತಂಡದಲ್ಲಿ ವಿನಯ್, ನಮ್ರತಾ, ಮೈಕಲ್, ತುಕಾಲಿ ಸಂತೋಷ್ ಹಾಗೂ ಪವಿ ಇದ್ದಾರೆ. ಮತ್ತೊಂದು ರಾಕ್ಷಸರ ತಂಡದ ನಾಯಕಿ ಸಂಗೀತ ಆಗಿದ್ದು ಇವರ ತಂಡದಲ್ಲಿ ಕಾರ್ತಿಕ್, ತನಿಷಾ, ಪ್ರತಾಪ್, ಸಿರಿ ಮತ್ತು ಅವಿ ಇದ್ದಾರೆ.

ಈ ತಂಡವನ್ನು ಫಾರ್ಮ್ ಕೆಲಸ ಸ್ನೇಹಿತ್ ಅವರಿಗೆ ಕೊಡಲಾಗಿದ್ದು, ಅವರೇ ಮನೆಯ ಉಸ್ತುವಾಗಿ ಆಗಿದ್ದಾರೆ. ಸಮಬಲ ಇರುವ ತಂಡ ಮಾಡಬೇಕು ಎಂದು ಹೇಳಿದ್ದರು ಸಹ, ಸ್ನೇಹಿತ್ ನಮ್ರತಾ ವಿನಯ್ ಇರುವ ತಂಡಕ್ಕೆ ಸಪೋರ್ಟ್ ಮಾಡಿ ತಂಡ ರಚನೆ ಮಾಡಿದ್ದಾರೆ. ನಿನ್ನೇ ನೀಡಿದ ಟಾಸ್ಕ್ ನಲ್ಲಿ ಸಹ ವಿನಯ್ ಕಾರ್ತಿಕ್ ನಡುವೆ ಅಷ್ಟು ದೊಡ್ಡದಾಗಿ ಜಗಳ ನಡೆಯುತ್ತಿದ್ದರೂ ಸಹ, ಉಸ್ತುವಾರಿಯಾಗಿ ಜಗಳ ನಿಲ್ಲಿಸದೆ, ಸುಮ್ಮನಿದ್ದರು ಸ್ನೇಹಿತ್.

ಇಂದಿನ ಸಂಚಿಕೆಯ ಪ್ರೋಮೋ ಬಿಡುಗಡೆ ಆಗಿದ್ದು, ಇದರಲ್ಲಿ ಚೇರ್ ಮೇಲೆ ಕುಳಿತಿರುವ ಗಂಧರ್ವ ಲೋಕದವರನ್ನು ಎಬ್ಬಿಸಬೇಕು ಎಂದು ಟಾಸ್ಕ್ ನೀಡಲಾಗಿದ್ದು, ಎಲ್ಲರೂ ಪ್ರಯತ್ನ ಮಾಡುವಾಗ ವರ್ತೂರ್ ಸಂತೋಷ್ ಎದ್ದರು, ರಾಕ್ಷಸರ ತಂಡ ಎದ್ದರು ಎಂದು ಹೇಳಿದಾಗ ಒಪ್ಪಿದ ಸ್ನೇಹಿತ್, ನಮ್ರತಾ ಅವರು ಎದ್ದಿಲ್ಲ ಎಂದಾಗ, ಎದ್ದಿಲ್ಲ ಎಂದು ಘೋಷಿಸಿದರು, ನಮ್ರತಾ ಮಾತು ಕೇಳಿ ಸ್ನೇಹಿತ್ ನಿರ್ಧಾರ ಬದಲಾಯಿಸಿದ್ದು ರಾಕ್ಷಸರ ಗುಂಪಿನ ಕೋಪಕ್ಕೆ ಕಾರಣವಾಗಿದೆ..

ಸ್ನೇಹಿತ್ ನಮ್ರತಾ ಮಾತು ಕೇಳಿ ನಿರ್ಧಾರ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಬರುತ್ತಿದ್ದು, ಆರಂಭದಿಂದಲೂ ಹೀಗೆ ಮಾಡುತ್ತಿದ್ದಾರೆ, ಸ್ನೇಹಿತ್ ಗೆ ಸ್ವಂತ ಬುದ್ಧಿ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇತ್ತ ನಮ್ರತಾ ಕೂಡ ಹೌದು ನಮ್ರತಾ important ಇದ್ದಾಳೆ ಎಂದು ಹೇಳಿದ್ದಾರೆ.

Leave a Comment