Bigg Boss: ಬಿಗ್ ಬಾಸ್ ಮನೆಗೆ ಸುದ್ದಿಗಾರರ ಆಗಮನ! ಎಲ್ಲಾ ಪ್ರಶ್ನೆಗೆ ಸಿಗುತ್ತಾ ಉತ್ತರ?

Written by Pooja Siddaraj

Published on:

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10 ಈಗ ಫಿನಾಲೆ ವಾರ ತಲುಪಿದೆ. ನಿನ್ನೆಯ ಸಂಚಿಕೆಯಲ್ಲಿ ನಮ್ರತಾ ಅವರು ಎಲಿಮಿನೇಟ್ ಆಗಿದ್ದು, ಮನೆಯಲ್ಲಿ ಈಗ 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಸಂಗೀತ, ವಿನಯ್, ಕಾರ್ತಿಕ್, ತುಕಾಲಿ ಸಂತೋಷ್, ವರ್ತೂರ್ ಸಂತೋಷ್ ಹಾಗೂ ಪ್ರತಾಪ್ ಇದ್ದಾರೆ. ಇವರೆಲ್ಲರೂ ನೇರವಾಗಿ ನಾಮಿನೇಟ್ ಆಗಿದ್ದು, ಈ ವಾರದ ಮಧ್ಯದಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ.

ನಿನ್ನೆಯ ಸಂಚಿಕೆಯಲ್ಲೇ ಮನೆಯಲ್ಲೇ ಜಗಳಗಳು ಶುರುವಾಗಿತ್ತು, ಆದರೆ ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಗೆ ಸುದ್ದಿಗಾರರು ಬಂದಿದ್ದಾರೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಹಾಗೂ ಮತ್ತೊಬ್ಬರು ಜಾನ್ವಿ ರಾಯಲ ಅವರು ಬಿಗ್ ಬಾಸ್ ಮನೆಯ ಒಳಗೆ ಸುದ್ದಿಗಾರರಾಗಿ ಎಂಟ್ರಿ ಕೊಟ್ಟು ಎಲ್ಲಾ ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಅದರಲ್ಲೂ ಸಂಗೀತ ಕಾರ್ತಿಕ್ ವಿನಯ್ ಅವರಿಗೆ ಕೇಳಿರುವ ಪ್ರಶ್ನೆ ಖಡಕ್ ಆಗಿದೆ.

ವಿನಯ್ ಗೆ ಜೈ ಅಂತಿದ್ದೋರೆಲ್ಲಾ ಮನೆಗೆ ಹೋದ್ರು ಎಂದು ಕೇಳಿದ್ದು, ಕಾರ್ತಿಕ್ ಅವರಿಗೆ ಮಡಿಕೆಗೆ ಫೋಟೋ ಹಾಕಿ ಮಡಿಕೆ ಹೊಡೆದು ಸಂಗೀತ-ಕಾರ್ತಿಕ್=0 ಅಲ್ಲ ಎಂದು ಪ್ರೂವ್ ಮಾಡ್ತೀನಿ ಆಂದ್ರಲ್ಲ ಪ್ರೂವ್ ಮಾಡಿದ್ರಾ ಎಂದು ಪ್ರಶ್ನೆ ಕೇಳಿದ್ದಾರೆ. ಇವರಿಬ್ಬರು ಏನು ಉತ್ತರ ಕೊಟ್ಟಿದ್ದಾರೆ ಎಂದು ತಿಳಿಯುವ ಕುತೂಹಲ ಎಲ್ಲರಲ್ಲೂ ಇದೆ. ಇನ್ನು ಸಂಗೀತ ಅವರಿಗೆ ಪ್ರತಾಪ್ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ ಎಂದು ಗೊತ್ತಾಗಿ ಅವರ ಜೊತೆಗೆ ತಮ್ಮ ಅಂತ ರಿಲೇಶನ್ಷಿಪ್ ಶುರು ಮಾಡಿದ್ದೀರಾ ಎಂದು ಕೇಳಿದ್ದಾರೆ.

ಅದಕ್ಕೆ ಸಂಗೀತ ಮೊದಲ ದಿನದಿಂದಲೂ ನಾನು ಪ್ರತಾಪ್ ಗೆ ಸಪೋರ್ಟ್ ಮಾಡ್ತಾ ಬಂದಿದ್ದೀನಿ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಇಂದಿನ ಸಂಚಿಕೆ, ವಿಭಿನ್ನ ರೀತಿ ಇದ್ದು, ಸುದ್ದಿಗಾರರು ಕೇಳುವ ಪ್ರಶ್ನೆಗಳಿಗೆ ಮನೆಮಂದಿ ಹೇಗೆ ಉತ್ತರ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.

Leave a Comment