ಬಿಗ್ ಬಾಸ್ ಕನ್ನಡ ಹೊಸ ಸೀಸನ್ ಶುರುವಗೋದಕ್ಕೆ ಬಾಕಿ ಉಳಿದಿರೋದು ಕೆಲವೇ ಕೆಲವು ದಿನಗಳು ಮಾತ್ರ, ಇಂದು ಬಿಗ್ ಬಾಸ್ ಶೋನ ಪ್ರೆಸ್ ಮೀಟ್ ಕೂಡ ನಡೆದಿದೆ. 10ನೇ ಸೀಸನ್ ನಲ್ಲಿ ಭಾರಿ ಬದಲಾವಣೆಗಳು ಮತ್ತು ವಿಶೇಷತೆಗಳು ಇರುತ್ತದೆ ಎಂದು ಕೂಡ ಹೇಳಲಾಗುತ್ತಿದೆ. ಪ್ರತಿ ಸೀಸನ್ ನ ಹಾಗೆ ಈ ಸೀಸನ್ ನಲ್ಲಿ ಕೂಡ ಯಾವೆಲ್ಲಾ ಕಲಾವಿದರು ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನುವ ಚರ್ಚೆ ಶುರುವಾಗಿದ್ದು, ಈ 9 ಕಲಾವಿದರು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗೋದು ಪಕ್ಕಾ ಎಂದು ಹೇಳಲಾಗುತ್ತಿದ. ಹಾಗಿದ್ದರೆ ಆ ಕಲಾವಿದರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ರಂಜನಿ ರಾಘವನ್ :- ಕನ್ನಡ ಕಿರುತೆರೆಯಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಹೊಂದಿರುವ ಕಲಾವಿದೆಯರಲ್ಲಿ ರಂಜನಿ ರಾಘವನ್ ಅವರು ಕೂಡ ಒಬ್ಬರು. ಪುಟ್ಟಗೌರಿ ಮದುವೆ ಧಾರವಾಹಿ ಇವರಿಗೆ ದೊಡ್ಡ ಹೆಸರು ಮತ್ತು ಜನಪ್ರಿಯಗೆ ತಂದುಕೊಟ್ಟಿತು, ಇತ್ತೀಚೆಗೆ ಇವರು ಕನ್ನಡತಿ ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ಇನ್ಯಾವುದೇ ಧಾರವಾಹಿಯಲ್ಲಿ ರಂಜನಿ ಅವರು ನಟಿಸಿಲ್ಲ. ಹಾಗಾಗಿ ರಂಜನಿ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬಹುದು ಎಂದು ಹೇಳಲಾಗುತ್ತಿದೆ.
ವಿಜಯ್ ಸೂರ್ಯ :- ಕನ್ನಡ ಕಿರುತೆರೆಯಲ್ಲಿ ಮಹಿಳಾ ಅಭಿಮಾನಿಗಳ ಮೆಚ್ಚಿನ ನಟ ಇವರು ಎಂದು ಹೇಳಿದರೆ ತಪ್ಪಲ್ಲ. ವಿಜಯ್ ಸೂರ್ಯ ಅವರು ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯ ನಮ್ಮ ಲಚ್ಚಿ ಧಾರವಾಹಿಯಲ್ಲಿ ಮತ್ತು ಒಂದು ತೆಲುಗು ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ. ಇವರು ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಬರಬಹುದು ಎನ್ನಲಾಗಿದೆ.
ನಮ್ರತಾ ಗೌಡ :- ಪುಟ್ಟಗೌರಿ ಮದುವೆ ಮತ್ತು ನಾಗಿಣಿ2 ಧಾರವಾಹಿ ಮೂಲಕ ನಟಿ ನಮ್ರತಾ ಅವರು ಕಿರುತೆರೆಯಲ್ಲಿ ಮನೆಮಾತಾಗಿದ್ದಾರೆ. ಈ ಹಿಂದಿನ ಕೆಲವು ಸೀಸನ್ ಗಳಲ್ಲಿ ಕೂಡ ನಮ್ರತಾ ಅವರು ಬಿಗ್ ಬಾಸ್ ಶೋಗೆ ಬರುತ್ತಾರೆ ಎಂದು ಹೇಳಲಾಗುತ್ತಿದ್ದು, ಈ ವರ್ಷ ಅವರು ಯಾವುದೇ ಧಾರವಾಹಿಯಲ್ಲಿ ನಟಿಸುತ್ತಿಲ್ಲ ಎನ್ನುವ ಕಾರಣಕ್ಕೆ ನಮ್ರತಾ ಅವರು ಬಿಗ್ ಬಾಸ್ ಮನೆಗೆ ಬರಬಹುದು ಎಂದು ಹೇಳಲಾಗುತ್ತಿದೆ.
ನಿನಾದ್ ಹರಿತ್ಸ :- ಇವರು ಕೂಡ ಜೀಕನ್ನಡ ವಾಹಿನಿಯ ನಾಗಿಣಿ2 ಧಾರವಾಹಿಯಲ್ಲಿ ಹೀರೋ ಆಗಿ ನಟಿಸಿದ್ದರು. ನಿನಾದ್ ಅವರಿಗು ಕನ್ನಡ ಕಿರುತೆರೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಸಧ್ಯಕ್ಕೆ ನಿನಾದ್ ಅವರು ಯಾವುದೇ ಧಾರವಾಹಿಯಲ್ಲಿ ನಟಿಸುತ್ತಿಲ್ಲ, ಇದೀಗ ನಿನಾದ್ ಅವರು ಬಿಗ್ ಬಾಸ್ ಮನೆಗೆ ಬರಬಹುದು ಎಂದು ಹೇಳಲಾಗುತ್ತಿದೆ.
ರಕ್ಷಕ್ ಬುಲೆಟ್ :- ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬಹುದು ಎಂದು ಹೇಳಲಾಗುತ್ತಿದೆ. ರಕ್ಷಕ್ ಇನ್ನು ಸಿನಿಮಾಗಳಲ್ಲಿ ನಟಿಸಿಲ್ಲ, ಆದರೆ ಸೋಷಿಯಲ್ ಮೀಡಿಯಾ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಹಾಗಾಗಿ ರಕ್ಷಕ್ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಬಹುದು ಎಂದು ಹೇಳಲಾಗುತ್ತಿದೆ.
ರಾಜೇಶ್ ಧ್ರುವ :- ಇವರು ಸಹ ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರವಾಹಿ ಮೂಲಕ ಮನೆಮಾತಾಗಿದ್ದರು. ನಾಯಕನ ತಮ್ಮನ ಪಾತ್ರದಲ್ಲಿ ನಟಿಸಿದ್ದರು ರಾಜೇಶ್. ಕೆಲವು ಡ್ಯಾನ್ಸ್ ಶೋಗಳಲ್ಲಿ ಕೂಡ ಭಾಗವಹಿಸಿದ್ದರು. ರಾಜೇಶ್ ಅವರು ಸಧ್ಯಕ್ಕೆ ಯಾವುದೇ ಧಾರವಾಹಿಗಳಲ್ಲಿ ನಟಿಸುತ್ತಿಲ್ಲ. ಹಾಗಾಗಿ ಇವರು ಕೂಡ ಈ ಬಾರಿ ಬಿಗ್ ಬಾಸ್ ಶೋಗೆ ಬರಬಹುದು ಎಂದು ಹೇಳಲಾಗುತ್ತಿದೆ.
ಮೇಘ ಶೆಟ್ಟಿ :- ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಸಕ್ರಿಯವಾಗಿ, ಹೆಸರು ಮಾಡಿರುವವರು ನಟಿ ಮೇಘ ಶೆಟ್ಟಿ. ಜೊತೆ ಜೊತೆಯಲಿ ಧಾರವಾಹಿ ಮೂಲಕ ಕಿರುತೆರೆಯ ಕ್ರಶ್ ಆಗಿದ್ದರು ಮೇಘಾ. ಚಂದನವನಕ್ಕೂ ಎಂಟ್ರಿ ಕೊಟ್ಟು ಗಣೇಶ್ ಅವರೊಡನೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರೊಡನೆ ಕೂಡ ಸಿನಿಮಾ ಮಾಡಿದ್ದಾರೆ. ಇವರು ಕೂಡ ಈ ಸಾರಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ..
ವಿನಯ್ ಕುಮಾರ್ :- ಇವರು ಮೂಲತಃ ಕ್ರಿಕೆಟರ್. ವಿನಯ್ ಕುಮಾರ್ ಅವರನ್ನು ದಾವಣಗೆರೆ ಎಕ್ಸ್ಪ್ರೆಸ್ ಎಂದು ಕರೆಯಲಾಗುತ್ತದೆ. ವಿನಯ್ ಕುಮಾರ್ ಅವರು ಕ್ರಿಕೆಟ್ ಇಂದ ಒಂದು ಬ್ರೇಕ್ ಪಡೆದು ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ..
ಮಿಮಿಕ್ರಿ ಗೋಪಿ :- ಚಂದನವನದಲ್ಲಿ ಇವರು ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ಮಿಮಿಕ್ರಿ ಕಲೆಯಿಂದ ಜನರನ್ನು ಸೆಳೆಯುವ ಮಿಮಿಕ್ರಿ ಗೋಪಿ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.