Bigg Boss: ಅತಿಹೆಚ್ಚು ವೋಟ್ಸ್ ಪಡೆದು ಬಿಬಿಕೆ10 ವಿನ್ನರ್ ಆಗೋ ಸ್ಪರ್ಧಿ ಇವರೇ! ಜನರ ತೀರ್ಪು ಇವೆ ಆಗಿರಬಹುದಾ?

0 16

Bigg Boss: ಬಿಗ್ ಬಾಸ್ ಮನೆಯಲ್ಲಿ ಈಗ ಫಿನಾಲೆ ವಾರ ನಡೆಯುತ್ತಿದೆ. ಮನೆಯಲ್ಲಿ 6 ಸ್ಪರ್ಧಿಗಳಿದ್ದಾರೆ. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ವಿಭಿನ್ನವಾದ ಟಾಸ್ಕ್ ಗಳನ್ನು ನೀಡಲಾಗುತ್ತಿದೆ. ಜನವರಿ 27 ಹಾಗು ಜನವರಿ 28ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳೇ ಆಗಿದ್ದು, ವಿನ್ನರ್ ಆಗೋದು ಎನ್ನುವ ಕುತೂಹಲ ಸಹ ಜಾಸ್ತಿಯಾಗಿದೆ.

ಸಾಮಾನ್ಯವಾಗಿ ಬಿಗ್ ಬಾಸ್ ಫಿನಾಲೆ ವೀಕ್ ನಲ್ಲಿ ಇರುವುದು 5 ಸ್ಪರ್ಧಿಗಳು, ಆದರೆ ಈ ಸೀಸನ್ ನಲ್ಲಿ 6 ಸ್ಪರ್ಧಿಗಳಿದ್ದಾರೆ. ಅವರುಗಳಲ್ಲಿ ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಬಹುದು ಎನ್ನಲಾಗಿತ್ತು. ಆದರೆ ಆ ರೀತಿ ನಡೆಯದೇ, 6 ಸ್ಪರ್ಧಿಗಳು ಕೂಡ ಫಿನಾಲೆಯಲ್ಲಿ ಇರಲಿದ್ದು, ಜನರ ಪ್ರೀತಿ ನೋಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಇದು ಕಿಚ್ಚ ಸುದೀಪ್ ಅವರ ನಿರ್ಧಾರ ಆಗಿದೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ.

ನಾಳೆ ಮತ್ತು ನಾಳಿದ್ದು ಬಿಗ್ ಬಾಸ್ ಕನ್ನಡ ಸೀಸನ್ 10ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ವೇಳೆ ಗೆಲ್ಲುವ ಸ್ಪರ್ಧಿ ಯಾರು ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಹೊರಗಿನ ಫ್ಯಾನ್ ಬೇಸ್ ನೋಡಿದರೆ ಅತಿಹೆಚ್ಚು ಅಭಿಮಾನಿಗಳು ಇರುವುದು ಸಂಗೀತ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ ಅವರಿಗೆ. ಇವರಿಬ್ಬರ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿ ಗೆಲ್ಲಲಿ ಎಂದು ಬಹಳ ಸಪೋರ್ಟ್ ಮಾಡುತ್ತಿದ್ದಾರೆ.

ಇಬ್ಬರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದಾರೆ. ಇವರಿಬ್ಬರಿಗೆ ಅತಿಹೆಚ್ಚು ವೋಟ್ಸ್ ಬರುವುದು ಎಂದು ಕೂಡ ಹೇಳಲಾಗುತ್ತಿದ್ದು, ಹೊರಗಿನ ಲೆಕ್ಕಾಚಾರದ ಪ್ರಕಾರ ಸಂಗೀತ ಅಥವಾ ಕಾರ್ತಿಕ್ ಇಬ್ಬರಲ್ಲಿ ಒಬ್ಬರು ಗೆಲ್ಲಬಹುದು ಎನ್ನುವ ಅಭಿಪ್ರಾಯವಿದೆ. ಇತ್ತ ಅಭಿಮಾನಿಗಳು, ಇಬ್ಬರು ಅರ್ಹತೆ ಇರುವ ಸ್ಪರ್ಧಿಗಳೇ, ಇಬ್ಬರಲ್ಲಿ ಯಾರು ಗೆದ್ದರು ಸಂತೋಷವೇ ಎನ್ನುತ್ತಿದ್ದಾರೆ. ಈ ಕುತೂಹಲಕ್ಕೆ ತೆರೆ ಬೀಳಲು ಉಳಿದಿರುವುದು ಕೇವಲ 2 ದಿನಗಳು ಮಾತ್ರ. ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.