Bigg Boss: ಬಿಗ್ ಬಾಸ್ ವಿನ್ನರ್ ಇವರೇ! ಸುಳಿವು ಕೊಟ್ಟ ಕಿಚ್ಚ!

0 17

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10 ನೇ ಗ್ರ್ಯಾಂಡ್ ಫಿನಾಲೆ ನಿನ್ನೆಯಷ್ಟೇ ಶುರುವಾಗಿದೆ. ಫಿನಾಲೆ ವೀಕ್ ನಲ್ಲಿ 6 ಜನ ಸ್ಪರ್ಧಿಗಳಿದ್ದರು, ವಿನಯ್, ಕಾರ್ತಿಕ್, ತುಕಾಲಿ ಸಂತೋಷ್, ಸಂಗೀತ, ವರ್ತೂರ್ ಸಂತೋಷ್ ಹಾಗೂ ಪ್ರತಾಪ್ ಇದ್ದರು. ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆ ಶನಿವಾರದ ಸಂಚಿಕೆಯಲ್ಲಿ ಸುದೀಪ್ ಅವರು ಅದ್ಭುತವಾಗಿ ಕಾರ್ಯಕ್ರಮ ನಡೆಸಿಕೊಟ್ಟು, ಒಬ್ಬರನ್ನು ಎಲಿಮಿನೇಟ್ ಮಾಡಿದರು.

ತುಕಾಲಿ ಸಂತೋಷ್ ಅವರು 6ನೇ ಸ್ತಾನದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇನ್ನುಳಿದ ಎಲಿಮಿನೇಷನ್ ಗಳು ಇಂದಿನ ಎಪಿಸೋಡ್ ನಲ್ಲಿ ನಡೆಯಲಿದ್ದು, ಕೆಲವು ಫೇಕ್ ಸುದ್ದಿಗಳು ನಿನ್ನೆಯಿಂದ ಕೇಳಿಬರುತ್ತಲೇ ಇದೆ. ನಿನ್ನೆಯ ಸಂಚಿಕೆಯಲ್ಲಿ ಸುದೀಪ್ ಅವರು ಒಂದಷ್ಟು ವಿಚಾರಗಳನ್ನು ಚರ್ಚೆ ಮಾಡಿದರು, ಆ ವೇಳೆ ಈ ಸೀಸನ್ ವಿನ್ನರ್ ಯಾರು ಎನ್ನುವ ಸುಳಿವನ್ನು ಸುದೀಪ್ ಅವರು ನೀಡಿದ್ದಾರೆ.

ಸ್ಪರ್ಧಿಗಳ ಕ್ರೇಜ್ ಹೊರಗಡೆ ಹೇಗಿದೆ ಎನ್ನುವುದನ್ನು ಒಂದು ವಿಟಿ ಮೂಲಕ ಸ್ಪರ್ಧಿಗಳಿಗೆ ತೋರಿಸಲಾಯಿತು. ಎಲ್ಲಾ ಸ್ಪರ್ಧಿಗಳಿಗೆ ಅವರ ಬಗ್ಗೆ ಜನರಲ್ಲಿ ಇರುವ ಕ್ರೇಜ್ ಬಗ್ಗೆ ತೋರಿಸಲಾಯಿತು. ಎಲ್ಲರ ಜೊತೆಗೂ ಇದರ ಬಗ್ಗೆ ಮಾತನಾಡಿದ ಸುದೀಪ್ ಅವರು ಕಾರ್ತಿಕ್ ಅವರ ಹತ್ತಿರ ಕೇಳಿದಾಗ, ಕಾರ್ತಿಕ್ ಅವರು ಭಾವುಕರಾಗಿ ಮಾತನಾಡಿದರು. ಆಗ ಸುದೀಪ್ ಅವರು ಮಾತನಾಡಿ, ಕೂಲ್ ಆಗಿರಿ ಕಾರ್ತಿಕ್, ಹೊರಗಡೆ ಬನ್ನಿ ಪಾರ್ಟಿ ಮಾಡಿ..

ಎಂಜಾಯ್ ಮಾಡಿ.. ಎಂದು ಹೇಳಿದರು. ಈ ಮಾತುಗಳನ್ನು ಕೇಳಿದ ಜನರು ಹಾಗೂ ನೆಟ್ಟಿಗರು ಹಾಗಿದ್ರೆ ಸುದೀಪ್ ಅವರು ಕಾರ್ತಿಕ್ ಅವರೇ ವಿನ್ನರ್ ಅಂತ ಸುಳಿವು ನೀಡಿದ್ದಾರ ಎಂದು ಜನರಲ್ಲಿ ಪ್ರಶ್ನೆಯೊಂದು ಶುರುವಾಗಿದೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಕೂಡ ಕಾರ್ತಿಕ್ ಅವರೇ ಗೆಲ್ಲಬೇಕು, ಬಡವರ ಮನೆ ಹುಡುಗ ಗೆಲ್ಲಬೇಕು ಎನ್ನಲಾಗುತ್ತಿದ್ದು, ಮೂಲಗಳ ಪ್ರಕಾರ ಕಾರ್ತಿಕ್ ಅವರೇ ಗೆಲ್ಲಬಹುದು ಎಂದು ಕೂಡ ಹೇಳಲಾಗುತ್ತಿದೆ. ಇದು ನಿಜವೇ ಎಂದು ಅಧಿಕೃತವಾಗಿ ತಿಳಿಯಲು, ಇಂದಿನ ಫಿನಾಲೆ ಎಪಿಸೋಡ್ ನೋಡಬೇಕಿದೆ.

Leave A Reply

Your email address will not be published.