Bigg Boss: ಬಿಗ್ ಬಾಸ್ ಇಂದ ಬಂದ ಹಣವನ್ನ ಕಾರ್ತಿಕ್ ಏನು ಮಾಡುತ್ತಾರಂತೆ ಗೊತ್ತಾ?

0 15

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ನಿನ್ನೆ ತೆರೆಬಿದ್ದಿದೆ. ಟಾಪ್ 6 ಫೈನಲಿಸ್ಟ್ ಆಗಿ ತುಕಾಲಿ ಸಂತೋಷ್, ವರ್ತೂರ್ ಸಂತೋಷ್, ವಿನಯ್, ಸಂಗೀತ, ಪ್ರತಾಪ್ ಹಾಗೂ ಕಾರ್ತಿಕ್ ಇದ್ದರು. ಇವರುಗಳ ಪೈಕಿ ಕಾರ್ತಿಕ್ ಮಹೇಶ್ ಅವರು ವಿನ್ ಆಗಿದ್ದಾರೆ. ಬಿಬಿಕೆ10 ವಿನ್ನರ್ ಟ್ರೋಫಿ ಈಗ ಕಾರ್ತಿಕ್ ಅವರ ಪಾಲಾಗಿದೆ..

ಈ ಬಾರಿ ಫಿನಾಲೆ ಎಪಿಸೋಡ್ ಹಾಗೂ ಎಲಿಮಿನೇಷನ್ ಪ್ರಕ್ರಿಯೆಗಳು ಎಲ್ಲವೂ ಸಹ ವಿಭಿನ್ನವಾಗಿತ್ತು. ಟಾಪ್ 3 ನಲಿ ಸಂಗೀತ, ಕಾರ್ತಿಕ್ ಹಾಗೂ ಪ್ರತಾಪ್ ಇದ್ದರು. ಈ ಮೂವರನ್ನು ಕೂಡ ಬಿಗ್ ಬಾಸ್ ವೇದಿಕೆಗೆ ಕರೆದುಕೊಂಡು ಬಂದರು ಸುದೀಪ್. ಮೂವರ ಪೈಕಿ ಸಂಗೀತ ಅವರು ಮೂರನೇ ಸ್ಥಾನ ಪಡೆದುಕೊಂಡರೆ, ಟಾಪ್ 2 ನಲ್ಲಿ ಕಾರ್ತಿಕ್ ಹಾಗೂ ಪ್ರತಾಪ್ ಇದ್ದರು.

ಇವರಿಬ್ಬರ ಪೈಕಿ ಕಾರ್ತಿಕ್ ಅವರು ವಿನ್ನರ್ ಆಗಿದ್ದು, ಪ್ರತಾಪ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಕಾರ್ತಿಕ್ ಅವರಿಗೆ 50 ಲಕ್ಷ, ಬ್ರೆಜಾ ಕಾರ್ ಹಾಗೂ ಇನ್ನಿತರ ಬಹುಮಾನಗಳು ಸಿಕ್ಕಿದೆ. ಬಿಗ್ ಬಾಸ್ ಇಂದ ಸಿಕ್ಕಿರುವ ಹಣವನ್ನು ಕಾರ್ತಿಕ್ ಏನು ಮಾಡುತ್ತಾರಂತೆ ಗೊತ್ತಾ? ತಮ್ಮ ಕನಸನ್ನು ಖುದ್ದು ಕಾರ್ತಿಕ್ ಅವರೇ ಬಿಗ್ ಬಾಸ್ ವೇದಿಕೆಯ ಮೇಲೆ ಹೇಳಿಕೊಂಡಿದ್ದಾರೆ.

ಕಾರ್ತಿಕ್ ಅವರು ತಮ್ಮ ತಾಯಿಯನ್ನು ದೇವರ ಹಾಗೆ ಪ್ರೀತಿ ಮಾಡುತ್ತಾರೆ. ಹಾಗಾಗಿ ತಮ್ಮ ತಾಯಿಗಾಗಿ ದೇವಸ್ಥಾನ ಕಟ್ಟಿಸಬೇಕು ಎಂದುಕೊಂಡಿದ್ದಾರಂತೆ ಕಾರ್ತಿಕ್, ಅಂದರೆ ತಮ್ಮ ತಾಯಿಗಾಗಿ ಒಂದು ಸ್ವಂತ ಮನೆ ಕಟ್ಟಿಸಿಕೊಡಬೇಕು ಎಂದು ಹೇಳಿದ್ದಾರೆ. ಕಾರ್ತಿಕ್ ಅವರ ಕನಸಿನ ಹಾಗೆ ಅಮ್ಮನಿಗೆ ಮನೆ ಮಾಡಿಕೊಡುವ ಪ್ಲಾನ್ ಮಾಡಿಕೊಂಡಿದ್ದಾರೆ.

Leave A Reply

Your email address will not be published.