Bigg Boss: ಟಾಸ್ಕ್ ವಿಚಾರಕ್ಕೆ ಪ್ರತಾಪ್ ಮೇಲೆ ಕಿರುಚಾಡಿದ ಕಾರ್ತಿಕ್, ಇದು ಸರಿಯಿಲ್ಲ ಎಂದ ನೆಟ್ಟಿಗರು!

0 1

Bigg Boss: ಬಿಗ್ ಬಾಸ್ ಮನೆವಾರದಿಂದ ವಾರಕ್ಕೆ ಬದಲಾಗುತ್ತಲೇ ಇದೆ. ನಿನ್ನೆ ಮೊನ್ನೆ ಬೆಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಿದ್ದವರು ಒಂದು ವೈರಿಗಳ ಹಾಗೆ ಮಾತನಾಡುತ್ತಿದ್ದಾರೆ. ಈ ವಾರದ ಟಾಸ್ಕ್ ನಲ್ಲಿ ತಂಡಗಳು ಕೂಡ ಬದಲಾಗಿದೆ. ಖುದ್ಧು ಬಿಗ್ ಬಾಸ್ ತಂಡ ರಚಿಸಿದ್ದು, ಅನಿರೀಕ್ಷಿತ ವ್ಯಕ್ತಿಗಳು ಒಂದು ತಂಡದಲ್ಲಿ ನಿನ್ನೆ ಜೊತೆಯಾಗಿದ್ದಾರೆ. ಮನೆಯ ಕ್ಯಾಪ್ಟನ್ ಕಾರ್ತಿಕ್ ಆಗಿದ್ದು, ಅವರ ತಂಡ ಸಂಪತ್ತಿಗೆ ಸವಾಲ್. ಈ ತಂಡದಲ್ಲಿ ಕಾರ್ತಿಕ್, ಮೈಕಲ್, ತನಿಷಾ, ನೀತು, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಇದ್ದಾರೆ.

ಈ ತಂಡದ ಕ್ಯಾಪ್ಟನ್ ಮೈಕಲ್ ಆಗಿದ್ದಾರೆ. ಮತ್ತೊಂದು ತಂಡದಲ್ಲಿ ವಿನಯ್, ಸಂಗೀತ, ನಮ್ರತಾ, ಸಿರಿ, ಸ್ನೇಹಿತ್, ಪ್ರತಾಪ್ ಇದ್ದಾರೆ. ಈ ತಂಡದ ಹೆಸರು ಗಜಕೇಸರಿ ಆಗಿದ್ದು ಈ ತಂಡಕ್ಕೆ ಕ್ಯಾಪ್ಟನ್ ಸಂಗೀತ ಆಗಿದ್ದಾರೆ. ಎರಡು ತಂಡಗಳಿಗೆ ಬಿಗ್ ಬಾಸ್ ಮೊನ್ನೆ ಒಂದು ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಒಂದು ತಂಡದವರು ಮತ್ತೊಂದು ತಂಡಕ್ಕೆ ಟಾಸ್ಕ್ ನೀಡಬೇಕಿತ್ತು, ಟಾಸ್ಕ್ ಆಡುತ್ತಾರೋ ಇಲ್ಲವೋ ಎನ್ನುವುದನ್ನು ಆಯಾ ತಂಡಗಳು ನಿರ್ಧರಿಸಬೇಕಿತ್ತು. ಈ ಟಾಸ್ಕ್ ನಲ್ಲಿ ಕಾರ್ತಿಕ್ ಮತ್ತು ತುಕಾಲಿ ಅವರಿಗೆ ಕೂದಲು ಶೇವ್ ಮಾಡುವ ಟಾಸ್ಕ್ ನೀಡಲಾಯಿತು.

ಈ ಟಾಸ್ಕ್ ಒಪ್ಪಿಕೊಂಡು ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ಪೂರ್ತಿ ಕೂದಲನ್ನು ಶೇವ್ ಮಾಡಿಕೊಂಡರು. ನಂತರ ಸಂಗೀತ ಮತ್ತು ವರ್ತೂರ್ ಸಂತೋಷ್ ಅವರಿಗೆ 20 ಮೆಣಸಿನಕಾಯಿ ಗಳನ್ನು ತಿನ್ನುವ ಟಾಸ್ಕ್ ಕೊಡಲಾಯಿತು, ಇಬ್ಬರು ಇದನ್ನು ಮಾಡಿದರು. ಹೀಗೆ ಟಾಸ್ಕ್ ಗಳನ್ನು ಮಾಡಿ, ಮೊನ್ನೆ ಸಂಚಿಕೆಯಲ್ಲಿ ಸಂಪತ್ತಿಗೆ ಸವಾಲ್ ತಂಡ ಗೆದ್ದಿದೆ, ಗಜಕೇಸರಿ ತಂಡ ಸೋತಿದೆ. ನಿನ್ನೆಯ ಸಂಚಿಕೆಯಲ್ಲಿ ಕೂಡ ಒಂದಷ್ಟು ಟಾಸ್ಕ್ ಗಳನ್ನು ನೀಡಲಾಯಿತು.

ಟಾಸ್ಕ್ ನಡೆಯುವುದರ ಜೊತೆಗೆ ಮನೆಯವರ ಕೋಪ, ಅಗ್ರೇಷನ್ ಕೂಡ ಜಾಸ್ತಿ ಆಗುತ್ತಿದೆ ಎಂದರೆ ತಪ್ಪಲ್ಲ. ಇಂದಿನ ಸಂಚಿಕೆಯ ಪ್ರೊಮೋವನ್ನು ಕಲರ್ಸ್ ಕನ್ನಡ ಚಾನೆಲ್ ಬಿಡುಗಡೆ ಮಾಡಿದ್ದು, ಇದರಲ್ಲಿ ಟಾಸ್ಕ್ ಒಂದನ್ನು ಕೊಡಲಾಗಿದ್ದು, ಗಜಕೇಸರಿ ತಂಡದ ಪರವಾಗಿ ಉಸ್ತುವಾರಿ ಕೆಲಸವನ್ನು ಪ್ರತಾಪ್ ವಹಿಸಿಕೊಂಡಿದ್ದಾರೆ. ತನಿಷಾ ಮತ್ತು ಕಾರ್ತಿಕ್ ಟಾಸ್ಕ್ ಮಾಡಿದ ರೀತಿ ತಪ್ಪಿತ್ತು ಎಂದು ಪ್ರತಾಪ್ ಹೇಳಿದ್ದಾರೆ..

ಪ್ರತಾಪ್ ಹೀಗೆ ಹೇಳುತ್ತಿದ್ದ ಹಾಗೆಯೇ ಬ್ಲಾಸ್ಟ್ ಆಗಿರುವ ಕಾರ್ತಿಕ್ ಪ್ರತಾಪ್ ಮೇಲೆ ಕಿರುಚಾಡಿ, ರೇಗಾಡುವುದಕ್ಕೆ ಶುರು ಮಾಡಿದ್ದಾರೆ. ಮತ್ತೊಂದು ಪ್ರೋಮೋದಲ್ಲಿ ಕಾರ್ತಿಕ್ ವಿನಯ್ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವೇ ಆಗಿದೆ. ಒಟ್ಟಿನಲ್ಲಿ ಕ್ಯಾಪ್ಟನ್ ಆದ ನಂತರ ಕಾರ್ತಿಕ್ ಅವರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Leave A Reply

Your email address will not be published.