Bigg Boss: ಬಿಗ್ ಬಾಸ್ ಕಾರ್ತಿಕ್ ಮಹೇಶ್ ಅವರ ನಿಜವಾದ ಗರ್ಲ್ ಫ್ರೆಂಡ್ ಯಾರು ಗೊತ್ತಾ?

0 13

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಅಸಮರ್ಥನಾಗಿ ಮನೆಗೆ ಬಂದು, ಇಂದು ಫಿನಾಲೆ ತಲುಪಿರುವ ಸ್ಪರ್ಧಿ ಕಾರ್ತಿಕ್ ಮಹೇಶ್. ಇವರಿಗೆ ಬಿಗ್ ಬಾಸ್ ಇಂದ ಭಾರಿ ಯಶಸ್ಸು ಸಿಕ್ಕಿದೆ. ದೊಡ್ಡ ಅಭಿಮಾನಿ ಬಳಗೆ ಕೂಡ ಸಿಕ್ಕಿದೆ. ಬಹಳಷ್ಟು ಜನರು ಕಾರ್ತಿಕ್ ಗೆಲ್ಲಬೇಕು ಎಂದು ಪ್ರೊಮೋಟ್ ಮಾಡುತ್ತಿದ್ದಾರೆ. ಇಂಥ ಕಾರ್ತಿಕ್ ಅವರ ರಿಯಲ್ ಲೈಫ್ ಗರ್ಲ್ ಫ್ರೆಂಡ್ ಯಾರು ಗೊತ್ತಾ? ತಿಳಿಸುತ್ತೇವೆ ನೋಡಿ..

ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಮನೆಯೊಳಗೆ ಹುಡುಗಿಯರ ವಿಚಾರಕ್ಕೆ ಹೆಚ್ಚು ಸುದ್ದಿಯಾದರು ಎಂದರೆ ತಪ್ಪಲ್ಲ. ಮೊದಲಿಗೆ ಸಂಗೀತ ಅವರ ಜೊತೆಗೆ ಸ್ನೇಹ ಫ್ರೆಂಡ್ಶಿಪ್, ಎಲ್ಲವೂ ಚೆನ್ನಾಗಿತ್ತು. ಈ ಜೋಡಿಯನ್ನ ಜನರು ಕೂಡ ಇಷ್ಟಪಡುತ್ತಿದ್ದರು. ಆದರೆ ಇವರಿಬ್ಬರ ನಡುವೆ ಬಿರುಕು, ವೈಮನಸ್ಸು ಶುರುವಾಗಿತ್ತು. ಬಳಿಕ ಕಾರ್ತಿಕ್ ಅವರು ತನಿಷಾ ಅವರೊಡನೆ ಬೆಸ್ಟ್ ಫ್ರೆಂಡ್ ಎನ್ನುವ ಹಾಗಿದ್ದರು, ನಂತರ ನಮ್ರತಾ ಅವರ ಜೊತೆಗೆ ಕೂಡ ಫ್ಲರ್ಟ್ ಮಾಡುತ್ತಿದ್ದರು.

ನಮ್ರತಾ ಕಾರ್ತಿಕ್ ಫ್ಲರ್ಟಿಂಗ್ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗಿತ್ತು. ಬಿಗ್ ಬಾಸ್ ಮನೆಗೆ ಬರುವಾಗಲೇ ಕಾರ್ತಿಕ್ ಅವರು ತಮ್ಮ ತಾಯಿಗೆ ಸೊಸೆಯನ್ನು ಹುಡುಕಿ ಕರೆದುಕೊಂಡು ಬರುತ್ತೇನೆ ಎಂದು ಕೂಡ ಹೇಳಿದ್ದರು. ಒಟ್ಟಿನಲ್ಲಿ ಫ್ರೆಂಡ್ಶಿಪ್ ಲವ್ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದ ಕಾರ್ತಿಕ್ ಅವರ ರಿಯಲ್ ಲೈಫ್ ಗರ್ಲ್ ಫ್ರೆಂಡ್ ಬಗ್ಗೆ ಈಗ ಸುದ್ದಿಯಾಗುತ್ತಿದೆ. ಹೌದು, ಕಾರ್ತಿಕ್ ಅವರ ರಿಯಲ್ ಲೈಫ್ ಗರ್ಲ್ ಫ್ರೆಂಡ್ ಯಾರು?

ಆಕೆ ಮತ್ಯಾರು ಅಲ್ಲ, ನಟಿ ರಶಿಕಾ ಶೆಟ್ಟಿ. ಇವರು ಕಾರ್ತಿಕ್ ಮಹೇಶ್ ಜೊತೆಗಿರುವ ಫೋಟೋಸ್ ಶೇರ್ ಮಾಡಿದಾಗಿನಿಂದ ಕಾರ್ತಿಕ್ ಅವರ ಗರ್ಲ್ ಫ್ರೆಂಡ್ ಇವರೇ ಇರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರಶಿಕಾ ಅವರಾಗಲಿ, ಕಾರ್ತಿಕ್ ಅವರಾಗಲಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಕಾರ್ತಿಕ್ ಬಿಗ್ ಬಾಸ್ ಶೋ ಇಂದ ಹೊರಬಂದಮೇಲೆ ಗೊತ್ತಾಗುತ್ತಾ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.