Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಶುರುವಾಗಿ 11 ದಿನ ಕಳೆದಿದೆ, ಆದರೆ ಈಗಾಗಲೇ ಜಗಳಗಳ ಬಿಸಿ ಬಹಳ ಜೋರಾಗಿದೆ ಎಂದರೆ ತಪ್ಪಲ್ಲ. ಅದರಲ್ಲು ವಿನಯ್ ಗೌಡ ಮತ್ತು ಸಂಗೀತ ನಡುವೆ ಆಗುತ್ತಿರುವ ಮನಸ್ತಾಪ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ ಹೊರತು ಕಡಿಮೆ ಅಂತೂ ಆಗುತ್ತಿಲ್ಲ. ಈ ವಿಚಾರ ಬಿಗ್ ಬಾ ಮನೆಯಲ್ಲಿ ಭಾರಿ ಸಂಚಲನ ಸೃಷ್ಟಿಸುವುದರ ಜೊತೆಗೆ ಕಾರ್ತಿಕ್ ಅವರು ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಬಹುದು..
ಈ ಜಗಳ ಮತ್ತು ಮನಸ್ತಾಪ ಶುರುವಾಗಿದ್ದು ಮೊದಲ ವಾರದ ನಾಮಿನೇಷನ್ ದಿನದಿಂದ, ಆ ದಿನ ಸಂಗೀತ ಅವರನ್ನು ನಾಮಿನೇಟ್ ಮಾಡಿ ಅದಕ್ಕೆ ವಿನಯ್ ಅವರು ಕೊಟ್ಟ ಕಾರಣಕ್ಕೆ ಸಂಗೀತ ಕೋಪಗೊಂಡಿದ್ದರು. ಅಂದಿನಿಂದ ಇವರಿಬ್ಬರ ನಡುವೆ ಒಂದಲ್ಲಾ ಒಂದು ವಿಚಾರಕ್ಕೆ ಜಗಳ ಆಗುತ್ತಲೇ ಇದೆ. ವಿನಯ್ ಅವರು ತಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅನ್ನಿಸಿ, ಕಣ್ಣೀರು ಹಾಕಿದ್ದರು.
ಮೊನ್ನೆಯಷ್ಟೇ ಸಂಗೀತ ಅವರು ವಿನಯ್ ಅವರ ಮಾತಿನಿಂದ ತಮಗೆ ಡೇಂಜರ್ ಅನ್ನಿಸುತ್ತಿದೆ ಎಂದು ಹೇಳಿ, ಪ್ರತಾಪ್ ಅವರು ಕೂಡ ವಿನಯ್ ಅವರು ಸ್ವಲ್ಪ ಧ್ವನಿ ತಗ್ಗಿಸಿ ಮಾತನಾಡಬೇಕು ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ವಿನಯ್, ತಮ್ಮ ಧ್ವನಿ ಇರೋದೆ ಹಾಗೆ ಯಾರಿಗೊಸ್ಕರ ಕೂಡ ಬದಲಾಯಿಸಿಕೊಳ್ಳೋದಿಲ್ಲ, ಇಷ್ಟ ಇಲ್ಲದೆ ಹೋದರೆ ಕಿವಿ ಮುಚ್ಚಿಕೊಳ್ಳಬಹುದು ಎಂದು ಹೇಳಿದ್ದರು.
ನಿನ್ನೆಯ ಎಪಿಸೋಡ್ ನಲ್ಲಿ ಸಂಗೀತ ಕಾರ್ತಿಕ್ ಇದ್ದ ರಣಶಕ್ತಿ ಶಕ್ತಿ ಒಟ್ಟೊಟ್ಟಿಗೆ ಎರಡು ಟಾಸ್ಕ್ ಗಳನ್ನು ಗೆದ್ದಿತು. ಟಾಸ್ಕ್ ನಡುವೆ ಕೂಡ ಕೆಲವು ಜಗಳ ನಡೆಯಿತು. ಆದರೆ ಎಲ್ಲಾ ಟಾಸ್ಕ್ ಮುಗಿದ ಬಳಿಕ ಭಾಗ್ಯಶ್ರೀ ಅವರು ವಿನಯ್ ಅವರ ಹತ್ತಿರ ಬಂದು, ಸಂಗೀತ ಡಿಪ್ರೆಷನ್ ಗೆ ಹೋಗ್ತಿದ್ದಾರೆ, ನನ್ನ ಮನೆಗೆ ಕಳಿಸಿ ಅಂತ ಕ್ಯಾಮೆರಗಳ ಮುಂದೆ ಕೇಳಿಕೊಳ್ತಾ ಇದ್ದಾರೆ, ಒಬ್ಬ ಫ್ರೆಂಡ್ ಆಗಿ ನೀವು ಅವರ ಬಗ್ಗೆ ಕೇಳಲ್ವ, ಕ್ಲಿಯರ್ ಮಾಡಿಕೊಳ್ಳಲ್ವ ಎಂದು ಕೇಳಿದರು.
ಆ ಮಾತಿಗೆ ವಿನಯ್ ಸಿಕ್ಕಾಪಟ್ಟೆ ರಿಯಾಕ್ಟ್ ಆಗಿ, ಕಾರ್ತಿಕ್ ಅವರ ಹತ್ತಿರ ಬಂದು, ಸಂಗೀತ ಇರುವ ಕಡೆಗೆ ಬಂದು ಕೂಗಾಡಿದ್ದರು. ಅವಳು ಯಾರು ಅಂತ ನಾನು ಅವಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು, ಅವಳಿಗೆ ನನ್ಮೇಲೆ ಏನು ಲವ್ ಆಗಿದ್ಯಾ, ನನ್ನ ಕುಟುಂಬ ನನ್ನ ಜನ ನನ್ನ ಮಗ ನೋಡ್ತಾ ಇರ್ತಾರೆ, ನನ್ ಬಗ್ಗೆ ಏನಂತ ಅಂದುಕೊಳ್ತಾರೆ ಎಂದು ಕಣ್ಣೀರು ಹಾಕಿದ್ದರು. ಇತ್ತ ಸಂಗೀತ ಕೂಡ ಪ್ರತ್ಯುತ್ತರ ಕೊಟ್ಟಿದ್ದರು.
ಈ ಜಗಳ ಇಂದು ಕೂಡ ಮುಂದುವರೆದಿದ್ದು, ವಿನಯ್ ಕಾರ್ತಿಕ್ ಹತ್ತಿರ ಬಂದು ಅವಳ ಪ್ರಾಬ್ಲಮ್ ಏನು ಎನ್ನುವ ರೀತಿ ಕಿರುಚಾಡಿದ್ದಾರೆ, ಆಗ ಸಂಗೀತ ಕಾರ್ತಿಕ್ ವಿನಯ್ ಹತ್ತಿರ ಬಂದು ಎದುರುಗಡೆ ಕೂತು ಮಾತನಾಡಿ, ನಿಮ್ಮ ಮಾತು ಡೇಂಜರ್ ಅನ್ನಿಸುತ್ತಿದೆ ನನಗೆ ಎಂದು ಡೈರೆಕ್ಟ್ ಆಗಿ ಹೇಳಿದ್ದಾರೆ ಸಂಗೀತ. ಇದಕ್ಕೆ ವಿನಯ್ ಕಾರ್ತಿಕ್ ಅವರ ಕಡೆ ತಿರುಗಿ ನನ್ನ ಮಾತು ಕೇಳಿಸಿದ್ರೆ ಕಿವಿ ಮುಚ್ಚಿಕೊಳ್ಳೋಕೆ ಹೇಳು, ನನ್ನಿಂದ ದೂರ ಇರೋದಕ್ಕೆ ಹೇಳು ಎಂದು ಹೇಳುತ್ತಾರೆ.
ನಂತರ ಸಂಗೀತ ಕಡೆ ನೋಡಿ, ನನ್ನನ್ನ ನಿಮ್ಮ ತಲೆಯಿಂದ ಡಿಲೀಟ್ ಮಾಡ್ಬಿಡಿ ಎಂದು ಹೇಳುತ್ತಾರೆ. ಆಗ ಸಂಗೀತ ಸ್ಟೋರ್ ಆಗಿದ್ರೆ ಡಿಲೀಟ್ ಮಾಡಬಹುದು ಎಂದು ಹೇಳುತ್ತಾರೆ. ಈ ಮಾತುಗಳ ಮಧ್ಯೆ ಸಿಕ್ಕಿಹಾಕಿಕೊಂಡಿರೋದು ಕಾರ್ತಿಕ್ ಅವರು ಎಂದು ಹೇಳಬಹುದು. ಇಂದು ಈ ಜಗಳ ಯಾವ ಮಟ್ಟಕ್ಕೆ ತಲುಪುತ್ತದೆ ಎಂದು ಕಾದು ನೋಡಬೇಕಿದೆ.