Bigg Boss: ಬಿಗ್ ಬಾಸ್ ಶೋ ಎಂದರೆ ಅದರಲ್ಲಿ ಸೂಪರ್ ಮನರಂಜನೆ ಸಿಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಬಿಗ್ ಬಾಸ್ ಶೋ ಅಂದ್ರೆ ಹಾಗೆ, ಅಲ್ಲಿ ಜಗಳ, ಮನಸ್ತಾಪ, ಮುನಿಸು, ಸ್ನೇಹ, ಪ್ರೀತಿ ಎಲ್ಲವು ಇರುತ್ತದೆ. ಈ ಸೀಸನ್ ನಲ್ಲಿ ಕೂಡ ಲವ್, ಫ್ರೆಂಡ್ಶಿಪ್ ಸ್ಟೋರಿ ಮುಂದುವರೆಯುತ್ತಿದೆ ಎಂದು ಹೇಳಿದರೆ ತಪ್ಪಲ್ಲ. ಈ ಬಾರಿ ಇಶಾನಿ ಮತ್ತು ಮೈಕಲ್ ನಡುವೆ ಒಂದು ಲಬ್ ಸ್ಟೋರಿ ನಡೆಯುತ್ತಿದೆ..
ಮತ್ತೊಂದೆಡೆ ಸ್ನೇಹಿತ್ ಗೆ ನಮ್ರತಾ ಅವರ ಮೇಲೆ ಲವ್ ಆಗಿರುವ ಹಾಗಿದೆ. ಇನ್ನೊಂದು ಕಡೆ ಕಾರ್ತಿಕ್ ಹಾಗೂ ಸಂಗೀತ ಲವ್ ಸ್ಟೋರಿ. ಇವರಿಬ್ಬರು ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಾ ಫ್ರೆಂಡ್ ಆಗಿದ್ದರು ಕೂಡ ಅವರ ಸಂಬಂಧದ ಕ್ಲಾರಿಟಿ ಕೊಟ್ಟಿರಲಿಲ್ಲ. ಇದೀಗ ಇವರ ಫ್ರೆಂಡ್ಶಿಪ್ ಗೆ ಇಬ್ಬರು ಕ್ಲಾರಿಟಿ ಕೊಟ್ಟಿದ್ದಾರೆ. ಎಲ್ಲರೂ ಕೂತು ಮಾತನಾಡುವಾಗ ಈ ವಿಚಾರವು ಬೆಳಕಿಗೆ ಬಂದಿದೆ..
ಸಂಗೀತ, ಕಾರ್ತಿಕ್, ಭಾಗ್ಯಶ್ರೀ, ಸ್ನೆಹಿತ್ ಎಲ್ಲರೂ ಕೂತು ಮಾತನಡುವಾಗ ನಿನಗೆ ಯಾರಾದರೂ ಪ್ರೊಪೋಸ್ ಮಾಡಿದ್ದಾರಾ ಎಂದು ಸಂಗೀತ ಅವರನ್ನು ಕೇಳುತ್ತಾರೆ. ಆಗ ಸಂಗೀತ ಅವರು ನನಗೆ ಯಾರು ಪ್ರೊಪೋಸ್ ಅಂತ ಮಾಡಿಲ್ಲ, ಯಾರು ಪ್ರೊಪೋಸ್ ಮಾಡೋದು ನನಗೆ ಇಷ್ಟ ಕೂಡ ಇಲ್ಲ, ನನಗೆ ಅವರು ಇಷ್ಟ ಆಗಬೇಕು. ಅದು ಮನಸ್ಸಿಗೆ ಅರ್ಥ ಆಗಬೇಕು, ಅವರು ನನಗೆ ಪ್ರೊಪೋಸ್ ಮಾಡ್ತಾರೆ ಅಂದ್ರೆ ಬೇರೆಯವರಿಗೂ ಮಾಡಬಹುದು. ಅದೆಲ್ಲಾ ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ ಸಂಗೀತ.
ಇನ್ನು ಕಾರ್ತಿಕ್ ಅವರನ್ನು ಕೂಡ ಎಲ್ಲರೂ ಪ್ರಶ್ನೆ ಜೇಳಿದ್ದು, ಸಂಗೀತ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿರುವ ಕಾರ್ತಿಕ್, ನಾವು ತುಂಬಾ ಕ್ಲೋಸ್ ಆಗಿದ್ದೀವಿ, ನನಗೆ ಸಂಗೀತ ಅಂದ್ರೆ ತುಂಬಾ ಇಷ್ಟ ಆದರೆ ಅದು ಫ್ರೆಂಡ್ ಆಗಿ ಎಂದು ಕಾರ್ತಿಕ್ ಹೇಳಿದ್ದಾರೆ. ಈ ರೀತಿಯಲ್ಲಿ ಇಬ್ಬರು ಕೂಡ ತಮ್ಮ ಫ್ರೆಂಡ್ಶಿಪ್ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. ಆದರೆ ಹೊರಗಿನ ನೆಟ್ಟಿಗರಿಗೆ ಈ ಉತ್ತರ ಸರಿ ಅನ್ನಿಸಿಲ್ಲ..
ಏಕೆಂದರೆ ಈ ಜೋಡಿ ಯಾವಾಗಲೂ ಜೊತೆಯಾಗಿದ್ದು, ಪ್ರೀತಿಸುವ ವ್ಯಕ್ತಿಗಳ ಹಾಗೆಯೇ ವರ್ತಿಸುತ್ತಾರೆ. ಇಬ್ಬರ ನಡುವೆ ಕಾಳಜಿ, ಪ್ರೀತಿ ಎಲ್ಲವೂ ಇದೆ. ಕಾರ್ತಿಕ್ ಅವರಲ್ಲಿ ಒಂದು ಸಣ್ಣ ಬದಲಾವಣೆ ಆದರೂ ಕೂಡ ಸಂಗೀತ ಕೋಪ ಮಾಡಿಕೊಳ್ಳುತ್ತಾರೆ. ಹಾಗಾಗಿ ಇವರಿಬ್ಬರ ನಡುವೆ ಇರೋದು ಸ್ನೇಹ ಮಾತ್ರವಲ್ಲ ಎನ್ನುವುದು ಮನೆಯವರ ಮತ್ತು ಜನರ ಅಭಿಪ್ರಾಯ ಆಗಿದೆ.