Bigg Boss: ಕಾರ್ತಿಕ್ ಮಹೇಶ್ ಅವರ ಜೀವನ ಸಂಗಾತಿ ಆಗುವ ಹುಡುಗಿ ಹೇಗಿರಬೇಕಂತೆ ಗೊತ್ತಾ?

Written by Pooja Siddaraj

Published on:

Bigg Boss: ಬಿಗ್ ಬಾಸ್ ಶೋನ ಈ ಸೀಸನ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವವರು ಕಿರುತೆರೆ ನಟ ಕಾರ್ತಿಕ್ ಮಹೇಶ್ ಎಂದರೆ ತಪ್ಪಲ್ಲ. ಬಿಬಿಕೆ10 ಶುರುವಾಗಿ 12 ದಿನ ಕಳೆದಿದೆ. ಇಷ್ಟು ದಿನಗಳಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಅವರ ಫ್ರೆಂಡ್ಶಿಪ್ ಬಹಳ ಸ್ಟ್ರಾಂಗ್ ಆಗಿ ಬೆಳೆದಿದೆ. ಇವರಿಬ್ಬರು ಜೊತೆಯಾಗಿ ಸಮಯ ಕಳೆಯುವುದು, ಕಾಳಜಿ ತೋರಿಸುವುದು ಇದೆಲ್ಲವೂ ಜನರಿಗೂ ಇಷ್ಟವಾಗಿದೆ. ಆದರೆ ಕಾರ್ತಿಕ್ ಅವರ ಸಂಗಾತಿ ಹೇಗಿರಬೇಕಂತೆ ಗೊತ್ತು?

ಬಿಗ್ ಬಾಸ್ ಮನೆಯಲ್ಲಿ ಎರಡು ವಾರಗಳ ವಾಸ ಇನ್ನೇನು ಮುಗಿಯುತ್ತಿದೆ. ನಾಳೆ ಕಿಚ್ಚನ ಎರಡನೇ ಪಂಚಾಯ್ತಿ ನಡೆಯಲಿದೆ. ಎರಡು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ವಿಭಿನ್ನವಾದ ಟಾಸ್ಕ್ ಗಳನ್ನು ನೀಡಲಾಯಿತು. ಮೊದಲ ವಾರ ಸಮರ್ಥರು ಮತ್ತು ಅಸಮರ್ಥರ ನಡುವೆ ಟಾಸ್ಕ್ ನಡೆದರೆ, ಎರಡನೇ ವಾರ ಎರಡು ತಂಡಗಳಾಗಿ ವಿಂಗಡಿಸಿ ಟಾಸ್ಕ್ ನೀಡಲಾಗಿತ್ತು. ಎರಡನೇ ವಾರದ ಟಾಸ್ಕ್ ನಲ್ಲಿ ಗೆದ್ದವರು ರಣಶಕ್ತಿ ತಂಡ..

ಟಾಸ್ಕ್ ಎಲ್ಲವೂ ಮುಗಿದ ಬಳಿಕ, ಮನೆಗೆ ಹೊಸ ಕ್ಯಾಪ್ಟನ್ ಆಯ್ಕೆ ಸಹ ಆಗಿದ್ದು, ರಕ್ಷಕ್ ಅವರು ಬಿಗ್ ಬಾಸ್ ಕನ್ನಡ 10ನೇ ಸೀಸನ್ ನ ಎರಡನೇ ಕ್ಯಾಪ್ಟನ್ ಆಗಿದ್ದಾರೆ. ಇನ್ನು ಈ ವಾರ ನೀಡಿದ ಟಾಸ್ಕ್ ಮತ್ತು ಇನ್ನಿತರ ಕಾರಣಗಳಿಂದ ಬಿಗ್ ಬಾಸ್ ಮನೆ ಒಂದು ರೀತಿ ರಣರಂಗವೇ ಆಗಿತ್ತು ಎಂದರೆ ತಪ್ಪಲ್ಲ. ಈಗ ಸಂಗೀತ ಮತ್ತು ವಿನಯ್ ನಡುವಿನ ಮುನಿಸು ಕೂಡ ಮರೆಯಾಗಿದೆ. ಇಬ್ಬರು ಕಾಂಪ್ರೋಮೈಸ್ ಆಗಿದ್ದಾರೆ.

ಇದೆಲ್ಲವೂ ಮುಗಿದಿದ್ದು, ಇಂದಿನ ಸಂಚಿಕೆಯ ಪ್ರೊಮೋವನ್ನು ಕಲರ್ಸ್ ಕನ್ನಡ ಚಾನಲ್ ಹಂಚಿಕೊಂಡಿದ್ದು, ಹೊಸದಾಗಿ ಶುರು ಆಗುತ್ತಿರುವ ಬೃಂದಾವನ ಧಾರಾವಾಹಿಯ ತಂಡ ಬಿಗ್ ಬಾಸ್ ಮನೆಯೊಳಗೆ ಬಂದಿದೆ. ಮುಂದಿನ ಸೋಮವಾರ 23ನೇ ತಾರೀಕಿನಿಂದ ರಾತ್ರಿ 8 ಗಂಟೆಗೆ ಬೃಂದಾವನ ಧಾರವಾಹಿ ಶುರುವಾಗಲಿದ್ದು, ಇದು 36 ಜನ ಸದಸ್ಯರಿರುವ ತುಂಬು ಕುಟುಂಬದ ಕಥೆ ಆಗಿದೆ. ಧಾರವಾಹಿ ಪ್ರೊಮೋಷನ್ ಗಾಗಿ ಬೃಂದಾವನ ತಂಡ ಬಿಗ್ ಬಾಸ್ ಮನೆಯೊಳಗೆ ಬಂದಿದೆ.

ಹೊಸ ಧಾರವಾಹಿ ತಂಡದ ಜೊತೆಗೆ ಮನೆಯ ಸದಸ್ಯರು ಎಂಜಾಯ್ ಮಾಡಿದ್ದು, ಬೃಂದಾವನ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಚಿತ್ಕಲಾ ಬಿರಾದರ್ ಅವರು ಬಿಗ್ ಬಾಸ್ ಮನೆಯೊಳಗೆ ಕಾರ್ತಿಕ್ ಅವರಿಗೆ ಒಂದು ಪ್ರಶ್ನೆ ಕೇಳಿದ್ದಾರೆ, ತಮ್ಮ ಸಂಗಾತಿಯಾಗುವ ಹುಡುಗಿ ಹೇಗಿರಬೇಕು ಎಂದು ಕೇಳಿದ್ದು ಅದಕ್ಕೆ ಕಾರ್ತಿಕ್ ಅವರು ಕೊಟ್ಟ ಉತ್ತರ ಎಲ್ಲರ ಮನಸೆಳೆದಿದ್ದ ಎಂದರೆ ತಪ್ಪಲ್ಲ..

“ಲಕ್ಷಣವಾಗಿರಬೇಕು, ಅಪ್ಪಟ ಕನ್ನಡದ ಹುಡುಗಿ ಆಗಿರಬೇಕು, ಅವಳು ಇಂಡಿಪೆಂಡೆಂಟ್ ಆಗಿರಬೇಕು. ಆದರೆ ಅವಳನ್ನ ನಾನೇ ನೋಡ್ಕೋಬೇಕು..” ಎಂದಿದ್ದಾರೆ ಕಾರ್ತಿಕ್. ಮನೆಯೊಳಗೆ ಸಂಗೀತ ಕಾರ್ತಿಕ್ ಫ್ರೆಂಡ್ಶಿಪ್ ಸ್ಟೋರಿ ನಡೆಯುವ ವೇಳೆ ಕಾರ್ತಿಕ್ ಅವರು ಹೇಳಿರುವ ಈ ಮಾತುಗಳು ಹೊರಗಿನ ವೀಕ್ಷಕರಿಗೂ ತುಂಬಾ ಇಷ್ಟವಾಗಿದೆ.

Leave a Comment