Bigg Boss: ಮತ್ತೆ ಶುರುವಾಯ್ತು ದೋಸ್ತಿಗಳ ಕಲಹ! ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಯಾಗುತ್ತಾ ಕಾರ್ತಿಕ್ ವಿನಯ್ ಜಗಳ?

Written by Pooja Siddaraj

Published on:

Bigg Boss: ಬಿಗ್ ಬಾಸ್ ಮನೆಗೆ ಬರುವುದಕ್ಕಿಂತ ಮೊದಲಿನಿಂದಲೂ ಕಾರ್ತಿಕ್ ಮತ್ತು ವಿನಯ್ ಇಬ್ಬರು ಗುಡ್ ಫ್ರೆಂಡ್ಸ್. ಆದರೆ ಬಿಗ್ ಬಾಸ್ ಮನೆಯೊಳಗೆ ಬಂದ ನಂತರ ಇವರಿಬ್ಬರು ಹೆಚ್ಚಾಗಿ ಜಗಳದ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಆರಂಭದಲ್ಲಿ ಕಾರ್ತಿಕ್ ಸಂಗೀತ ಜೊತೆಗೆ ಕ್ಲೋಸ್ ಆಗಿರುವುದು ವಿನಯ್ ಗೆ ಇಷ್ಟ ಆಗುತ್ತಿರಲಿಲ್ಲ, ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗಿತ್ತು, ಇದೀಗ ಮತ್ತೊಂದು ಸಾರಿ ಇದೇ ಕಾರಣಕ್ಕೆ ಇಬ್ಬರೂ ಜಗಳ ಅಡಿದ್ದಾರೆ..

ಒಂದೆರಡು ವಾರಗಳ ಕಾಲ ಕಾರ್ತಿಕ್ ಸಂಗೀತ ಮಾತನಾಡುತ್ತಿರಲಿಲ್ಲ, ಕಾರಣಾಂತರಗಳಿಂದ ಇಬ್ಬರ ನಡುವೆ ಮನಸ್ತಾಪ ಇತ್ತು. ಆಗ ಸಂಗೀತ ವಿನಯ್ ಅಂಡ್ ಗ್ಯಾಂಗ್ ಜೊತೆಗೆ ಚೆನ್ನಾಗಿದ್ದರು. ಆದರೆ ಈಗ ಮತ್ತೆ ಕಾರ್ತಿಕ್ ಸಂಗೀತ ಫ್ರೆಂಡ್ಶಿಪ್ ಮುಂದುವರೆದಿದೆ. ಇಬ್ಬರೂ ಮೊದಲಿನ ಹಾಗೆ ಚೆನ್ನಾಗಿ ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇವರಿಬ್ಬರ ವಿಚಾರಕ್ಕೆ ಈಗ ಕಾರ್ತಿಕ್ ವಿನಯ್ ನಡುವೆ ಮತ್ತೆ ಜಗಳ ಶುರುವಾಗಿದೆ.

ಒಂದು ಜೋಡಿಯನ್ನು ನೋಡಿದ್ರೆ ಖುಷಿಯಾಗುತ್ತೆ, ಇನ್ನೊಂದು ಜೋಡಿ ಡುಬಾಕ್ ಜೋಡಿ ಎಂದು ವಿನಯ್ ಹೇಳಿರುವ ಮಾತಿಗೆ ಕಾರ್ತಿಕ್ ಗೆ ಕೋಪ ಬಂದಿದ್ದು, ಡುಬಾಕ್ ಜೋಡಿ ಅಂತ ಯಾರಿಗೆ ಹೇಳ್ತಿದ್ಯಾ ಎಂದು ಹೇಳಿದ್ದಾರೆ. ಅದಕ್ಕೆ ವಿನಯ್, ನಾವು ಅಂದುಕೊಳ್ಳೋದನ್ನು ಬಂದು ನಿನ್ನ ಹತ್ರ ಕ್ಲಾರಿಟಿ ತಗೋಬೇಕಾ ಎಂದು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ ನಾನು ಫ್ರೆಂಡ್ಸ್ ಗೆ ಅಂತ ಒಂದು ಬೌಂಡರಿ ಕೊಟ್ಟಿರ್ತೀನಿ ಅದರ ಒಳಗೆ ಬಂದ್ರೆ ಚೆನ್ನಾಗಿರಲ್ಲ ಎಂದಿದ್ದಾರೆ..

ಅದಕ್ಕೆ ವಿನಯ್, ನೀನ್ ಯಾವ್ ಫ್ರಂಡ್ ನನಗೆ, ಯಾರೋ ನೀನು ಎಂದು ಕೂಗಾಡಿದ್ದಾರೆ. ಅದಕ್ಕೆ ಕಾರ್ತಿಕ್ ಇಂಥ ವ್ಯಕ್ತಿಗಳ ಜೊತೆಗೆ ನನಗೆ ಇನ್ವಾಲ್ವ್ ಅಗೋಕು ಇಷ್ಟ ಇಲ್ಲ ಎಂದಿದ್ದಾರೆ. ಇತ್ತ ವಿನಯ್ ಇಂಥ ಚಿಲ್ಲರೆ ಜನರ ಫ್ರೆಂಡ್ಶಿಪ್ ನನಗೆ ಬೇಕಾಗು ಇಲ್ಲ ಎಂದಿದ್ದಾರೆ. ಇವರಿಬ್ಬರ ಈ ಪ್ರೋಮೋ ಈಗ ವೈರಲ್ ಆಗಿದ್ದು, ಕಿಚ್ಚನ ಪಂಚಾಯ್ತಿಯಲ್ಲಿ ಮತ್ತೊಮ್ಮೆ ದೋಸ್ತಿಗಳ ಜಗಳ ಚರ್ಚೆಯಾಗುತ್ತಾ ಎಂದು ಕಾದು ನೋಡಬೇಕಿದೆ.

Leave a Comment