Bigg Boss: ಸಂಗೀತ ಕಾರ್ತಿಕ್ ನಡುವೆ ದೊಡ್ಡ ಬಿರುಕು! ಕಿಚ್ಚನ ಎದುರೇ ಬಯಲಾಯ್ತು ಹೊಸ ರೂಪ!

0 2

Bigg Boss: ಬಿಗ್ ಬಾಸ್ ಶೋ ಎಂದರೆ ಅಲ್ಲಿ ಲವ್ ಫ್ರೆಂಡ್ಶಿಪ್ ಹೈಲೈಟ್ ಆಗಿರುತ್ತದೆ. ಪ್ರತಿ ಸೀಸನ್ ನಲ್ಲಿ ಒಂದಲ್ಲ ಒಂದು ಜೋಡಿಯ ನಡುವೆ ಆತ್ಮೀಯತೆ, ಸಲುಗೆ ಇರುತ್ತದೆ. ಅದೇ ರೀತಿಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಹೆಚ್ಚು ಸುದ್ದಿಯಾಗಿದ್ದು ಕಾರ್ತಿಕ್ ಸಂಗೀತ. ಆದರೆ ಇದೀಗ ಇವರ ಸ್ನೇಹದಲ್ಲಿ ದೊಡ್ಡ ಬಿರುಕು ಮೂಡಿದೆ.

ಇಂದು ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಎಪಿಸೋಡ್ ನಲ್ಲಿ ಸುದೀಪ್ ಅವರು ಹೊಸ ಆಕ್ಟಿವಿಟಿ ಮಾಡಿಸಿದ್ದಾರೆ. ಒಂದು ಬೆದರು ಬೊಂಬೆ ಇಟ್ಟು, ಅದಕ್ಕೆ ಇಷ್ಟವಿಲ್ಲದ ಸ್ಪರ್ಧಿಯ ಫೋಟೋ ಅಂಟಿಸಿ, ಯಾಕೆ ಅವರ ಮೇಲೆ ಕೋಪ ಎಂದು ಕಾರಣ ಹೇಳಿ, ಆ ಮಡಿಕೆಯನ್ನು ಒಡೆಯಬೇಕು. ಈ ಟಾಸ್ಕ್ ನಲ್ಲಿ ವಿನಯ್ ಮಡಿಕೆಗೆ ಸಂಗೀತ ಫೋಟೋ ಇಟ್ಟು ಹೊಡೆದಿದ್ದಾರೆ. ಇನ್ನು ಕೆಲವರು ಕೂಡ ಸಂಗೀತ ಫೋಟೋ ಇಟ್ಟು ಹೊಡೆದಿದ್ದಾರೆ.

ಇತ್ತ ಸಂಗೀತ ವಿನಯ್ ಫೋಟೋ ಇಟ್ಟು ಹೊಡೆಯುತ್ತಾರೆ. ಇನ್ನು ಕಾರ್ತಿಕ್ ಸಂಗೀತ ಫೋಟೋ ಇಟ್ಟು, ನಾನು ವಿನಯ್ ಮೊದಲಿಂದಾನು ಒಂದೇ ಥರ ಇದ್ವಿ, ಬಕೆಟ್ ಹಿಡಿಯೋದು ನನಗೆ ಗೊತ್ತಿಲ್ಲ, ಟಾಸ್ಕ್ ನಲ್ಲಿ ಕೆಲವರು ಕಾರ್ತಿಕ್ ಇಂದ್ ಸಂಗೀತಾನ ಮೈನಸ್ ಮಾಡಿದ್ರೆ ಕಾರ್ತಿಕ್ ಜೀರೋ ಅಂತ ಹೇಳಿದ್ರು, ಈಗ ಮೈನಸ್ ಮಾಡಿದ್ದೀನಿ, ಜೀರೋ ಅಂತ ಪ್ರೂವ್ ಮಾಡ್ಲಿ ಅಂತ ಹೇಳಿ ಸಂಗೀತ ಫೋಟೋ ಒಡೆದಿದ್ದಾರೆ.

ಇದು ಇಂದಿನ ಎಪಿಸೋಡ್ ಪ್ರೋಮೋದಲ್ಲಿ ಕಂಡುಬಂದಿದ್ದು, ಇಬರಿಬ್ಬರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೆಲವರು ಕಾರ್ತಿಕ್ ಸರಿಯಾಗಿ ಮಾಡಿದ್ದಾರೆ ಎಂದರೆ ಇನ್ನು ಕೆಲವರು ಇಷ್ಟು ದಿನ ಕಾರ್ತಿಕ್ ಗೆ ಫ್ಲರ್ಟ್ ಮಾಡೋಕೆ ಸಂಗೀತ ಬೇಕಿತ್ತು, ಇನ್ನು ಉಳಿದಿರೋದು ಕೆಲವೇ ದಿನ ಅಲ್ವಾ ಅದಕ್ಕೆ ಹೀಗೆ ಮಾಡ್ತಿದ್ದಾರೆ ಎನ್ನುತ್ತಿದ್ದಾರೆ.

Leave A Reply

Your email address will not be published.