Bigg Boss: ಈ ವಾರ ಕಿಚ್ಚನ ಚಪ್ಪಾಳೆ ಶಕ್ತಿಯ ಸಂಕೇತವಾದ ಬಳೆಗಳಿಗೆ, ದಿ ಬೆಸ್ಟ್ ಎಪಿಸೋಡ್ ಎಂದ ನೆಟ್ಟಿಗರು

Written by Pooja Siddaraj

Published on:

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರ ನಾಲ್ಕನೇ ವಾರದ ಕಿಚ್ಚನ ಪಂಚಾಯ್ತಿ ನಿನ್ನೆಯಷ್ಟೇ ನಡೆದಿದ್ದು, ಈ ವರೆಗಿನ ಅತ್ಯಂತ ಪವರ್ ಫುಲ್ ಆದ ಕಿಚ್ಚನ ಪಂಚಾಯಿತಿ ಇದು ಎಂದರೆ ತಪ್ಪಲ್ಲ. ಕರ್ನಾಟಕದ ಜನತೆ, ಬಿಗ್ ಬಾಸ್ ಶೋ ವೀಕ್ಷಕರು ಈ ಪಂಚಾಯ್ತಿ ಎಪಿಸೋಡ್ ನೋಡಲು ಕಾಯುತ್ತಿದ್ದರು, ಈ ವಾರ ಸುದೀಪ್ ಅವರು ವಿನಯ್ ಅಂಡ್ ಗ್ಯಾಂಗ್ ಗೆ ಹೇಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಕುತೂಹಲ ಜನರಲ್ಲಿ ಹೆಚ್ಚಾಗಿಯೇ ಇತ್ತು.

ಅದೇ ರೀತಿ ನಿನ್ನೆಯ ಎಪಿಸೋಡ್ ನಲ್ಲಿ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ ಕಿಚ್ಚ. ವಿನಯ್, ನಮ್ರತಾ, ಸ್ನೇಹಿತ್, ತುಕಾಲಿ ಸೇರಿದಂತೆ, ವಿನಯ್ ಅವರ ಇಡೀ ಗ್ಯಾಂಗ್ ಗೆ ಕಿಚ್ಚನಿಂದ ಮಂಗಳಾರತಿ ಆಗಿದೆ. ಸುದೀಪ್ ಅವರು ಮನೆಯಲ್ಲಿ ನಡೆಡ್ ಪ್ರತಿ ವಿಚಾರ, ಗುಂಪುಗಾರಿಕೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆಯೂ ಮಾತನಾಡಿ, ವಿನಯ್ ಅಂಡ್ ಗ್ಯಾಂಗ್ ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರೆ ತಪ್ಪಲ್ಲ.

ನಾಲ್ಕನೇ ವಾರ ಬಿಗ್ ಬಾಸ್ ಮನೆಯಲ್ಲಿ ನಡೆದ ಪ್ರಮುಖ ವಿಚಾರ ಟಾಸ್ಕ್ ಗಳ ನಡುವೆ ಶುರುವಾದ ಬಳೆಗಳ ವಿಷಯ ಎಂದರೆ ತಪ್ಪಲ್ಲ. ಹಳ್ಳಿ ಟಾಸ್ಕ್ ನಡೆಯುವಾಗ ವಿನಯ್ ಆವರು ಕಾರ್ತಿಕ್ ಅವರನ್ನು ಉದ್ದೇಶಿಸಿ ಹೆಂಗಸರ ಥರ ಬಳೆ ಹಾಕೊಂಡು ಆಟ ಆಡಬೇಡ, ಗಂಡಸಿನ ಥರ ಆಡು, ಬಳೆಗಳ ರಾಜ, ಅವನಿಗೂ ಬಳೆ ತೊಡಿಸು ಎಂದೆಲ್ಲಾ ಬಳೆಗಳಿಗೆ ಅವಮಾನ ಮಾಡುವ ಹಾಗೆ ಮಾತನಾಡಿದ್ದರು.

ಆ ವಿಚಾರದ ಬಗ್ಗೆ ನಿನ್ನೆ ಕಿಚ್ಚ ಸುದೀಪ್ ಅವರು ಸೂಪರ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳೆಗಳ ಬಗ್ಗೆ ನಿಮ್ಮ ಅಭಿಪ್ರಾಯ ಎಂದು ಕೇಳಿದಾಗ ವಿನಯ್ ಅವರು ಮಹಿಳೆಯರನ್ನ ಕೀಳಾಗಿ ಕಾಣುವ ಉದ್ದೇಶದಿಂದ ನಾನು ಆ ರೀತಿ ಹೇಳಿಲ್ಲ, ಮಹಿಳೆಯರು ಬಲಹೀನರು ಅಂತ ಹೇಳಿಲ್ಲ ಎಂದು ತಮ್ಮ ಮಾತಿಗೆ ಸಮರ್ಥನೆ ಕೊಟ್ಟರು ಕೂಡ, ಸುದೀಪ್ ಅವರು ಬಿಡದೆ ಎಲ್ಲಾ ವಿಚಾರವನ್ನು ಚರ್ಚಿಸಿ, ಖಾರವಾಗಿಯೇ ಮಾತನಾಡಿ, ಎಲ್ಲರಿಗೂ ಅರ್ಥ ಆಗುವ ಹಾಗೆ ಬಿಸಿ ಮುಟ್ಟಿಸಿದರು.

ಇನ್ನು ಈ ವಾರ ಕಿಚ್ಚನ ಚಪ್ಪಾಳೆ ಕೂಡ ಅಷ್ಟೇ ವಿಶೇಷವಾಗಿತ್ತು, ಶಕ್ತಿಯ ಸಂಕೇತ ಆಗಿರುವ, ಬಲದ ಸಂಕೇತ ಆಗಿರುವ ಬಳೆಗಳಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಬಳೆಗಳ ಫೋಟೋ ಇರುವ ಗಿಫ್ಟ್ ಅನ್ನು ವಿನಯ್ ಅವರಿಂದಲೇ ಓಪನ್ ಮಾಡಿಸಿದರು ಕಿಚ್ಚ, ಇದಜ್ಞಾ ನೋಡಿದ ಮನೆಮಂದಿ ಖುಷಿಯಾದರು. ವಿನಯ್ ಅವರ ಕೈಯಲ್ಲೇ ಬಳೆಗಳ ಫೋಟೋವನ್ನು ವಾಲ್ ಆಫ್ ಫೇಮ್ ಗೆ ಹಾಕಿಸಲಾಯಿತು. ಸಂಗೀತ ಅವರಿಗೆ ಇಂಡೈರೆಕ್ಟ್ ಆಗಿ ಚಪ್ಪಾಳೆ ಸಿಕ್ಕಿದ್ದು ಕೂಡ, ಜನರಿಗೂ ತುಂಬಾ ಇಷ್ಟವಾಗಿದೆ.

Leave a Comment