Bigg Boss: ಬಿಗ್ ಬಾಸ್ ಮನೆಯೊಳಗೆ ನಡೆದಿದೆ ಪ್ರೆಗ್ನಿನ್ಸಿ ಟೆಸ್ಟ್, ನಿಜಕ್ಕೂ ಆಕೆ ಗರ್ಭಿಣಿ ಆಗಿದ್ದಾರಾ?

Written by Pooja Siddaraj

Published on:

Bigg Boss: ಬಿಗ್ ಬಾಸ್ ಶೋ ಎಂದರೆ ಜನರಿಗೆ ಸಿಕ್ಕಾಪಟ್ಟೆ ಕುತೂಹಲ. ಎಲ್ಲಾ ಭಾಷೆಗಳಲ್ಲೂ ಕೂಡ ಈ ಶೋ ನಡೆಯುತ್ತಿದೆ. ಭಾರತದಲ್ಲಿ ಮೊದಲು ಬಿಗ್ ಬಾಸ್ ಶೋ ಶುರುವಾಗಿದ್ದು ಹಿಂದಿಯಲ್ಲಿ. ಪ್ರಸ್ತುತ ಹಿಂದಿ ಬಿಗ್ ಬಾಸ್ 17ನೇ ಸೀಸನ್ ನಡೆಯುತ್ತಿದೆ. ನಟ ಸಲ್ಮಾನ್ ಖಾನ್ ಅವರೇ ಈ ಶೋ ನಿರೂಪಣೆ ಮಾಡುತ್ತಿದ್ದಾರೆ. ಸದಾ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಕಾರಣವಾಗುವ ಬಿಗ್ ಬಾಸ್ ಮನೆ ಇದೀಗ ಪ್ರೆಗ್ನಿನ್ಸಿ ಟೆಸ್ಟ್ ವಿಚಾರದಿಂದ ಸುದ್ದಿಯಾಗಿದೆ.

ಬಿಗ್ ಬಾಸ್ ಹಿಂದಿ ಸೀಸನ್ 17ರಲ್ಲಿ ಸ್ಪರ್ಧಿಯಾಗಿರುವ ಕಿರುತೆರೆ ಮತ್ತು ಸಿನಿಮಾ ನಟಿ ಅಂಕಿತಾ ಲೋಖಂಡೇ ಅವರು ಬಿಗ್ ಬಾಸ್ ಮನೆಯೊಳಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿದ್ದಾರೆ ಎಂದು ಅವರೇ ರಿವೀಲ್ ಮಾಡಿದ್ದಾರೆ. ಅಂಕಿತಾ ಅವರು ಬಾಲಿವುಡ್ ನಲ್ಲಿ ಸ್ಟಾರ್ ಹೀರೋ ಆಗಿದ್ದ ಸುಶಾಂತ್ ಸಿಂಗ್ ರಜಪೂತ್ ಅವರೊಡನೆ Pavitr Rishta ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಸಿನಿಮಾಗಳಿಗೂ ಎಂಟ್ರಿ ಕೊಟ್ಟರು.

ಈ ಬಾರಿ ಅಂಕಿತಾ ಅವರು ಬಿಗ್ ಬಾಸ್ ಶೋಗೆ ತಮ್ಮ ಗಂಡನ ಜೊತೆಗೆ ಸ್ಪರ್ಧಿಯಾಗಿ ಬಂದಿದ್ದಾರೆ. ವಿಕ್ಕಿ ಜೈನ್ ಅಂಕಿತಾ ಅವರ ಪತಿ, ಇವರು ಕೂಡ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಬಂದಿದ್ದು, ಗಂಡನ ಜೊತೆಗೆ ಮಾತನಾಡುವಾಗ ಅಂಕಿತಾ ಅವರು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇಬ್ಬರು ಕೂತು ಮಾತನಾಡುವಾಗ, ವೀಕ್ಷಕರ ಗಮನ ಸೆಳೆಯಲು ನಿಮಗೆ ಬಯ್ಯಬೇಕಾಯ್ತು ಎಂದು ಹೇಳಿದ್ದಾರೆ..

ಆಗ ವಿಕ್ಕಿ ಅವರು, ನೀನು ಅವಮಾನ ಮಾಡಿದ್ದು, ಬೇಸರ ಆಯಿತು ಎಂದು ಹೇಳಿದ್ದು, ಆಗ ಅಂಕಿತಾ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ನನಗೆ ಹುಷಾರಿಲ್ಲ, ಚೆನ್ನಾಗಿದ್ದೀನಿ ಅನ್ನಿಸುತ್ತಿಲ್ಲ, ಬ್ಲಡ್ ಟೆಸ್ಟ್ ಮಾಡಿಸಿದ್ದೇನೆ, ಯೂರಿನ್ ಟೆಸ್ಟ್ ಮಾಡಿಸಿದ್ದೇನೆ.. ನನಗೆ ಪೀರಿಯೆಡ್ಸ್ ಮಿಸ್ ಆಗಿದೆ, ಗರ್ಭಿಣಿ ಆಗಿದ್ದೀನಾ ಎಂದು ಅನ್ನಿಸುತ್ತಿದೆ, ರಿಸಲ್ಟ್ ಬರುವವರೆಗೂ ಕಾಯಬೇಕು ಎಂದು ಹೇಳಿದ್ದಾರೆ.

ವಿಕ್ಕಿ ಕೂಡ ಈ ಮಾತು ಕೇಳಿ ಆಶ್ಚರ್ಯಪಟ್ಟಿದ್ದು, ಹೊರಗಿನ ಜನರು ಕೂಡ ಅಂಕಿತಾ ಅವರು ಮನೆಯೊಳಗೆ ಇರುವಾಗಲೇ ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯೊಳಗೆ ಇಂಥದ್ದೊಂದು ವಿಚಾರ ನಡೆಯುತ್ತಿರುವುದು ಇದೇ ಮಾಡಲಾಗಿದ್ದು, ಅಂಕಿತಾ ನಿಜಕ್ಕೂ ಗರ್ಭಿಣಿ ಆಗಿದ್ದಾರಾ ಎಂದು ಕಾದು ನೋಡಬೇಕಿದೆ.

Leave a Comment