Bigg Boss: ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ಕನ್ನಡ ಪ್ರೇಮ ತೋರಿದ ಮೈಕಲ್, ವೀಕ್ಷಕರು ಫಿದಾ!

Written by Pooja Siddaraj

Published on:

Bigg Boss: ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ನಿನ್ನೆಯವರೆಗೂ ಎಲ್ಲಾ ಸ್ಪರ್ಧಿಗಳು ಮನೆ ಚಿಕ್ಕದಾಗುತ್ತಿದೆ ಎಂದುಕೊಂಡಿದ್ದರು. ಆದರೆ ನಿನ್ನೆ ಇಬ್ಬರು ಹೊಸ ಸ್ಪರ್ಧಿಗಳು ಮನೆಗೆ ಕಾಲಿಟ್ಟು ಹೊಸ ಕಾಂಪಿಟೇಶನ್ ತಂದಿದ್ದಾರೆ. ಹೊಸದಾಗಿ ಬಂದಿರುವವರು ಮಾಡೆಲ್ ಪವಿ ಪೂವಪ್ಪ ಮತ್ತು ನಟ ಅವಿನಾಶ್ ಶೆಟ್ಟಿ. ಇವರಿಬ್ಬರು ನಿನ್ನೆ ಬಿಗ್ ಮನೆಗೆ ಬರುತ್ತಿದ್ದ ಹಾಗೆಯೇ ತುಕಾಲಿ ಸಂತೋಷ್ ಮತ್ತು ಸಿರಿ ಇಬ್ಬರನ್ನು ಸೇವ್ ಮಾಡಿದ್ದಾರೆ.

ಇನ್ನು ಹೊಸ ಸ್ಪರ್ಧಿಗಳು ಬಂದಮೇಲೆ ಹೊಸ ಟಾಸ್ಕ್ ಗಳು ಕೂಡ ಶುರುವಾಗಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳಾಗಿದೆ, ಒಂದು ತಂಡದ ನಾಯಕ ಮೈಕಲ್ ಮತ್ತು ತಂಡದ ನಾಯಕ ಡ್ರೋನ್ ಪ್ರತಾಪ್ ಆಗಿದ್ದರೆ. ಮೈಕಲ್ ತಂಡದಲ್ಲಿ ಕಾರ್ತಿಕ್, ಸಂಗೀತ, ತನಿಷಾ, ವಿನಯ್, ಸ್ನೇಹಿತ್ ಇದ್ದಾರೆ. ಇನ್ನು ಪ್ರತಾಪ್ ಅವರ ತಂಡದಲ್ಲಿ ಸಿರಿ, ನಮ್ರತಾ, ತುಕಾಲಿ ಸಂತೋಷ್, ವರ್ತೂರ್ ಸಂತೋಷ್, ಪವಿ ಇದ್ದಾರೆ.

ಈ ತಂಡಗಳಿಗೆ ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ನೀಡಿರುವ ಟಾಸ್ಕ್ ಒಂದು ರೀತಿ ಮಜವಾಗಿದೆ ಎಂದರೆ ತಪ್ಪಲ್ಲ. ಇಂದು ಕೊಟ್ಟಿರುವ ಟಾಸ್ಕ್ ನಲ್ಲಿ ಮೈಕಲ್ ಮತ್ತು ತುಕಾಲಿ ಸಂತೋಷ್ ಅವರು ನಿಂತಿದ್ದು, ಅವರಿಬ್ಬರು ಪ್ಲಾಸ್ಟಿಕ್ ಪ್ಲೇಟ್ ನಲ್ಲಿರುವ ತಿಂಡಿಯನ್ನು ಮೊದಲು ತಿನ್ನುವವರು ಅದರಲ್ಲಿರುವ ಪ್ರಶ್ನೆಯನ್ನು ಓದಬೇಕು, ಅವರ ತಂಡ ಆ ಪ್ರಶ್ನೆಗೆ ಉತ್ತರ ಕೊಡಬೇಕು.

ಈ ಟಾಸ್ಕ್ ನಲ್ಲಿ ಅಲ್ಲಿದ್ದ ತಿಂಡಿ ತಿಂದ ಮೈಕಲ್, ಕನ್ನಡ ಪ್ರಶ್ನೆಯನ್ನು ತುಂಬಾ ಚೆನ್ನಾಗಿ ಓದಿದ್ದಾರೆ. ಮೈಕಲ್ ಓದುತ್ತಿದ್ದ ತಕ್ಷಣವೇ ವಿನಯ್ ಏನೋ ಇಷ್ಟು ಚೆನ್ನಾಗಿ ಕನ್ನಡ ಓಡುತ್ತಿದ್ದಿಯಾ ಎಂದು ಕೇಳಿದ್ದು, ಆಗ ಮೈಕಲ್ ಕರ್ನಾಟಕದ ಮಣ್ಣಿನ ಮಗ ಯಾರು ನಾನಲ್ವ? ಎಂದು ಹೇಳಿದ್ದಾರೆ. ಅಭಿಮಾನಿಗಳು ಈ ಪ್ರೊಮೋ ನೋಡಿ ಮೈಕಲ್ ಅವರ ಕನ್ನಡ ಪ್ರೇಮವನ್ನು ಹೊಗಳುತ್ತಿದ್ದಾರೆ. ಇವರಿಗೆ ಫ್ಯಾನ್ ಬೇಸ್ ಕೂಡ ಹೆಚ್ಚಾಗುತ್ತಿದೆ.

Leave a Comment