Bigg Boss: ಫಿನಾಲೆ ವಾರದಲ್ಲಿ ಎಲಿಮಿನೇಟ್ ಆದ್ರ ಡ್ರೋನ್ ಪ್ರತಾಪ್?

0 14

Bigg Boss: ಬಿಗ್ ಬಾಸ್ ಮನೆಯಲ್ಲಿ ಈಗ ಫಿನಾಲೆ ವಾರ ನಡೆಯುತ್ತಿದೆ. ಮನೆಯಲ್ಲಿ 6 ಸ್ಪರ್ಧಿಗಳಿದ್ದಾರೆ. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ವಿಭಿನ್ನವಾದ ಟಾಸ್ಕ್ ಗಳನ್ನು ನೀಡಲಾಗುತ್ತಿದೆ. ಜನವರಿ 27 ಹಾಗು ಜನವರಿ 28ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳೇ ಆಗಿದ್ದು, ವಿನ್ನರ್ ಆಗೋದು ಎನ್ನುವ ಕುತೂಹಲ ಸಹ ಜಾಸ್ತಿಯಾಗಿದೆ.

ಸಾಮಾನ್ಯವಾಗಿ ಬಿಗ್ ಬಾಸ್ ಫಿನಾಲೆ ವೀಕ್ ನಲ್ಲಿ ಇರುವುದು 5 ಸ್ಪರ್ಧಿಗಳು, ಆದರೆ ಈ ಸೀಸನ್ ನಲ್ಲಿ 6 ಸ್ಪರ್ಧಿಗಳಿದ್ದಾರೆ. ಅವರುಗಳಲ್ಲಿ ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಬಹುದು. ಇನ್ನು 5 ಜನರು ಫಿನಾಲೆ ದಿನದ ವರೆಗು ಇರುತ್ತಾರೆ ಎಂದು ಹೇಳಲಾಗಿತ್ತು. ಅದೇ ರೀತಿ ನಿನ್ನೆ ಪ್ರತಾಪ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ, ಎಂದು ಸುದ್ದಿಯೊಂದು ಕೇಳಿಬಂತು..

ಟಾಪ್ 5 ನಲ್ಲಿ ಇರಲು ಅರ್ಹತೆ ಇಲ್ಲದ ಸ್ಪರ್ಧಿಗಳು ಯಾರ್ಯಾರು ಎಂದು ಎಲ್ಲಾ ಸ್ಪರ್ಧಿಗಳನ್ನು ಕೇಳಿ ಅವರೆಲ್ಲರು ಪ್ರತಾಪ್ ಹೆಸರು ಹೇಳಿದ್ದಕ್ಕೆ, ಬಿಗ್ ಬಾಸ್ ಪ್ರತಾಪ್ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಿದರು. ಇಡೀ ಮನೆಯ ಸ್ಪರ್ಧಿಗಳಿಗೆ ಇದು ಶಾಕ್ ಆಗಿತ್ತು. ಆದರೆ ಪ್ರತಾಪ್ ಅವರು ನಿಜಕ್ಕೂ ಎಲಿಮಿನೇಟ್ ಆಗಿಲ್ಲ, ಅಲ್ಲದೇ ಯಾರು ಕೂಡ ಮಿಡ್ ವೀಕ್ ಎಲಿಮಿನೇಶನ್ ಆಗೋದಿಲ್ಲ ಎಂದು ಹೇಳಲಾಗುತ್ತಿದೆ..

6 ಸ್ಪರ್ಧಿಗಳು ಕೂಡ ಬಿಗ್ ಬಾಸ್ ಮನೆಯಲ್ಲೇ ಕೊನೆಯ ದಿನದವರೆಗು ಇರಲಿದ್ದಾರೆ. ಇವರುಗಳ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾದು ನೋಡಬೇಕಿದೆ. ಈ ವೀಕೆಂಡ್ ನಲ್ಲಿ ಬಿಗ್ ಬಾಸ್ ಶೋ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಎಲ್ಲಾ ವೀಕ್ಷಕರು ಕಾರ್ಯಕ್ರಮ ನೋಡಲು ಕಾದು ಕುಳಿತಿದ್ದಾರೆ.

Leave A Reply

Your email address will not be published.