Bigg Boss: ಹುಡುಗಿಯರಿಗೆ ಗೌರವ ಕೊಡಬೇಕು ಎಂದ ನಮ್ರತಾ ಬಾಯಲ್ಲಿ ಕೆಟ್ಟ ಪದ! ಸರಿಯಲ್ಲ ಎಂದ ವೀಕ್ಷಕರು

Written by Pooja Siddaraj

Published on:

Bigg Boss: ಬಿಗ್ ಬಾಸ್ ಶೋ ದಿನದಿಂದ ದಿನಕ್ಕೆ ಬೇರೆ ರೂಪವನ್ನೇ ಪಡೆದುಕೊಳ್ಳುತ್ತಿದೆ. ದಿನೇ ದಿನೇ ಮನೆಯಲ್ಲಿ ಕಿಚ್ಚು, ಜಗಳ ಎಲ್ಲವೂ ಜಾಸ್ತಿಯಾಗುತ್ತಲೇ ಇದೆ. ಕೆಲವು ಸ್ಪರ್ಧಿಗಳ ವರ್ತನೆಯನ್ನು ಸಹಿಸಲು ಆಗುತ್ತಿಲ್ಲ ಎನ್ನುತ್ತಿದ್ದಾರೆ ವೀಕ್ಷಕರು. ಕಿರುತೆರೆ ನಟಿ ನಮ್ರತಾ ಅವರ ವಿಚಾರದಲ್ಲಿ ಈಗ ಅದೇ ರೀತಿ ಆಗಿದೆ. ನಮ್ರತಾ ಅವರ ವರ್ತನೆಯಿಂದ ನೆಟ್ಟಿಗರು ಮತ್ತು ಬಿಗ್ ಬಾಸ್ ವೀಕ್ಷಕರು ಅಸಮಾಧಾನಗೊಂಡಿದ್ದಾರೆ.

ನಮ್ರತಾ ಅವರು ನಾಗಿಣಿ ಧಾರಾವಾಹಿ ಇಂದ ಹೆಸರುವಾಸಿಯಾಗಿ ಇಂದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವಿನಯ್ ಅವರೊಡನೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಮ್ರತಾ, ಈ ವಾರ ಹೆಚ್ಚಾಗಿ ಕೆಟ್ಟಪದಗಳ ಬಳಕೆ ಮಾಡಿ ಬೀಪ್ ಹಾಕಿಸಿಕೊಂಡಿದ್ದು ಇದೆ. ತನಿಷಾ ಅವರಿಗೆ ಮತ್ತು ಸಂಗೀತ ಅವರ ಬಗ್ಗೆ ನಮ್ರತಾ ಅವರು ಮಾತನಾಡಿದ ಮಾತುಗಳು ಬಗ್ಗೆ ಇದೀಗ ಅಸಮಾಧಾನ ವ್ಯಕ್ತವಾಗಿದೆ.

ಇತ್ತೀಚೆಗೆ ತನಿಷಾ ಅವರ ಬಗ್ಗೆ ಮಾತನಾಡಿದ್ದ ನಮ್ರತಾ ಆಕೆ ಕಿತ್ತೊದವಳು ಅಂತ ಹೇಳಿದ್ದರು. ಹಿಂದೆ ಆ ರೀತಿ ಮಾತನಾಡಿದ್ದರು, ಇದೀಗ ಸಂಗೀತ ಅವರೊಡನೆ ಮಾತನಾಡುವಾಗ್ಲೂ ಅದೇ ರೀತಿ ಮಾತನಾಡಿದ್ದಾರೆ, ನೀನ್ ಯಾವಳೇ ನನ್ನ ಕೇಳೋಕೆ ಅಂತ ಸಂಗೀತ ಹೇಳಿದಾಗ, ನೀನು ಮಾತಾಡೋದು ನೋಡಿದ್ರೆ ನೀನು ಎಂಥ ಕಿತ್ತೊದೋಳು ಅಂತ ಗೊತ್ತಾಗುತ್ತೆ ಅಂತ ನಮ್ರತಾ ಹೇಳಿದ್ದಾರೆ. ಹಾಗೆಯೇ ತನಿಷಾ ಅವರ ಬಗ್ಗೆ ಮಾತಾನಡುವಾಗ ಕೆಟ್ಟಪದ ಬಳಸಿ ಬೀಪ್ ಹಾಕಿಸಿಕೊಂಡಿದ್ದರು.

ನಮ್ರತಾ ಅವರ ಈ ವರ್ತನೆ ಬಗ್ಗೆ ನೆಟ್ಟಿಗರು ಮತ್ತು ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇರೆಯವರಿಗೆ ಹೆಣ್ಣುಮಕ್ಕಳಿಗೆ ಗೌರವ ಕೊಡಬೇಕು ಎಂದು ಹೇಳಿ ಗೌರವ ನಿರೀಕ್ಷೆ ಮಾಡುವ ನಮ್ರತಾ, ತಾವು ಇಂಥ ಪದಬಳಕೆ ಮಾಡುವುದು ಎಷ್ಟು ಸರಿ ಎನ್ನುತ್ತಿದ್ದಾರೆ ವೀಕ್ಷಕರು. ಇದೀಗ ನಮ್ರತಾ ಅವರ ಈ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಮ್ರತಾ ಅವರ ಮೇಲೆ ಗೌರವ ಇತ್ತು ಈ ರೀತಿಯ ವರ್ತನೆ ನಿರೀಕ್ಷೆ ಮಾಡಿರಲಿಲ್ಲ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ರತಾ ಮಾತ್ರವಲ್ಲ, ರಕ್ಷಕ್ ಬುಲೆಟ್ ಕೂಡ ತನಿಷಾ ಅವರ ಬಗ್ಗೆ ಕೆಟ್ಟಪದ ಬಳಸಿದ ಕಾರಣಕ್ಕೆ, ಬೀಪ್ ಹಾಕಿಸಿಕೊಂಡರು. ಇನ್ನು ವಿನಯ್ ಕೂಡ ಕೆಟ್ಟ ಪದ ಬಳಸುವುದು, ಮರಿಯಾದೆ ಇಲ್ಲದೆ ಮಾತನಾಡುವುದು ಮಾಡುತ್ತಿರುವ ಕಾರಣ ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಇಂಥ ವರ್ತನೆಗಳು ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಇತ್ಯರ್ಥವಾಗುತ್ತಾ ಎಂದು ಕಾಯುತ್ತಿದ್ದಾರೆ ವೀಕ್ಷಕರು.

Leave a Comment