Bigg Boss: ಮತ್ತೆ ಕಾರ್ತಿಕ್ ಸಂಗೀತ ಬಗ್ಗೆ ಟಾಕ್ ಶುರು ಮಾಡಿದ ವಿನಯ್ ನಮ್ರತಾ! ಇಬರಿಬ್ಬರ ಸ್ನೇಹ ಟಾರ್ಗೆಟ್ ಆಗ್ತಿರೋದ್ಯಾಕೆ?

0 3

Bigg Boss: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ಭಾರಿ ಸುದ್ದಿಯಲ್ಲಿದ್ದ ಜೋಡಿ ಸಂಗೀತ ಮತ್ತು ಕಾರ್ತಿಕ್. ಇವರಿಬ್ಬರ ಜೊತೆಗೆ ತನಿಷಾ, ಈ ಮೂವರು ತಮ್ಮ ಸ್ನೇಹ ಮತ್ತು ಒಗ್ಗಟ್ಟಿನಿಂದ ಜನರ ಮನಸ್ಸಿನಲ್ಲೂ ಹೆಸರು ಗಳಿಸಿದ್ದರು. ಆದರೆ ಒಂದೆರಡು ವಾರಗಳ ಹಿಂದೆ ಮೂವರ ನಡುವೆ ಮನಸ್ತಾಪ ಶುರುವಾಗಿ ಸಂಗೀತ ಇವರಿಬ್ಬರಿಂದ ದೂರವಾಗಿದ್ದರು. ವಿನಯ್ ತಂಡವನ್ನು ಸೇರಿಕೊಂಡಿದ್ದರು ಸಂಗೀತ.

ವಿನಯ್ ತಂಡ ಸಂಗೀತ ಕಾರ್ತಿಕ್ ವಿರುದ್ಧವೇ ಇದ್ದರು ಕೂಡ, ಸಂಗೀತ ತಮ್ಮ ತಂಡಕ್ಕೆ ಬಂದಾಗ ಚೆನ್ನಾಗಿಯೇ ಇದ್ದರು. ಕಿಚ್ಚನ ಪಂಚಾಯ್ತಿಯಲ್ಲಿ ಬದಲಾವಣೆ ಬಗ್ಗೆ ಚರ್ಚೆಯಾದಾಗ ಎರಡು ದಿನ ಸರಿ ಹೋಗ್ತಾರೆ ಎಂದು ವಿನಯ್ ಕೂಡ ಹೇಳಿದ್ದರು. ಅದೇ ರೀತಿ ಕಾರ್ತಿಕ್ ಸಂಗೀತ ಈಗ ಸರಿ ಹೋಗಿದ್ದಾರೆ. ಮೊದಲಿನ ಹಾಗೆ ಒಳ್ಳೆಯ ಫ್ರೆಂಡ್ಸ್ ಆಗಿದ್ದಾರೆ. ಜೊತೆಯಾಗಿ ಸಮಯ ಕಳೆಯುತ್ತಿದ್ದಾರೆ.

ಇದು ವಿನಯ್ ಅಂಡ್ ಗ್ಯಾಂಗ್ ಗೆ ಇಷ್ಟವಾಗುತ್ತಿಲ್ಲ. ಇಷ್ಟು ದಿನ ಸಂಗೀತ ತಮ್ಮ ಜೊತೆಗಿದ್ದಾಗ ಸುಮ್ಮನಿದ್ದವರು ಈಗ ಮತ್ತೆ ಅವರಿಬ್ಬರ ಬಗ್ಗೆ ಮಾತನಾಡೋದಕ್ಕೆ ಶುರು ಮಾಡಿದ್ದಾರೆ. ಈಗ ಸಂಗೀತ ಕಾರ್ತಿಕ್ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಸಂಗೀತ ಅವರಿಗೆ ಹುಷಾರಿರಲಿಲ್ಲ. ಆ ವೇಳೆ ಕಾರ್ತಿಕ್ ನಮ್ರತಾ ಜೊತೆಗಿದ್ದರು ಸಂಗೀತ ರೆಸ್ಟ್ ಮಾಡುತ್ತಿದ್ದರು. ಆತ ನಮ್ರತಾ ನಿಮ್ಮವರು ಹೇಗಿದ್ದಾರೆ ಎಂದು ಕೇಳುತ್ತಾರೆ..

ಆಗ ಕಾರ್ತಿಕ್ ತಕ್ಷಣವೇ ಅಲ್ಲಿಂದ ಸಂಗೀತ ಅವರ ಹತ್ತಿರ ಹೋಗಿ ಮಾತನಾಡೋದಕ್ಕೆ ಶುರು ಮಾಡುತ್ತಾರೆ. ಇದನ್ನು ನೋಡಿದ ನಮ್ರತಾ ಇವರದ್ದು ಕಿತ್ತೋದ್ ಲವ್ ಸ್ಟೋರಿ ಎಂದು ಹೇಳುತ್ತಾರೆ. ಇನ್ನು ವಿನಯ್ ಕೂಡ ಇದೇ ರೀತಿ ಮಾತನಾಡೋದಕ್ಕೆ ಶುರು ಮಾಡುತ್ತಾರೆ. ಕಾರ್ತಿಕ್ ಜೊತೆಗೆ ಜಗಳ ಆದಾಗ ಅವನು ಹೇಳಿದ್ದು ಕೇಳಿಸಲಿಲ್ಲ. ಬಳೆ ವಿಷಯ ಮಾತ್ರ ದೊಡ್ಡದಾಯ್ತು.

ಆ ವಿಷಯಕ್ಕೆ ಪ್ರೋವೋಕ್ ಮಾಡಿದ್ದು ಯಾರು? ಅದೊಂದು ಟಾಸ್ಕ್ ಬಿಟ್ಟು ಬೇರೆ ಯಾವ ಟಾಸ್ಕ್ ಆಡಿದ್ದಾಳೆ? ಹ್ಯಾಂಗಿಂಗ್ ಟಾಸ್ಕ್ ಒಂದೇ, ಬರೀ ರೋಮ್ಯಾಂಟಿಕ್ ಸೀನ್ ಮಾಡಿಕೊಂಡು, ಬಾಡಿಗೆ ಶೋಕಿ ಮಾಡ್ಕೊಂಡು ಓಡಾಡ್ತಿದ್ದಾಳೆ.. ಎಂದು ಸಂಗೀತ ಬಗ್ಗೆ ಹೇಳಿದ್ದಾರೆ ವಿನಯ್. ವಿನಯ್ ಹೇಳಿದ ಈ ಮಾತು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

Leave A Reply

Your email address will not be published.