Bigg Boss: ಈ ಬಾರಿ ಬಿಗ್ ಬಾಸ್ ಗೆಲ್ಲೋದು ಯಾರು ಗೊತ್ತಾ? ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ!

0 1

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಈ ವಾರ ಎಲ್ಲಾ ಸ್ಪರ್ಧಿಗಳು ಮತ್ತೆ ಮಕ್ಕಳಾಗಿದ್ದಾರೆ. ಬಿಗ್ ಬಾಸ್ ಪ್ರಾಥಮಿಕ ಶಾಲೆ ಟಾಸ್ಕ್ ಶುರುವಾಗಿದೆ. ಈ ಟಾಸ್ಕ್ ನಲ್ಲಿ ದಿನಕ್ಕೆ 4 ಸ್ಪರ್ಧಿಗಳು ಟೀಚರ್ ಆದರೆ ಇನ್ನೂ 8 ಸ್ಪರ್ಧಿಗಳು ವಿದ್ಯಾರ್ಥಿಗಳಾಗಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ತನಿಷಾ, ಮೈಕಲ್, ಪ್ರತಾಪ್ ಮತ್ತು ಪವಿ ಟೀಚರ್ಸ್ ಆಗಿದ್ದರು.

ಇಂದಿನ ಸಂಚಿಕೆಯಲ್ಲಿ ಸಂಗೀತ, ಸಿರಿ, ನಮ್ರತಾ ಮತ್ತು ತುಕಾಲಿ ಸಂತೋಷ್ ಟೀಚರ್ಸ್ ಆಗಿದ್ದಾರೆ. ಸ್ಪರ್ಧಿಗಳೆಲ್ಲ ಮತ್ತೆ ಬಾಲ್ಯಕ್ಕೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಎನ್ನುವ ಚರ್ಚೆ ಶುರುವಾಗಿದ್ದು, ಬ್ರಹ್ಮಾಂಡ ಗುರುಜಿ ಭವಿಷ್ಯ ನುಡಿದಿದ್ದಾರೆ.

ಬ್ರಹ್ಮಾಂಡ ಗುರುಜಿ ನರೇಂದ್ರ ಶರ್ಮ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದರು. ಇದೀಗ ಇವರು ಭವಿಷ್ಯ ನುಡಿದಿದ್ದು, ಬಿಗ್ ಬಾಸ್ ಗೆಲ್ಲೋದು ವಿನಯ್ ಎಂದು ಹೇಳಿದ್ದಾರೆ. ಹೌದು, ವಿನಯ್ ತುಂಬಾ ಒಳ್ಳೆಯ ಮನುಷ್ಯ, ಅವನು ಚೆನ್ನಾಗಿ ನಟನೆ ಮಾಡ್ತಿದ್ದಾನೆ, ಪಾತ್ರವಲ್ಲ ನಿಜವಾದ ನಟನೆ ಎಂದಿದ್ದಾರೆ. ಇನ್ನು ಪ್ರತಾಪ್ ಅವರ ಬಗ್ಗೆ ಮಾತನಾಡಿ, ಪ್ರತಾಪ್ ಎಲ್ಲಾ ತರಾನು ನಟನೆ ಮಾಡ್ತಿದ್ದಾನೆ ಜನ ಎಲ್ಲಾ ಪ್ರತಾಪ್ ಗೆಲ್ಲೋದು ಅಂದುಕೊಂಡಿದ್ದಾರೆ, ಆದರೆ ಅದು ಆಗಲ್ಲ ಎಂದಿದ್ದಾರೆ.

ಇನ್ನು ಕಾರ್ತಿಕ್ ಬಗ್ಗೆ ಮಾತನಾಡಿ, ಅವನಿಗೆ ಹಿತ್ತಾಳೆ ಕಿವಿ, 6 ಕೊಟ್ರೆ ಅತ್ತೆ ಕಡೆ, 3 ಕೊಟ್ರೆ ಸೊಸೆ ಕಡೆ. ಯಾರು ಏನೇ ಹೇಳಿದ್ರು ಸರಿ ಅನ್ಕೋತಾನೇ, ಪೆದ್ದ ಎಂದು ಹೇಳಿದ್ದಾರೆ. ಈ ಮಾತುಗಳು ಈಗ ಸಿಕ್ಕಾಪಟ್ಟೆ ಚರ್ಚೆಗೆ ಕಾರಣ ಆಗಿದ್ದು, ನೆಟ್ಟಿಗರು ಮಾತ್ರ ವಿನಯ್ ಯಾವುದೇ ಕಾರಣಕ್ಕೂ ಗೆಲ್ಲಬಾರ್ದು ಎಂದು ಹೇಳುತ್ತಿದ್ದಾರೆ.

Leave A Reply

Your email address will not be published.