Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ವಿನಯ್ ಗೌಡ ಅವರು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಮೂರು ವಾರಗಳಿಂದ ರೂಡ್ ಅನ್ನಿಸುತ್ತಿದ್ದು, 4ನೇ ವಾರ ಇದು ಇನ್ನಷ್ಟು ಜಾಸ್ತಿಯಾಗಿದೆ. ಕಳೆದ ಎಪಿಸೋಡ್ ಗಳಿಂದ ವಿನಯ್ ಅವರ ವರ್ತನೆ ಅತಿಯಾಗಿದ್ದು, ನೆಟ್ಟಿಗರು ಇವರನ್ನು ಬಾಯ್ಕಾಟ್ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಅಷ್ಟಕ್ಕೂ ಏನಾಗುತ್ತಿದೆ ಗೊತ್ತಾ? ಪೂರ್ತಿ ವಿಷಯ ತಿಳಿಸುತ್ತೇವೆ ನೋಡಿ..
ಮೂರನೇ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಎಲ್ಲಾ ಸ್ಪರ್ಧಿಗಳಿಗೆ ವೀಕ್ಷಕರಿಂದ ಬಂದಿರುವ ಒಂದು ಗಿಫ್ಟ್ ಮತ್ತು ಲೆಟರ್ ಕೊಟ್ಟರು. ಅದರಲ್ಲಿ ವಿನಯ್ ಅವರಿಗೆ ಆನೆಯನ್ನು ಗಿಫ್ಟ್ ಆಗಿ ಕೊಡಲಾಗಿತ್ತು, ಹಾಗೆಯೇ ವಿನಯ್ ಅವರಿಗೆ ಸರಿಸಾಟಿ ಯಾರು ಇಲ್ಲ ಎನ್ನುವ ಹಾಗೆ ಬಿಂಬಿಸಲಾಯಿತು. ವಿನಯ್ ಅವರು ಕೂಡ ಆ ಮನೆಯಲ್ಲಿ ತಮಗೆ ಕಾಂಪಿಟೇಶನ್ ಎನ್ನುವ ಹಾಗೆ ಯಾರು ಇಲ್ಲ ಎಂದು ಹೇಳಿದ್ದರು.
ಆದರೆ ಇದು ಮನೆಯವರಿಗೆ ಸರಿ ಎನ್ನಿಸಲಿಲ್ಲ, ಕಾರ್ತಿಕ್, ನಮ್ರತಾ ಎಲ್ಲರೂ ನಾವು ಟಫ್ ಕಾಂಪಿಟೇಶನ್ ಎಂದು ಹೇಳಿದ್ದರು. ಇತ್ತ ಹೊರಗಿರುವ ವೀಕ್ಷಕರಿಗೆ ಕೂಡ ವಿನಯ್ ಅವರ ವರ್ತನೆ ಇಷ್ಟವಿರಲಿಲ್ಲ. ಅಂದು ಸಿಕ್ಕ ಬಿಲ್ಡಪ್ ನಲ್ಲೇ ನಾಲ್ಕನೇ ವಾರ ವಿನಯ್ ಅವರ ಕೋಪ, ದರ್ಪ ಇದೆಲ್ಲವೂ ಇನ್ನಷ್ಟು ಹೆಚ್ಚಾದ ಹಾಗೆ ಕಾಣುತ್ತಿದೆ. ಮನೆಯ ಬೇರೆ ಸ್ಪರ್ಧಿಗಳ ಮೇಲೆ ಬೇಕೆಂದೇ ರೇಗುವುದು, ಹರ್ಟ್ ಆಗುವ ಹಾಗೆ ಮಾತನಾಡುವುದು ಮಾಡುತ್ತಿದ್ದಾರೆ.
ನಿನ್ನೆಯ ಎಪಿಸೋಡ್ ನಲ್ಲಿ ನಾಮಿನೇಷನ್ ವಿಚಾರಕ್ಕೆ ಭಾಗ್ಯಶ್ರೀ ಅವರು ದಸರಾ ಹಬ್ಬದ ಕಾರಣಕ್ಕೆ ಉಳಿದಿದ್ದಾರೆ ಎಂದು ಪದೇ ಪದೇ ಹೇಳಿ ನೋವಾಗುವ ಹಾಗೆ ಮಾಡಿದರು. ಈ ಥರ ಸೀರಿಯಲ್ ಗಳಲ್ಲಿ ಮಾಡುವ ಹಾಗೆ ಮಾಡಬೇಡಿ, ಈ ಡ್ರಾಮಾ ಎಲ್ಲಾ ನನ್ನ ಹತ್ತಿರ ನಡಿಯಲ್ಲ ಎಂದು ದರ್ಪದಿಂದ ಹೇಳಿದ್ದರು. ವಿನಯ್ ಮಾತುಗಳಿಗೆ ಭಾಗ್ಯಶ್ರೀ ಕಣ್ಣೀರು ಹಾಕಿದರು, ಭಾಗ್ಯಶ್ರೀ ಅವರು ಮಾತನಾಡಲು ಟ್ರೈ ಮಾಡಿದರು ಕೂಡ ವಿನಯ್ ಬೇರೆ ಥರವೇ ಮಾತನಾಡಿದರು. ಮನೆಯವರು ತಮ್ಮನ್ನು ಪ್ರಶ್ನೆ ಮಾಡುವ ಹಾಗಿಲ್ಲ ಎನ್ನುವ ಹಾಗಿದ್ದರು.
ಈ ಕಾರಣಗಳಿಂದ ವಿನಯ್ ಅವರನ್ನು ಕಂಡರೆ ಮನೆಯವರಿಗೆ ಮತ್ತು ನೆಟ್ಟಗರಿಗೆ ಮತ್ತು ವೀಕ್ಷಕರಿಗೆ ಸಹ ಇಷ್ಟವಾಗಿಲ್ಲ. ವಿನಯ್ ದರ್ಪ ಹೆಚ್ಚಾಗಿದೆ, ಈ ವಿನಯ್ ನ ಮೊದಲು ಮನೆಯಿಂದ ಹೊರಗೆ ಹಾಕಿ ಎಂದು ನೆಟ್ಟಿಗರು ಅವರು ವ್ಯಕ್ತಪಡಿಸುತ್ತಿದ್ದಾರೆ. ವಿನಯ್ ಅವರಿಗೆ ಹೇಟರ್ಸ್ ಸಹ ಹೆಚ್ಚಾಗಿದ್ದು, ಮನೆಯವರ ಜೊತೆಗೆ ಈ ವರ್ತನೆ ಅಸಹ್ಯವಾಗಿದೆ ಎಂದು ಹೇಳುತ್ತಿದ್ದಾರೆ. ಹಾಗೆಯೇ ಸುದೀಪ್ ಅವರು ವಿನಯ್ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬೇಕು ಎನ್ನುವುದು ನೆಟ್ಟಿಗರ ನಿರೀಕ್ಷೆ ಆಗಿದೆ.