Bigg Boss: ಟಾಸ್ಕ್ ನಲ್ಲಿ ಕಾರ್ತಿಕ್ ತಲೆ ಬೋಳಿಸಲು ಹೇಳಿ ಟ್ರೋಲ್ ಆದ ಸಂಗೀತ!

Written by Pooja Siddaraj

Published on:

Bigg Boss: ಬಿಗ್ ಬಾಸ್ ಶೋ ಅಂದ್ರೆ ಬಿಗ್ ಬಾಸ್ ಕೊಡುವ ವಿಭಿನ್ನವಾದ ಟಾಸ್ಕ್ ಗಳಿಂದಲೇ ಹೆಚ್ಚು ಜನರ ಗಮನ ಸೆಳೆಯುತ್ತದೆ. ಕೆಲವೊಮ್ಮೆ ಗ್ರೂಪ್ ಮಾಡಿ ಟಾಸ್ಕ್ ಕೊಡುವ ಬಿಗ್ ಬಾಸ್ ಇನ್ನು ಕೆಲವೊಮ್ಮೆ ಪ್ರತಿ ಸ್ಪರ್ಧಿಗೆ ವಿಭಿನ್ನವಾಗಿ ಅಥವಾ ವಿಶೇಷವಾಗಿ ಟಾಸ್ಕ್ ನೀಡುತ್ತಾರೆ. ಇದು ಕೆಲವೊಮ್ಮೆ ಮನೆಯ ಇತರ ಸ್ಪರ್ಧಿಗಳಿಗೆ ಟೆನ್ಷನ್ ಸಹ ಕೊಡಬಹುದು.

ಇದೇ ಕಾರಣಕ್ಕೆ ಬಿಗ್ ಬಾಸ್ ಇಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಪ್ರಸ್ತುತ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಇಂಥದ್ದೇ ಒಂದು ಟ್ವಿಸ್ಟ್ ಸಿಕ್ಕಿದೆ. ಇಂದಿನ ಎಪಿಸೋಡ್ ನ ಪ್ರೋಮೋ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಬಿಡುಗಡೆ ಆಗಿದ್ದು, ಪ್ರೋಮೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಇಂದಿನ ಪ್ರೊಮೋದಲ್ಲಿ ಮನೆಯ ಸ್ಪರ್ಧಿಗಳು 2 ತಂಡವಾಗಿ ವಿಂಗಡಣೆ ಮಾಡಿದ್ದಾರೆ. ಒಂದು ತಂಡಕ್ಕೆ ಗಜಕೇಸರಿ ಎಂದು ಹೆಸರು ಇಟ್ಟುಕೊಳ್ಳಲಾಗಿದೆ.

ಈ ತಂಡದಲ್ಲಿ ವಿನಯ್, ನಮ್ರತಾ, ಸ್ನೇಹಿತ್, ಸಂಗೀತ, ಪ್ರತಾಪ್, ಸಿರಿ ಮತ್ತು ನಮ್ರತಾ ಇದ್ದಾರೆ. ಇನ್ನೊಂದು ತಂಡದ ಹೆಸರು ಸಂಪತ್ತಿಗೆ ಸವಾಲ್, ಈ ತಂಡದಲ್ಲಿ ಕಾರ್ತಿಕ್, ತನಿಷಾ, ಮೈಕಲ್, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಮತ್ತು ನೀತು ಇದ್ದಾರೆ. ಒಂದು ತಂಡದವರು ಮತ್ತೊಂದು ತಂಡಕ್ಕೆ ಟಾಸ್ಕ್ ಕೊಡುವ ಅವಕಾಶವನ್ನು ಬಿಗ್ ಬಾಸ್ ಕೊಟ್ಟಿದ್ದು, ಸಂಗೀತ ಅವರು ಎದುರಾಳಿ ತಂಡಕ್ಕೆ ಟಾಸ್ಕ್ ಕೊಡುವುದನ್ನು ನೋಡಬಹುದು.

ಸಂಗೀತ ಅವರು ಸ್ಟೇಜ್ ಬಳಿ ಬಂದು ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ಇಬ್ಬರು ಕೂಡ ಹೆಡ್ ಶೇವ್ ಮಾಡಬೇಕು ಎಂದಿದ್ದಾರೆ. ಸಂಗೀತ ಈ ರೀತಿ ಹೇಳಿದಾಗ ತನಿಷಾ ಜೋರಾಗಿ ಕೂಗಾಡಲು ಶುರು ಮಾಡಿದ್ದಾರೆ. ಇತ್ತ ಕಾರ್ತಿಕ್, ಟೀಮ್ ಗೆ ಪಾಯಿಂಟ್ ಬರುತ್ತದೆ ಎಂದರೆ ಕೂದಲು ಶೇವ್ ಮಾಡುತ್ತೇನೆ,ಕೂದಲು ವಾಪಸ್ ಬರುತ್ತೆ ಎಂದು ಹೇಳಿ, ಹೆಡ್ ಶೇವ್ ಮಾಡಿಸಿಕೊಳ್ಳುವುದಕ್ಕೆ ಒಪ್ಪಿಕೊಂಡಿದ್ದಾರೆ, ಕಾರ್ತಿಕ್ ಹೆಡ್ ಶೇವ್ ಮಾಡುವಾಗ ತನಿಷಾ ಈಗ ನಿಮಗೆ ಖುಷಿ ಆಯ್ತಾ ಮೇಡಂ ಎಂದು ಹೇಳಿದ್ದಾರೆ..

ಇದೀಗ ಈ ಪ್ರೊಮೋ ವೈರಲ್ ಆಗಿದ್ದು, ಕಾರ್ತಿಕ್ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಸಂಗೀತ ಟ್ರೋಲ್ ಆಗುತ್ತಿದ್ದಾರೆ. ಕಾರ್ತಿಕ್ ಅವರನ್ನು ಸಂಗೀತ ಬಳಸಿಕೊಂಡರು ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಸಂಗೀತ ಅವರು ಸ್ವಂತವಾಗಿ ತೆಗೆದುಕೊಂಡಿರುವ ನಿರ್ಧಾರ ಇದಲ್ಲ, ಟೀಮ್ ಹೇಳಿದ ಟಾಸ್ಕ್ ಅನ್ನು ಸಂಗೀತ ಬಂದು ಹೇಳಿದ್ದಾರೆ ಎಂದು ಇನ್ನು ಕೆಲವರು ವಾದ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ಕುತೂಹಲ ಸೃಷ್ಟಿಸುತ್ತಲೇ ಇದೆ.

Leave a Comment