Bigg Boss: ವಿನಯ್ ಮೇಲಿನ ಕೋಪಕ್ಕೆ ಬಲಿಯಾಗಿದ್ದು ನಾನು: ಎಲಿಮಿನೇಶನ್ ನಂತತ ಶಾಕಿಂಗ್ ಹೇಳಿಕೆ ಕೊಟ್ಟ ಪವಿ!

Written by Pooja Siddaraj

Published on:

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಮಾಡೆಲ್ ಪವಿ ಪೂವಪ್ಪ ಮೂರೇ ವಾರಕ್ಕೆ ತಮ್ಮ ಆಟ ಮುಗಿಸಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಪವಿ ಅವರು ಬಿಗ್ ಮನೆಗೆ ಎಂಟ್ರಿ ಕೊಟ್ಟ ಎರಡನೇ ವಾರಕ್ಕೆ ಉತ್ತಮ ತೆಗೆದುಕೊಂಡಿದ್ದರು. ಮುಂದಿನ ವಾರ ಕಳಪೆ ತೆಗೆದುಕೊಂಡು ಜೈಲಿಗೆ ಹೋಗಿ ಬಂದಿದ್ದರು. ಆದರೆ ಈಗ ಎಲಿಮಿನೇಟ್ ಆಗಿದ್ದಾರೆ.

ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿದ್ದ ಕಾರಣ ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಸ್ಪರ್ಧಿಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶವಿತ್ತು. ಹಾಗೆಯೇ ತಮ್ಮದೇ ರೀತಿಯಲ್ಲಿ ಗೇಮ್ ಪ್ಲಾನ್ ಮಾಡಿ ಆಡಬಹುದಿತ್ತು ಪವಿ. ಆದರೆ ಇವರ ಲೆಕ್ಕಾಚಾರ ಅಂದುಕೊಂಡ ಹಾಗಿರಲಿಲ್ಲ, ಭರ್ಜರಿ ಎನ್ನುವಂಥ ಪರ್ಫಾರ್ಮೆನ್ಸ್ ಕೂಡ ಕೊಟ್ಟಿರಲಿಲ್ಲ. ಹಾಗಾಗಿ ಪವಿ ಅವರು ಮನೆಯಿಂದ ಹೊರಬಂದಿದ್ದಾರೆ..

ಎಲಿಮಿನೇಟ್ ಆದ ಬಳಿಕ ಪವಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ವಿನಯ್ ಮೇಲಿನ ಕೋಪಕ್ಕೆ ಬಲಿಯಾಗಿದ್ದು ನಾನು ಎಂದು ಹೇಳಿದ್ದಾರೆ. ಬಿಗ್ ಬಾಸ್ ಜರ್ನಿ ಬಗ್ಗೆ ಮಾತನಾಡಿರುವ ಪವಿ ಅವರು, ನಾನು ಮನೆಯೊಳಗೆ ಹೋದಮೇಲೆ ಯಾರ ಜೊತೆಗೂ ಜಗಳ ಮಾಡಿಕೊಂಡಿರಲಿಲ್ಲ, ಎಲ್ಲರ ಜೊತೆಗೆ ಚೆನ್ನಾಗಿದ್ದೆ, ನನಗೆ ಕಂಫರ್ಟ್ ಇರೋರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದೆ, ವಿನಯ್ ನಮ್ರತಾ ಜೊತೆಗೆ ಹೆಚ್ಚು ಮಾತಾಡ್ತಾ ಇದ್ದೆ.

ನಾನು ವಿನಯ್ ಟೀಮ್ ನಲ್ಲಿದ್ದೀನಿ ಅಂತ ಕಾರ್ತಿಕ್ ಸಂಗೀತ ನನ್ನನ್ನ ಟಾರ್ಗೆಟ್ ಮಾಡಿದ್ರು, ವಿನಯ್ ಮೇಲಿನ ಕೋಪಕ್ಕೆ ನಾನು ಬಲಿಯಾದೆ. ಹೊರಗೆ ಬರೋ ಮೊದಲು ನಾನೇ ಎಲಿಮಿನೇಟ್ ಆಗಬಹುದು ಅಂತ ಎಲ್ಲೋ ಒಂದು ಕಡೆ ಅನ್ನಿಸಿತ್ತು. 80% ನಾನೇ ಹೋಗೋದು ಅಂತ ಅಂದುಕೊಂಡಿದ್ದೆ ಅದೇ ರೀತಿ ಆಯಿತು.. ಎಂದು ಹೇಳಿದ್ದಾರೆ ಪವಿ ಪೂವಪ್ಪ.

Leave a Comment