Bigg Boss: ಎರಡೇ ವಾರಕ್ಕೆ ಬಿಗ್ ಬಾಗ್ ಮನೆಯಿಂದ ಪವಿ ಪೂವಪ್ಪ ಔಟ್!

0 12

Bigg Boss: ಬಿಗ್ ಬಾಸ್ ಮನೆಯಲ್ಲಿ 10ನೇ ವಾರದ ಕಿಚ್ಚನ ಪಂಚಾಯಿತಿ ಮುಗಿದಿದೆ. ಈ ವಾರ ಎಲ್ಲರೂ ಇಷ್ಟ ಪಡುವಂಥ ಸುಂದರವಾದ ಟಾಸ್ಕ್ ಕೊಟ್ಟರು ಸಹ ಮನೆ ಮಂದಿ ಉತ್ತಮವಾಗಿ ಅದನ್ನು ಬಳಸಿಕೊಳ್ಳಲಿಲ್ಲ. ಅಂತೂ ಟಾಸ್ಕ್ ಮುಗಿದಿದ್ದು 10ನೇ ವಾರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ಪವಿ ಪೂವಪ್ಪ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ..

ಈ ವಾರ ಬಿಗ್ ಬಾಸ್ ಪ್ರಾಥಮಿಕ ಶಾಲೆ ಟಾಸ್ಕ್ ಅನ್ನು ಮನೆಯ ಸ್ಪರ್ಧಿಗಳಿಗೆ ನೀಡಲಾಗಿತ್ತು. ಒಂದು ದಿನ 4 ಸ್ಪರ್ಧಿಗಳು ಟೀಚರ್ ಗಳಾಗಿ, ಇನ್ನು 8 ಸ್ಪರ್ಧಿಗಳು ವಿದ್ಯಾರ್ಥಿಗಳಾಗಿ ಟಾಸ್ಕ್ ನಲ್ಲಿ ಪಾಲ್ಗೊಂಡಿದ್ದರು. ಶುರುವಿನಲ್ಲಿ ಟಾಸ್ಕ್ ಉತ್ತಮವಾಗಿಯೇ ಇದ್ದರು ಸಹ ನಂತರ ಪರ್ಸನಲ್ ಆಗಿ ನಡೆಯಿತು ಎಂದರೆ ತಪ್ಪಲ್ಲ. ಇನ್ನು ಕ್ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸ್ಪರ್ಧಿಗಳಿಗೆ ತಮ್ಮ ಕೈಯಾರೆ ಅಡುಗೆ ಮಾಡಿ ಕಳಿಸಿಕೊಟ್ಟಿದ್ದರು..

ಮನೆಯ ಸ್ಪರ್ಧಿಗಳು ಕಿಚ್ಚನ ಕೈರುಚಿ ಸವಿದು ಎಂಜಾಯ್ ಮಾಡಿದ್ದರು. ಆದರೆ ನಿನ್ನೆಯ ವೀಕೆಂಡ್ ಸಂಚಿಕೆ ಶುರುವಿನಲ್ಲೇ ಸುದೀಪ್ ಅವರು ಗರಂ ಆಗಿದ್ದರು. ಎರಡು ಸಾರಿ ಬಜರ್ ಆಗಿ ಸುದೀಪ್ ಅವರು ಮನೆಯೊಳಗೆ ಎಂಟ್ರಿ ಕೊಟ್ಟ ಮೇಲು ಕೂಡ ಸ್ಪರ್ಧಿಗಳು ಬಂದು ಕುಳಿತಿರಲಿಲ್ಲ. ಈ ಕಾರಣಕ್ಕೆ ಸ್ಪರ್ಧಿಗಳ ಶಿಸ್ತಿನ ಮೇಲೆ ಕೋಪಗೊಂಡಿದ್ದರು ಸುದೀಪ್ ಅವರು. ಪ್ರತಾಪ್, ಮೈಕಲ್, ವಿನಯ್ ಇವರಿಗೆಲ್ಲಾ ಚೆನ್ನಾಗಿ ಕ್ಲಾಸ್ ತೆಗೆದುಕೊಂಡರು.

ಬಳಿಕ ಮತ್ತೊಮ್ಮೆ ಸೆಷನ್ ಶುರು ಮಾಡಿ, ಎಲ್ಲವು ಚೆನ್ನಾಗಿಯೇ ನಡೆಯಿತು. ಸುಂದರವಾಗಿ ತೆಗೆದುಕೊಂಡು ಹೋಗಬಹುದಾಗಿದ್ದ ಟಾಸ್ಕ್ ಅನ್ನು ಸ್ಪರ್ಧಿಗಳು ಹೇಗೆ ತೆಗೆದುಕೊಂಡು ಹೋದರು ಎನ್ನುವುದನ್ನು ಮನವರಿಕೆ ಮಾಡಿಸಿದರು ಕಿಚ್ಚ. ಇನ್ನು ನಿನ್ನೆಯ ಸಂಚಿಕೆಯಲ್ಲಿ ಸಂಗೀತ, ಪ್ರತಾಪ್, ವಿನಯ್, ಪವಿ, ಸಿರಿ, ಮೈಕಲ್ ನಾಮಿನೇಟ್ ಆಗಿದ್ದು ಹೊರಹೋಗುವವರು ಯಾರು ಎನ್ನುವ ಕುತೂಹಲ ಇತ್ತು.

ನಿನ್ನೆಯ ಸಂಚಿಕೆಯಲ್ಲಿ ವಿನಯ್ ಅವರನ್ನು ಸೇವ್ ಮಾಡಿದ್ದರು ಕಿಚ್ಚ ಸುದೀಪ್. ಇಂದು ಒಬ್ಬರನ್ನು ಎಲಿಮಿನೇಟ್ ಮಾಡಲಿದ್ದು, ಈ ವಾರ ಮನೆಯಿಂದ ಹೊರಬಂದಿರುವ ಸ್ಪರ್ಧಿ ಯಾರು ಎಂದು ಈಗಾಗಲೇ ಗೊತ್ತಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಿಗ್ ಬಾಸ್ ಮನೆಗೆ ಎರಡು ವಾರಗಳ ಹಿಂದೆ ಬಂದಿದ್ದ ಪವಿ ಪೂವಪ್ಪ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹೌದು, ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಪವಿ ಪೂವಪ್ಪ ಅವರು ಅಂಥ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿರಲಿಲ್ಲ. ಈ ಕಾರಣಕ್ಕೆ ಇವರು ಈ ಬಾರಿ ಮನೆಯಿಂದ ಹೊರಬಂದಿದ್ದಾರೆ.

Leave A Reply

Your email address will not be published.