Bigg Boss: ಗುಂಪುಗಾರಿಕೆ ವಿರುದ್ಧ ಧ್ವನಿ ಎತ್ತಿದ ಪ್ರತಾಪ್! ವಿನಯ್ ಅಂಡ್ ಗ್ಯಾಂಗ್ ಗೆ ಪ್ರತಾಪ್ ತಿರುಗೇಟು!

Written by Pooja Siddaraj

Published on:

Bigg Boss: ಡ್ರೋನ್ ಪ್ರತಾಪ್, ಈ ವ್ಯಕ್ತಿ ಟ್ರೋಲ್ ಇಂದಲೇ ಹೆಚ್ಚು ಸುದ್ದಿಯಾದವರು. ಒಂದೆರಡು ವರ್ಷಗಳ ಹಿಂದೆ ಡ್ರೋನ್ ಪ್ರತಾಪ್ ಅವರು ತಾವು ಒಂದು ಡ್ರೋನ್ ಕಂಡುಹಿಡಿದಿರುವುದಾಗಿ ಹೇಳಿ ಪ್ರಚಾರ ಪಡೆದುಕೊಂಡಿದ್ದರು. ಬಳಿಕ ಅದೆಲ್ಲ ಸುಳ್ಳು ಎಂದು ಗೊತ್ತಾಗಿ, ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಈಗಲೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಅವರು ಟ್ರೋಲ್ ಆಗುತ್ತಲೇ ಇರುತ್ತಾರೆ..

ಟ್ರೋಲ್ ಅಂತೂ ತಪ್ಪಿಲ್ಲ, ಆದರೆ ಈಗ ಆ ಒಂದು ಕಾರಣಕ್ಕೆ ಜನರಿಹೇ ಇವರ ಮೇಲಿರುವ ಅಭಿಪ್ರಾಯ ಬದಲಾಗಿ ಡ್ರೋನ್ ಪ್ರತಾಪ್ ರನ್ನು ಇಷ್ಟಪಡುವುದಕ್ಕೆ ಶುರು ಮಾಡಿದ್ದಾರೆ. ನಮಗೆಲ್ಲ ಗೊತ್ತಿರುವ ಪ್ರತಾಪ್ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಇವರಿಗೆ ಸರಿಯಾದ ವೋಟ್ಸ್ ಬರದೆ, ವೇಟಿಂಗ್ ಲಿಸ್ಟ್ ನಲ್ಲಿದ್ದ ಪ್ರತಾಪ್, ಕೊನೆಯಲ್ಲಿ ಬಿಗ್ ಬಾಸ್ ಮನೆಯೊಳಗೆ ಹೋದರು.

ಈಗ ಪ್ರತಾಪ್ ಹಾಗೂ ಇದೇ ರೀತಿ ವೇಟಿಂಗ್ ಲಿಸ್ಟ್ ಇಂದ ಹೋದ 5 ಜನರನ್ನು ಅಸಮರ್ಥರು ಎಂದು ಪರಿಗಣಿಸಲಾಗಿತ್ತು. ಮೊದಲ ಎರಡು ವಾರಗಳ ಕಾಲ ಮನೆಯ ಸ್ಪರ್ಧಿಗಳಿಗೆ ಒಂದು ರೀತಿ ವಿರುದ್ಧವಾಗಿಯೇ ಇದ್ದ ಡ್ರೋನ್ ಪ್ರತಾಪ್ ಅವರು ನಂತರ ಎಲ್ಲರೊಡನೆ ಹೊಂದಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಹೊರಗಡೆ ಪ್ರತಾಪ್ ಅವರಿಗೆ ಒಳ್ಳೆಯ ಸಪೋರ್ಟ್ ಸಿಕ್ಕಿದೆ. ಜನರು ಪ್ರತಾಪ್ ಅವರನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಪ್ರತಾಪ್ ಅವರು ಮನೆಯವರೊಡನೆ ಮಾತನಾಡುತ್ತಿರುವ ವಿಚಾರ, ಮನೆಯವರೊಡನೆ ನಡೆದುಕೊಳ್ಳುತ್ತಿರುವ ರೀತಿ..

ಅದೆಲ್ಲವು ಇವರಿಗೆ ಒಳ್ಳೆಯ ಫ್ಯಾನ್ ಬೇಸ್ ತಂದುಕೊಟ್ಟಿದೆ ಎಂದರೆ ತಪ್ಪಲ್ಲ. ಸದಾ ಶಾಂತವಾಗಿಯೇ ಇರುತ್ತಿದ್ದ ಪ್ರತಾಪ್ ಇಂದಿನ ಸಂಚಿಕೆಯ ಪ್ರೊಮೋದಲ್ಲಿ ಸ್ನೇಹಿತ್ ಗೆ ತಮ್ಮದೇ ಶೈಲಿಯಲ್ಲಿ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಸ್ನೇಹಿತ್ ಸ್ನಾನಕ್ಕೆ ಹೋಗಿದ್ದರು, ನೆಕ್ಸ್ಟ್ ಸ್ನಾನಕ್ಕೆ ಹೋಗಬೇಕು ಎಂದು ಪ್ರತಾಪ್ ಕಾಯುತ್ತಿದ್ದರು. ಆದರೆ ಸ್ನೇಹಿತ್ ಹೊರಬಂದ ನಂತರ ವಿನಯ್ ಸ್ನಾನಕ್ಕೆ ಹೋದರು. ಆದರೆ ಪ್ರತಾಪ್ ಇನ್ನು ಹೆಚ್ಚಿನ ಸಮಯದಿಂದ ಅಲ್ಲೇ ಕಾಯುತ್ತಿದ್ದರು.

ಹಾಗಾಗಿ ವಿನಯ್ ಹೋಗಿದ್ದಕ್ಕೆ ಬೇಸರವಾಗಿ, ಯಾಕೆ ಈ ರೀತಿ ಮಾಡಿದ್ರಿ ಎಂದು ಸ್ನೇಹಿತ್ ಗೆ ಕೇಳಿದಾಗ, ನನ್ನ ಕೆಲಸವೇ ಆಗಿರಲಿಲ್ಲ ಎಂದು ಅಸಡ್ಡೆಯಿಂದ ಹೇಳಿದರು ಸ್ನೇಹಿತ್. ಆಗ ಪ್ರತಾಪ್ ಇಲ್ಲಿ ಎಲ್ಲವೂ ನೀವು ಅಂದುಕೊಂಡ ಹಾಗೆ ಮಾಡೋಕೆ ಆಗಲ್ಲ ಎನ್ನುತ್ತಾರೆ, ಆಗ ಸ್ನೇಹಿತ್ ಏನಿವಾಗ ಎಂದು ಮತ್ತೆ ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಪ್ರತಾಪ್, ನೀವೇನು ದೇವಲೋಕದಿಂದ ಇಳಿದು ಬಂದಿಲ್ಲ, ನಾವು ಮನುಷ್ಯರೇ ಎನ್ನುವುದನ್ನ ಅರ್ಥ ಮಾಡಿಕೊಳ್ಳಿ, ಗುಂಪುಗಾರಿಕೆ ಎಲ್ಲ ಇಲ್ಲಿ ನಡಿಯಲ್ಲ.. ಎಂದು ನಾಜೂಕಾಗಿಯೇ ಖಡಕ್ ಉತ್ತರ ಕೊಟ್ಟಿದ್ದಾರೆ ಪ್ರತಾಪ್.

Leave a Comment