Bigg Boss: ವೀಕ್ಷಕರ ಅಭಿಪ್ರಾಯವನ್ನು ನೇರವಾಗಿ ವಿನಯ್ ಗೆ ಹೇಳಿದ ಪ್ರತಾಪ್! ಹೊರಗಿನ ವೀಕ್ಷಕರ ದಿಲ್ ಖುಷ್!

0 1

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10 ಇನ್ನೊಂದು ವಾರದಲ್ಲಿ ಮುಗಿಯಬೇಕಿತ್ತು, ಆದರೆ 2 ವಾರಗಳ ಮುಂದಕ್ಕೆ ಹೋಗಿದೆ. ನಿನ್ನೆಯಷ್ಟೇ 13ನೇ ವಾರದ ವೀಕೆಂಡ್ ಪಂಚಾಯಿತಿ ಕಾರ್ಯಕ್ರಮ ನಡೆದಿದೆ. ಕಿಚ್ಚ ಸುದೀಪ್ ಅವರು ಖಡಕ್ ಆಗಿ ಮೈಕಲ್ ವಿನಯ್ ಗೆ ವಾರ್ನಿಂಗ್ ನೀಡಿದರು ಎಂದರೆ ತಪ್ಪಲ್ಲ. ನಿನ್ನೆಯ ಎಪಿಸೋಡ್ ನಲ್ಲಿ ಪ್ರತಾಪ್ ಅವರು ವಿನಯ್ ಗೆ ಹೇಳಿದ ಮಾತುಗಳು ಕೂಡ ಸಿಕ್ಕಾಪಟ್ಟೆ ಹೈಲೈಟ್ ಆಗಿದೆ..

ನಿನ್ನೆಯ ಸಂಚಿಕೆಯಲ್ಲಿ ಕೆಲವು ಟೈಟಲ್ ಗಳು ಇರುವ ಪುಸ್ತಕವನ್ನು ಇಟ್ಟು, ಯಾರಿಗೆ ಈ ಟೈಟಲ್ ಸೂಟ್ ಆಗುತ್ತದೆಯೋ, ಅವರಿಗೆ ಆ ಬುಕ್ ನ ಕವರ್ ಪೇಜ್ ಕೊಡಬೇಕು. ಆ ವ್ಯಕ್ತಿ ಆ ಟೈಟಲ್ ಬುಕ್ ಬರೆದರೆ ಚೆನ್ನಾಗಿರುತ್ತದೆ ಎಂದು ಹೇಳಲಾಗಿತ್ತು. ಒಬ್ಬೊಬ್ಬರು ಒಂದೊಂದು ಬುಕ್ ಗಳನ್ನು ಸದಸ್ಯರಿಗೆ ಕೊಟ್ಟರು ಸಹ ಇನ್ನು ಕೆಲವು ಬುಕ್ ಗಳು ಉಳಿದಿತ್ತು. ಮತ್ತೊಮ್ಮೆ ಯಾರಾದರೂ ಕೊಡುತ್ತೀರಾ ಎಂದು ಕೇಳಿದಾಗ ಪ್ರತಾಪ್ ಕೊಡುವುದಾಗಿ ಹೇಳಿದರು.

ಇನ್ನೊಬ್ಬರನ್ನು ತುಳಿದು ಬದುಕೋದು ಹೇಗೆ .. ಎಂದು ಟೈಟಲ್ ಇದ್ದ ಪುಸ್ತಕವನ್ನು ತೆಗೆದುಕೊಂಡ ಪ್ರತಾಪ್ ಅದನ್ನು ವಿನಯ್ ಅವರಿಗೆ ಕೊಟ್ಟು, ಒಬ್ಬರನ್ನ ತುಳಿದು ಬದುಕೋದು ಹೇಗೆ ಎಂದು ವಿನಯ್ ಅಣ್ಣನಿಗೆ ಗೊತ್ತು. ಅಣ್ಣ ನೀನೇ ಸರಿ ಅಂತ ಅವರ ಜೊತೆಗೆ ಹೋದೊರೆಲ್ಲಾ ಇವತ್ತು ಮನೆಗೆ ಹೋಗಿದ್ದಾರೆ, ಎಲ್ಲರ ಬೆಡ್ ಶೀಟ್ ಅವರ ಬೆಡ್ ಗೆ ಸೇರಿಕೊಂಡಿದೆ ಎಂದು ಹೇಳುತ್ತಾರೆ ಪ್ರತಾಪ್. ಪ್ರತಾಪ್ ಅವರು ಈ ರೀತಿ ಹೇಳಿದ್ದು ಎಲ್ಲರಿಗೂ ಒಂದು ರೀತಿ ಶಾಕ್ ಆಗಿದೆ..

ಆದರೆ ಹೊರಗಿನ ವೀಕ್ಷಕರು ಮಾತ್ರ ಪ್ರತಾಪ್ ಅವರ ಮಾತನ್ನು ಎಂಜಾಯ್ ಮಾಡಿದ್ದಾರೆ. ನಾವು ಅಂದುಕೊಂಡಿದ್ದನ್ನ ನೀನು ಹೇಳಿಬಿಟ್ಟೆ ಗುರು ಎಂದು ಪ್ರತಾಪ್ ಅವರನ್ನು ಹೊಗಳುತ್ತಿದ್ದಾರೆ ವೀಕ್ಷಕರು. ಪ್ರತಾಪ್ ಅವರು ಸರಿಯಾಗಿ ಊಟ ಮಾಡದೆ ನಿಶಕ್ತಿಯಿಂದ ಆಸ್ಪತ್ರೆಗೆ ಹೋಗಿ, ಎರಡು ದಿನಗಳ ಬಳಿಕ ನಿನ್ನೆಯ ಸಂಚಿಕೆಯಲ್ಲಿ ವಾಪಸ್ ಬಂದಿದ್ದಾರೆ. ಬಂದಾಗಿನಿಂದ ಇನ್ನು ಸ್ಟ್ರಾಂಗ್ ಆಗಿ ಆಟ ಆಡುತ್ತಿದ್ದಾರೆ.

Leave A Reply

Your email address will not be published.