Bigg Boss: ಅಸ್ಪತ್ರೆಯಿಂದ ಇನ್ನು ಬಿಗ್ ಬಾಸ್ ಮನೆಗೆ ಬಂದಿಲ್ಲ ಪ್ರತಾಪ್? ನಾಳೆಯ ಎಪಿಸೋಡ್ ಗೆ ಬರ್ತಾರಾ?

0 13

Bigg Boss: ಡ್ರೋನ್ ಪ್ರತಾಪ್ ಅವರು ಕೆಲವು ವರ್ಷಗಳ ಹಿಂದೆ ಭಾರಿ ವಿವಾದಕ್ಕೆ ಒಳಗಾಗಿದ್ದರು. ಆದರೆ ಈ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ, ಸ್ಪರ್ಧಿಯಾಗಿ ಬಂದ ನಂತರ ಅವರ ಮೇಲಿದ್ದ ಅಭಿಪ್ರಾಯ ಬದಲಾಗುವ ಹಾಗೆ ಮಾಡಿದ್ದಾರೆ. ಈಗ ಪ್ರತಾಪ್ ಅವರಿಗೆ ಭಾರಿ ದೊಡ್ಡ ಅಭಿಮಾನಿ ಬಳಗ ಇದೆ. ಪ್ರತಾಪ್ ವಿನ್ನರ್ ಆಗಬೇಕು ಎಂದು ಬಹಳಷ್ಟು ಜನರು ಇಷ್ಟಪಡುತ್ತಿದ್ದಾರೆ.

ಆದರೆ ಇದೀಗ ಪ್ರತಾಪ್ ಅವರ ಬಗ್ಗೆ ಒಂದು ವಿಷಯ ಜೇಳಿಬರುತ್ತಿದೆ. ಅದೇನು ಎಂದರೆ ಪ್ರತಾಪ್ ಅವರು ಬಿಗ್ ಬಾಸ್ ಮನೆಯ ಒಳಗೆ ಪ್ರಾಣ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹಾಗೆಯೇ ಪ್ರತಾಪ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಮಾನಸಿಕವಾಗಿ ಖಿನ್ನತೆಗೆ ಒಳಗಾದ ಕಾರಣ ಪ್ರತಾಪ್ ಹೀಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊನ್ನೆ ಬಿಗ್ ಬಾಸ್ ಮನೆಗೆ ಬಂದ ಗುರುಗಳು ಹೇಳಿದ ಮಾತುಗಳು ಕೂಡ ಪ್ರತಾಪ್ ಅವರಿಗೆ ನೋವಾಗಿತ್ತು ಎನ್ನಲಾಗಿದ್ದು, ಈ ಕಾರಣಕ್ಕೆ ಹಾಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆದರೆ ಫುಡ್ ಪಾಯಿಸನ್ ಆಗಿರುವ ಕಾರಣ ಪ್ರತಾಪ್ ಅವರಿಗೆ ಅನಾರೋಗ್ಯ ಉಂಟಾಗಿ ಆಸ್ಪತ್ರೆಯಲ್ಲಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಇದರಲ್ಲಿ ಅಸಲಿ ವಿಚಾರ ಏನು ಎಂದು ಇನ್ನು ತಿಳಿದುಬಂದಿಲ್ಲ. ಮೊನ್ನೆಯೇ ಪ್ರತಾಪ್ ಅವರು ಮನೆಯಿಂದ ಆಸ್ಪತ್ರೆಗೆ ಹೋಗಿದ್ದಾರೆ..

ಆದರೆ ಇನ್ನೂ ಕೂಡ ಮನೆಗೆ ವಾಪಸ್ ಬಂದಿಲ್ಲ. ನಾಳೆ ಕಿಚ್ಚನ ಪಂಚಾಯಿತಿ ಎಪಿಸೋಡ್ ಇದೆ. ಹೊರಗಡೆ ಸಿಕ್ಕಿರುವ ಮಾಹಿತಿ ಪ್ರಕಾರ, ಪ್ರತಾಪ್ ಅವರ ಆರೋಗ್ಯ ಈಗ ಚೇತರಿಕೆ ಆಗಿದೆ ಎಂದು ಮಾಹಿತಿ ಸಿಕ್ಕಿದ್ದರು, ಅವರು ನಾಳೆ ಬಿಗ್ ಬಾಸ್ ಮನೆಗೆ ಬರುತ್ತಾರಾ ಕಿಚ್ಚನ ಪಂಚಾಯಿತಿಯಲ್ಲಿ ಇರುತ್ತಾರಾ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಯಾವುದಕ್ಕೂ ನಾಳೆಯ ಸಂಚಿಕೆ ಶುರು ಆಗುವ ವರೆಗು ಕಾದು ನೋಡಬೇಕಿದೆ.

Leave A Reply

Your email address will not be published.