Bigg Boss: ಪ್ರತಾಪ್ ಗೆ ಕಳಪೆ ಕೊಟ್ಟ ಮನೆಮಂದಿ! ರಾತ್ರೋರಾತ್ರಿ ಜನರ ಅಭಿಪ್ರಾಯ ಕೂಡ ಬದಲು!

0 1

Bigg Boss: ಬಿಗ್ ಬಾಸ್ ಮನೆ ಎಂದರೆ ಇಲ್ಲಿರುವ ಎಲ್ಲಾ ವ್ಯಕ್ತಿಗಳು ಕೂಡ ಒಂದು ಸಾರಿ ಇರುವ ಹಾಗೆ ಇನ್ನೊಂದು ಸಾರಿ ಕಾಣೋದಿಲ್ಲ. ಪ್ರತಿ ವ್ಯಕ್ತಿಯ ವ್ಯಕ್ತಿತ್ವ ಆಗಾಗ ಬದಲಾಗುತ್ತಲೇ ಹೋಗುತ್ತದೆ. ಇದೆಲ್ಲವೂ ಹೊರಗೆ ಕೂತು ಕಾರ್ಯಕ್ರಮ ನೋಡುವ ವೀಕ್ಷಕರ ಗಮನಕ್ಕೂ ಬರುತ್ತದೆ. ಈಗ ಬಿಗ್ ಬಾಸ್ ಮನೆಯೊಳಗಿರುವ ಡ್ರೋನ್ ಪ್ರತಾಪ್ ಅವರನ್ನು ಮೆಚ್ಚಿಕೊಂಡಿದ್ದ ಜನರೇ ಈಗ ಅವರ ಬಗ್ಗೆ ಉಲ್ಟಾ ಹೊಡೆದಿದ್ದಾರೆ.

ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯೊಳಗೆ ಹೆಚ್ಚಿಗೆ ಕೋಪ ಮಾಡಿಕೊಳ್ಳದೆ, ಬಹಳ ಶಾಂತವಾಗಿ ಆಡುತ್ತಿದ್ದಾರೆ, ಹೊರಗಿನ ಜನರ ಮನಸ್ಸನ್ನು ಕೂಡ ಗೆಲ್ಲುತ್ತಿದ್ದಾರೆ. ಇದು ಒಂದು ವಿಚಾರ ಆದರೆ ಕಳೆದ ವಾರ ಡ್ರೋನ್ ಪ್ರತಾವ್ ಅವರು ನಡೆದುಕೊಂಡಿರುವ ರೀತಿ ಜನರ ಅಭಿಪ್ರಾಯವನ್ನೇ ಬದಲಾಯಿಸಿದೆ. ಕಳೆದ ವಾರ ಪ್ರತಾಪ್ ಒಂದು ತಂಡದ ಕ್ಯಾಪ್ಟನ್ ಆದರು, ಇವರ ತಂಡಕ್ಕೆ 7 ಜನ ಸದಸ್ಯರು ಬಂದರು.

ಆದರೆ ಎರಡು ತಂಡಗಳಲ್ಲಿ ಸಮತೋಲನ ಇರಬೇಕು ಎನ್ನುವ ಕಾರಣಕ್ಕೆ ಪ್ರತಾಪ್ ಅವರು ಕಾರ್ತಿಕ್ ಅವರನ್ನು ತಂಡದಿಂದ ಹೊರಾಗಿಟ್ಟರು, ಕಾರ್ತಿಕ್ ಅವರು ಅಗ್ರೆಸಿವ್ ಆಗುತ್ತಾರೆ ಅದಕ್ಕೆ ಅವರನ್ನು ಹೊರಗಿಡುತ್ತಿದ್ದೇನೆ ಎಂದು ಕಾರಣ ಕೂಡ ಹೇಳಿದರು. ಆದರೆ ವೀಕ್ಷಕರಿಗೆ ಮತ್ತು ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಇದು ಸರಿ ಅನ್ನಿಸಲಿಲ್ಲ. ಕಾರ್ತಿಕ್ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ ಇಂದ ಹೊರಗಿಟ್ಟು ತಮ್ಮ ತಂಡ ಗೆಲ್ಲಬೇಕು ಎಂದು ಪ್ರತಾಪ್ ಮಾಡಿದ ಪ್ಲಾನ್ ಎಂದು ಎಲ್ಲರೂ ಭಾವಿಸಿದರು..

ಆದರೆ ಪ್ರತಾಪ್ ಅಂದುಕೊಂಡ ಹಾಗೆ ಯಾವುದು ನಡೆಯಲಿಲ್ಲ, ಕಾರ್ತಿಕ್ ಉಸ್ತುವರಿಯಾಗಿದ್ದು, ಉತ್ತಮ ಪ್ರದರ್ಶನ ನೀಡಿ, ಕ್ಯಾಪ್ಟನ್ಸಿ ಟಾಸ್ಕ್ ಗೆ ಅರ್ಹತೆ ಪಡೆದುಕೊಂಡರು. ಟಾಸ್ಕ್ ವಿಚಾರದಲ್ಲಿ ಕೂಡ. ಪ್ರತಾಪ್ ಅವರು ತೆಗೆದುಕೊಂಡ ಕೆಲವು ನಿರ್ಧಾರಗಳು ಉತ್ತಮವಾಗಿ ಇರಲಿಲ್ಲ ಎನ್ನುವ ಕಾರಣಕ್ಕೆ ಮನೆಯ ಎಲ್ಲಾ ಸ್ಪರ್ಧಿಗಳು ಸೇರಿ ಪ್ರತಾಪ್ ಅವರಿಗೆ ಈ ವಾರ ಕಳಪೆ ಕೊಟ್ಟಿದ್ದಾರೆ.

ಇತ್ತ ವೀಕ್ಷಕರಿಗೂ ಕೂಡ ಪ್ರತಾಪ್ ಅಡುತ್ತಿರುವ ರೀತಿ ಒಪ್ಪಿಗೆ ಆಗಿಲ್ಲ. ಪ್ರತಾಪ್ ಇಷ್ಟು ದಿನವಾದರೂ ನಾಟಕವನ್ನೇ ಆಡುತ್ತಿದ್ದಾನೆ ಎಂದು ವೀಕ್ಷಕರು ಕೂಡ ಪ್ರತಾಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದೆಲ್ಲವೂ ಪ್ರತಾಪ್ ಅವರ ಬಿಗ್ ಬಾಸ್ ಮನೆ ಪ್ರಯಾಣದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.