Bigg Boss: ಬಿಗ್ ಬಾಸ್ ಮನೆಯಲ್ಲಿ ಮೂರನೇ ಕಿಚ್ಚ ಸುದೀಪ್ ಅವರ ನಿರೀಕ್ಷೆಗೆ ತಕ್ಕ ಹಾಗೆ ಸ್ಪರ್ಧಿಗಳ ಪರ್ಫಾರ್ಮೆನ್ಸ್ ಇರಲಿಲ್ಲ. ಹಾಗಾಗಿ ಸುದೀಪ್ ಅವರು ವೀಕೆಂಡ್ ಎಪಿಸೋಡ್ ನಲ್ಲಿ ಎಲ್ಲಾ ಸ್ಪರ್ಧಿಗಳಿಗೆ ವಿಭಿನ್ನವಾದ ರೀತಿಯಲ್ಲಿ ಬುದ್ಧಿ ಹೇಳಿದ್ದರು. ಸುದೀಪ್ ಅವರ ಮಾತುಗಳನ್ನು ಈಗ ಮನೆಯ ಎಲ್ಲಾ ಸದಸ್ಯರು ಕೂಡ ಸೀರಿಯಸ್ ಆಗಿ ತೆಗೆದುಕೊಂಡಿದ್ದು, ಇನ್ನುಮುಂದೆ ಹೆಚ್ಚು ಕಾಂಪಿಟೇಶನ್ ಕೊಡಲು ನಿರ್ಧಾರ ಮಾಡಿದ್ದಾರೆ.
ಇಂದಿನ ಎಪಿಸೋಡ್ ಪ್ರೋಮೋ ನೋಡಿದರೆ ಇದು ಖಂಡಿತವಾಗಿ ಗೊತ್ತಾಗುತ್ತಿದೆ. ಅದರಲ್ಲೂ ಡ್ರೋನ್ ಪ್ರತಾಪ್ ಅವರಿಗೆ ವೀಕೆಂಡ್ ಎಪಿಸೋಡ್ ನಲ್ಲಿ ಬಹಳ ಪ್ರೇರಣೆ ನೀಡಿದ್ದರು ಸುದೀಪ್, ಹಾಗೆಯೇ ವೀಕ್ಷಕರು ಕೂಡ ಡ್ರೋನ್ ಪ್ರತಾಪ್ ಅವರಿಗೆ ಕರ್ಫಿಫ್ ಗಿಫ್ಟ್ ಕಳಿಸಿ, ಮಹತ್ವದ ಸಂದೇಶ ನೀಡಿದ್ದರು. ಅದನ್ನೆಲ್ಲ ಸೀರಿಯಸ್ ಆಗಿ ತೆಗೆದುಕೊಂಡ ಪ್ರತಾಪ್ ಇನ್ನುಮುಂದೆ ನಿಜವಾದ ಆಟ ಆಡುವುದಾಗಿ ಹೇಳಿದ್ದಾರೆ.
ಹಾಗೆಯೇ 4ನೇ ವಾರ ಶುರುವಾಗಿರುವ ಈ ವಾರದಲ್ಲಿ ಈಗಾಗಲೇ ಪ್ರತಾಪ್ ಅವರು ಮೊದಲಿಗಿಂತ ಸ್ಟ್ರಾಂಗ್ ಆಗಿ ಟಾಸ್ಕ್ ಅಡುತ್ತಿರುವುದು ಗೊತ್ತಾಗಿದೆ. ಇಂದಿನ ಸಂಚಿಕೆಯ ಪ್ರೊಮೋವನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿದ್ದು, ಅದನ್ನು ನೋಡಿದರೆ ಗೊತ್ತಾಗುತ್ತಿದೆ. ಈ ಪ್ರೊಮೋದಲ್ಲಿ ಬೆಳ್ಳಂಬೆಳಗ್ಗೆ ಮನೆ ಮಂದಿಗೆಲ್ಲಾ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ನ ಅನುಸಾರ ಎಲ್ಲರೂ ಕೂಡ ನಾಮಿನೇಷನ್ ನಲ್ಲಿ ಪಾಲ್ಗೊಳ್ಳುವ ಹಾಗಿಲ್ಲ, ನಾಮಿನೇಷನ್ ಕಾರ್ಡ್ ಸಿಗಲಾಗುತ್ತದೆ.
ಈ ನಾಮಿನೇಶನ್ ಕಾರ್ಡ್ ಅನ್ನು ಬಲೂನ್ ಗಳ ಒಳಗೆ ಹಾಕಿ, ಮನೆಯಲ್ಲಿ ಬಲೂನ್ ಗಳನ್ನು ಇಡಲಾಗಿತ್ತು, ಮನೆ ಮಂದಿ ಎಲ್ಲರೂ ಟ್ರೈ ಮಾಡಿದ್ದು, ಪ್ರತಾಪ್ ಅವರಿಗೆ ಬಲೂನ್ ಸಿಕ್ಕಿದೆ. ಆ ನಾಮಿನೇಷನ್ ಕಾರ್ಡ್ ಹೇಗಿದೆ ನೋಡಬೇಕು ತೋರಿಸು ಎಂದು ಕಾರ್ತಿಕ್, ವಿನಯ್, ಸ್ನೇಹಿತ್ ಎಲ್ಲರೂ ಪ್ರತಾಪ್ ಅವರ ಹತ್ತಿರ ಕೇಳಿದ್ದಾರೆ. ಆದರೆ ಪ್ರತಾಪ್ ಅವರು ತೋರಿಸುವುದಿಲ್ಲ ಎಂದು ಹೇಳುತ್ತಾರೆ.
ಆತ ಪ್ರತಾಪ್ ಅವರ ಮೇಲೆ ಎಗರಿ ಕಾರ್ಡ್ ನೋಡುವ ಪ್ರಯತ್ನ ಮಾಡುತ್ತಾರೆ ಕಾರ್ತಿಕ್, ವಿನಯ್ ಕೂಡ ಅದೇ ರೀತಿ ಮಾಡುತ್ತಾರೆ. ಇದೀಗ ಈ ಪ್ರೋಮೋ ವೈರಲ್ ಆಗಿದ್ದು, ಪ್ರತಾಪ್ ಅವರು ಟಾಸ್ಕ್ ನಲ್ಲಿ ಗೆದ್ದಿದ್ದಾರೆ ಅಂತ ಮನೆಯವರು ಈ ರೀತಿ ಆಡೋದಾ, ಪ್ರತಾಪ್ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.