Bigg Boss: ಅಂತೂ ಇಂತೂ ಬಿಗ್ ಬಾಸ್ ಮನೆಯಲ್ಲಿ ಒಂದಾದ ಅಪ್ಪ ಮಗ! ಅಪೂರ್ವ ಸಂಗಮ!

0 17

Bigg Boss: ಬಿಗ್ ಬಾಸ್ ಮನೆಯ 12ನೇ ವಾರದ ಪ್ರಯಾಣದಲ್ಲಿ ಈಗ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಪ್ಲೇ ಪಾಸ್ ಟಾಸ್ಕ್ ನೀಡಿರುವ ಬಿಗ್ ಬಾಸ್, ಎಲ್ಲಾ ಸ್ಪರ್ಧಿಗಳ ಫ್ಯಾಮಿಲಿಯನ್ನು ಕರೆಸಿದ್ದಾರೆ. ಈಗಾಗಲೇ ತುಕಾಲಿ ಸಂತೋಷ್, ಮೈಕಲ್, ವರ್ತೂರ್ ಸಂತೋಷ್, ಸಂಗೀತ, ಕಾರ್ತಿಕ್, ಸಿರಿ ಇವರ ಕುಟುಂಬದವರು ಬಂದು ಹೋಗಿದ್ದಾರೆ. ಇನ್ನು ಪ್ರತಾಪ್, ವಿನಯ್ ಹಾಗೂ ತನಿಶಾ ಮನೆಯವರು ಬರಬೇಕಿದೆ.

ಅದರಲ್ಲೂ ಪ್ರತಾಪ್ ಅವರು ತಮ್ಮ ತಂದೆ ತಾಯಿ ಕುಟುಂಬ ಬಿಗ್ ಬಾಸ್ ಮನೆಗೆ ಬರುತ್ತಾರೆ, ಯಾವಾಗ ಅಪ್ಪ ಅಮ್ಮನ ಜೊತೆಗೆ ಮಾತಾಡ್ತೀನಿ ಎಂದು ಕಾಯುತ್ತಿದ್ದರು. ಈ ವಾರ ಎಲ್ಲರ ತಂದೆ ತಾಯಿ ಬಂದಿದ್ದಾರೆ, ನಮ್ಮ ಮನೆಯಿಂದ ಯಾರು ಇನ್ನು ಬಂದಿಲ್ಲ ಎಂದು ಕಾಯುತ್ತಿದ್ದರು ಪ್ರತಾಪ್, ಕೊನೆಗೂ ಆ ಕ್ಷಣ ಬಂದೆ ಬಿಟ್ಟಿದೆ. ಕೊನೆಗೂ ಪ್ರತಾಪ್ ಅವರ ತಂದೆ ತಾಯಿ ಇಬ್ಬರು ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ..

ಪ್ರತಾಪ್ ಅವರು ತಂದೆ ತಾಯಿಯ ಜೊತೆಗೆ ಮಾತನಾಡಿಸಿ 3 ವರ್ಷದ ಮೇಲಾಗಿತ್ತು, ಆ ನೋವನ್ನು ಬಿಗ್ ಬಾಸ್ ಮನೆಯಲ್ಲಿ ಹಲವು ಬಾರಿ ಹೇಳಿಕೊಂಡಿದ್ದರು ಪ್ರತಾಪ್. ಬಿಗ್ ಬಾಸ್ ಮನೆಯೊಳಗೆ ತಂದೆಯ ಜೊತೆಗೆ ಫೋನ್ ನಲ್ಲಿ ಕೂಡ ಮಾತನಾಡಿಸಲಾಗಿತ್ತು, ಮನೆಯಿಂದ ಲೆಟರ್ ಕೂಡ ಬಂದಿತ್ತು. ಇದೀಗ ಪ್ರತಾಪ್ ಅವರ ತಂದೆ ತಾಯಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ

ಆದರೆ ಬಿಗ್ ಬಾಸ್ ಮನೆಯಲ್ಲಿ ಟ್ವಿಸ್ಟ್ ಇರುವ ಹಾಗೆ ಪ್ರತಾಪ್ ಅವರ ತಂದೆ ತಾಯಿ ಬಂದಾಗಲೂ ಟ್ವಿಸ್ಟ್ ಇತ್ತು, ಮನೆಯ ಮೇನ್ ಡೋರ್ ಅನ್ನು ಲಾಕ್ ಮಾಡಲಾಗಿತ್ತು, ಆದರೆ ಪ್ರತಾಪ್ ಅವರು ತಂದೆ ತಾಯಿ ಜೊತೆಗೆ ಒಳ್ಳೆಯ ಸಮಯ ಕಳೆದಿದ್ದಾರೆ ಎನ್ನುವುದಂತೂ ಖಂಡಿತ ಒಳ್ಳೆಯ ವಿಚಾರ ಆಗಿದೆ.

Leave A Reply

Your email address will not be published.