Bigg Boss: ಕಣ್ಣಿಗೆ ಗ್ಲಾಸ್ ಹಾಕೊಂಡು ಬಿಗ್ ಬಾಸ್ ಮನೆಗೆ ರೀಎಂಟ್ರಿ ಕೊಟ್ಟ ಸಂಗೀತ ಪ್ರತಾಪ್! ಕಣ್ಣಿಗೆ ಏನಾಗಿದೆ ಗೊತ್ತಾ?

0 12

Bigg Boss: ಬಿಗ್ ಬಾಸ್ ಮನೆಯಲ್ಲಿ ಇಂಥದ್ದೊಂದು ಸನ್ನಿವೇಶ ನೋಡುವ ಹಾಗೆ ಆಗುತ್ತೆ ಅಂತ ಯಾರು ಅಂದುಕೊಂಡಿರಲಿಲ್ಲ. ಕಳೆದ ವಾರ ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ನಲ್ಲಿ ವಿನಯ್ ಅಂಡ್ ಗ್ಯಾಂಗ್ ರಾಕ್ಷಸರಾಗಿ, ಕ್ರೂರತೆ ಆಡಿದ ಟಾಸ್ಕ್ ಇಂದ ಇಂದು ಸಂಗೀತ ಪ್ರತಾಪ್ ದೃಷ್ಟಿಗೆ ತೊಂದರೆ ಆಗಿದೆ. ಕಲರ್ಸ್ ಕನ್ನಡ ಚಾನೆಲ್ ರಿಲೀಸ್ ಮಾಡಿರುವ ಪ್ರೋಮೋ ವೀಕ್ಷಕರ ಕರುಳು ಕಿವುಚುವ ಹಾಗೆ ಮಾಡಿದೆ ಎಂದು ಹೇಳಬಹುದು.

ಸಂಗೀತ ಅವರು ರಾಕ್ಷಸರಾಗಿದ್ದಾಗ, ಪವಿ ಅವರಿಗೆ ಹೆಚ್ಚಾಗಿ ನೀರು ಎರಚಿದರು ಅನ್ನೋ ಕಾರಣಕ್ಕೆ, ವಿನಯ್ ಅಂಡ್ ಟೀಮ್ ರಾಕ್ಷಸರಾದಾಗ ಎದುರಾಳಿ ತಂಡಕ್ಕೆ ಎರಡು ಪಟ್ಟು ಹಿಂಸೆ ನೀಡಿದ್ದಾರೆ. ಬೇಕೆಂದೇ ಅವರಿಗೆ ಶಿಕ್ಷೆ ಕೊಡುವುದು, ಎಲ್ಲಾ ರೀತಿಯಲ್ಲಿ ಹಿಂಸೆ ಮಾಡುವುದನ್ನು ಮಾಡಿದರು. ಕೊನೆಗೆ ಮತ್ತೆ ಚೇರ್ ಟಾಸ್ಕ್ ಬಂದಾಗ, ಸಂಗೀತ ಮತ್ತು ಪ್ರತಾಪ್ ಇಬ್ಬರಿಗೂ ಕೂಡ ಚಿತ್ರಹಿಂಸೆಯನ್ನೇ ನೀಡಿದರು.

ಡಿಜರ್ಜೆಂಟ್, ಕೆಮಿಕಲ್ ಇದೆಲ್ಲವನ್ನು ನೀರಿಗೆ ಬೆರೆಸಿ, ಆ ನೀರನ್ನು ಸಂಗೀತ ಕಾರ್ತಿಕ್ ಮುಖಕ್ಕೆ ಒಂದು ಚೂರು ಬಿಡುವು ಕೊಡದೇ, ಅವರಿಬ್ಬರಿಗು ನೋವಾಗುತ್ತಿದೆ ಎಂದು ಗೊತ್ತಿದ್ದರೂ ಕೂಡ ಎರಚಿದರು. ಸುಮಾರು 50 ನಿಮಿಷಗಳ ಕಾಲ ಇದೇ ರೀತಿ ಇಬ್ಬರಿಗೂ ತೊಂದರೆ ಕೊಟ್ಟರು, ಕೊನೆಗೆ ಆ ವೇದನೆ ತಡೆಯಲಾಗದೆ ಸಂಗೀತ ಅವರು ಎದ್ದು, ಕೆಳಗೆ ಕೂತು ಜೋರಾಗಿ ಅತ್ತರು, ನಂತರ ಕನ್ಫೆಶನ್ ರೂಮ್ ಗೆ ಹೋಗಿ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು..

ಪ್ರತಾಪ್ ಅವರಿಗು ಕೂಡ ಅದೇ ರೀತಿ ಮಾಡಿದರು, ಮೂರ್ನಾಲ್ಕು ಜನ ಒಟ್ಟಿಗೆ ಸೇರಿ ಬೇಕೆಂದೇ ನೀರು ಹಾಕಿದ ಕಾರಣ ಪ್ರತಾಪ್ ಮತ್ತು ಸಂಗೀತ ಇಬ್ಬರು ಕೂಡ ಆಸ್ಪತ್ರೆ ಸೇರಬೇಕಾಯಿತು. ಎರಡು ದಿನ ಇವರಿಬ್ಬರು ಮನೆಯಲ್ಲಿ ಇರಲಿಲ್ಲ. ಇಬ್ಬರಿಗೂ ಏನಾಗಿದೆ ಎನ್ನುವ ಆತಂಕ ವೀಕ್ಷಕರಲ್ಲಿತ್ತು, ಇಂದು ಕಲರ್ಸ್ ಕನ್ನಡ ಅವರಿಬ್ಬರು ವಾಪಸ್ ಮನೆಗೆ ಬಂದಿರುವ ಪ್ರೋಮೋ ರಿಲೀಸ್ ಮಾಡಿದ್ದಾರೆ.

ಅದರಲ್ಲಿ ಸಂಗೀತ ಪ್ರತಾಪ್ ಇಬ್ಬರು ಕೂಡ ಕಣ್ಣಿಗೆ ಗ್ಲಾಸ್ ಹಾಕಿಕೊಂಡು ಮನೆಯೊಳಗೆ ಬಂದಿದ್ದು ಇದನ್ನು ನೋಡಿದ ಬಿಗ್ ಬಾಸ್ ಮನೆ ಮಂದಿ ಶಾಕ್ ಆಗಿದ್ದಾರೆ. ಕಾರ್ತಿಕ್ ಮತ್ತು ತನಿಷಾ ಅವರಿಬ್ಬರನ್ನ ಆ ಥರ ನೋಡೋಕೆ ಆಗ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಇಬ್ಬರ ದೃಷ್ಟಿಗೂ ಹೆಚ್ಚು ತೊಂದರೆ ಆಗಿದೆ ಎನ್ನುವುದು ಪ್ರೋಮೋ ಮೂಲಕ ಗೊತ್ತಾಗಿದ್ದು, ಪ್ರೋಮೋ ನೋಡಿದ ಜನರು ಬೇಸರ ಮಾಡಿಕೊಂಡಿದ್ದಾರೆ.

Leave A Reply

Your email address will not be published.