Bigg Boss: ಟಾಸ್ಕ್ ನಲ್ಲಿ ದೀದಿಯನ್ನೇ ಆಟದಿಂದ ಹೊರಗಿಟ್ಟ ಪ್ರತಾಪ್! ಮುನಿಸಿಕೊಂಡ ಸಂಗೀತ!

0 11

Bigg Boss: ಬಿಗ್ ಬಾಸ್ ಮನೆಯಲ್ಲಿ ಈಗ ಟಿಕೆಟ್ ಟು ಫಿನಾಲೆ ವೀಕ್ ನಡೆಯುತ್ತಿದೆ. ಈ ವಾರ ಮನೆಯಲ್ಲಿರುವ 8 ಸ್ಪರ್ಧಿಗಳಿಗೆ ಒಬ್ಬೊಬ್ಬರಿಗೂ ಒಂದೊಂದು ಟಾಸ್ಕ್ ಕೊಡಲಾಗುತ್ತಿದೆ, ಸ್ಪರ್ಧಿಗಳು 3 ಪ್ರತಿಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಂಡು, ಟಾಸ್ಕ್ ಆಡಬೇಕು. ಟಾಸ್ಕ್ ಗೆದ್ದವರಿಗೆ 100 ಪಾಯಿಂಟ್ಸ್, ಎರಡನೇ ಸ್ಥಾನಕ್ಕೆ ಬಂದವರಿಗೆ 50 ಪಾಯಿಂಟ್ಸ್, ಮೂರನೇ ಸ್ಥಾನಕ್ಕೆ ಬಂದವರಿಗೆ 30 ಪಾಯಿಂಟ್ಸ್ ಸಿಗುತ್ತದೆ.

ಟಾಸ್ಕ್ ಆಡದೆ ಇರುವವರು ಟಾಸ್ಕ್ ನಲ್ಲಿ ಯಾರು ಗೆಲ್ಲಬಹುದು ಎಂದು ಊಹಿಸಬೇಕು, ಊಹಿಸಿದವರೇ ಗೆದ್ದರೆ ಅವರಿಗೆ 40 ಪಾಯಿಂಟ್ಸ್ ಸಿಗುತ್ತದೆ. ಈ ಟಾಸ್ಕ್ ನಲ್ಲಿ ಈಗ ಸಂಗೀತ ಹಾಗೂ ಪ್ರತಾಪ್ ಇಬ್ಬರು ಲೀಡ್ ನಲ್ಲಿದ್ದಾರೆ. ಇಂದಿನ ಎಪಿಸೋಡ್ ಪ್ರೋಮೋವನ್ನು ಕಲರ್ಸ್ ಕನ್ನಡ ಚಾನೆಲ್ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಲಾಗಿದ್ದು, ಅದರಲ್ಲಿ ಪ್ರತಾಪ್ ಹಾಗೂ ಸಂಗೀತ ನಡುವೆ ಜಗಳ ಆಗುತ್ತಿರುವುದು ಗೊತ್ತಾಗಿದೆ.

ಪ್ರತಾಪ್ ಅವರು ಟಾಸ್ಕ್ ಬಗ್ಗೆ ಯೋಚನೆ ಮಾಡಿ, ತಮ್ಮನ್ನು ತಾವು ಸೇವ್ ಮಾಡಿಕೊಳ್ಳಬೇಕು ಎಂದು, ತಮಗೆ ಫಿನಾಲೆ ಟಿಕೆಟ್ ಸಿಗಬೇಕು ಎಂದು ಸಂಗೀತ ಅವರನ್ನು ಟಾಸ್ಕ್ ಇಂದ ಹೊರಗಿಟ್ಟಿದ್ದಾರೆ. ಈ ಬಗ್ಗೆ ಸಂಗೀತ ಅವರಿಗೆ ಬೇಸರ ಆಗಿದ್ದು, ಸಂಗೀತ ಅವರು ಪ್ರತಾಪ್ ಅವರ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಪ್ರೋಮೋ ನೋಡಿ ನೆಟ್ಟಿಗರು ಕೂಡ ಶಾಕ್ ಆಗಿದ್ದು, ಪ್ರತಾಪ್ ಅವರು ಹೀಗೆ ಮಾಡಬಾರದಿತ್ತು ಎನ್ನುತ್ತಿದ್ದಾರೆ..

Leave A Reply

Your email address will not be published.