Bigg Boss: ಅಂತೂ ಇಂತೂ ಅಪ್ಪ ಮಗ ಒಂದಾದ್ರು, ಕಿಚ್ಚನ ಪಂಚಾಯಿತಿಯಲ್ಲಿ ಮನಕಲಕುವ ಘಟನೆ

Written by Pooja Siddaraj

Published on:

Bigg Boss: ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮ ಮತ್ತು ಬಿಗ್ ಬಾಸ್ ವೇದಿಕೆಯ ಮೂಲಕ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಸುದೀಪ್ ಅವರು ಅದೆಷ್ಟೋ ಸಮಸ್ಯೆಗಳನ್ನು ಈ ವೇದಿಕೆಯಲ್ಲಿ ಪರಿಹರಿಸಿದ್ದಾರೆ. ಈ ವಾರ ಕೂಡ ಕಿಚ್ಚನ ಪಂಚಾಯಿತಿಯಲ್ಲಿ ಎಲ್ಲರನ್ನು ಭಾವುಕರಾಗಿಸುವಂಥ ಒಂದು ಘಟನೆ ನಡೆದಿದೆ.

ಬಿಗ್ ಬಾಸ್ ಮನೆಗೆ ಪ್ರತಾಪ್ ಅವರು ಎಂಟ್ರಿ ಕೊಟ್ಟು ಈಗ 6 ವಾರಗಳ ಕಾಲ ಕಳೆದಿದೆ, ಇಷ್ಟು ದಿವಸಗಳಲ್ಲಿ ತಮ್ಮ ತಾಳ್ಮೆ, ಒಳ್ಳೆಯತನ ಇವುಗಳಿಂದ ಪ್ರತಾಪ್ ಅವರು ಹೊರಗಿನ ಜನರ ಮನಸ್ಸು ಗೆದ್ದಿದ್ದಾರೆ. ಹೊರಗಡೆ ಪ್ರತಾಪ್ ಅವರಿಗೆ ಸಪೋರ್ಟ್ ಸಹ ಜಾಸ್ತಿಯಾಗಿದೆ. ಆದರೆ ಪ್ರತಾಪ್ ಅವರು ಕೆಲ ವರ್ಷಗಳ ಹಿಂದೆ ಮಾಡಿಕೊಂಡಿದ್ದ ವಿವಾದದ ಕಾರಣ ಸಾಕಷ್ಟು ಟೀಕೆಗೆ ಒಳಗಾಗಿದ್ದರು, ಅವಮಾನಗಳನ್ನು ಅನುಭವಿಸಿದ್ದರು.

ಇದರಿಂದ ಅವರು ಸ್ನೇಹಿತರು ಮತ್ತು ಕುಟುಂಬ ಎಲ್ಲದರಿಂದ ದೂರವಾಗಿದ್ದರು. ತಂದೆ ತಾಯಿ ಮತ್ತು ತಂಗಿ ಜೊತೆ ಮಾತನಾಡಿಯೇ 3 ವರ್ಷ ಆಗಿದೆ ಎಂದು ಪ್ರತಾಪ್ ತಿಳಿಸಿದ್ದರು. ಹಾಗೆಯೇ ಅವರೆಲ್ಲರ ನಂಬರ್ ಬ್ಲಾಕ್ ಮಾಡಿರುವುದಾಗಿಯೂ ಹೇಳಿದ್ದರು. ಆದರೆ ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲರಿಗೂ ಮನೆಯವರಿಂದ ಊಟ ಮತ್ತು ಪತ್ರ ಬಂದಾಗ, ಪ್ರತಾಪ್ ಅವರಿಗೆ ಪತ್ರ ಓದಲು ಆಗಿಲ್ಲ ಎಂದು ಬೇಸರ ಮಾಡಿಕೊಂಡಿದ್ದರು.

ಪತ್ರ ಸಿಕ್ಕಿದ್ದರೆ ತಂದೆ ತಾಯಿ ಬಗ್ಗೆ ಗೊತ್ತಾಗುತ್ತಿತ್ತು ಎಂದಿದ್ದರು. ಕಿಚ್ಚನ ಪಂಚಾಯಿತಿಯಲ್ಲಿ ಇದೇ ವಿಷಯ ಚರ್ಚೆಯಾಯಿತು. ಆಗ ಸುದೀಪ್ ಅವರು ಪತ್ರ ನಿಮಗೆ ಸಿಕ್ಕಿದ್ದರೆ ಏನು ಮಾಡುತ್ತಿದ್ರಿ ಎಂದು ಕೇಳಿದ್ದು, ಆಗ ಪ್ರತಾಪ್ ಅವರು ಅಪ್ಪನನ್ನು ನೆನೆದು ಭಾವುಕರಾದರು, ಅವರು ನನ್ನ ಕ್ಷಮಿಸಿದ್ದಾರಾ ಎಂದು ಗೊತ್ತಾಗುತ್ತಿತ್ತು ಎಂದು ಹೇಳಿದರು. ಸುದೀಪ್ ಅವರು ನೀವು ಹೇಳಿದ್ದು ಗೆ Genuine ಆಗಿತ್ತು ಇನ್ನೊಂದು ಸಲ ಅಪ್ಪ ಅಂತ ಹೇಳಿ ಎಂದು ಹೇಳಿದರು.

ಆಗ ಪ್ರತಾಪ್ ಅವರು ಅಪ್ಪ ಎಂದು ಕರೆದಾಗ, ನನ್ನನ್ನು ಕ್ಷಮಿಸಿ ಎಂದು ಅಳುವುದಕ್ಕೆ ಶುರು ಮಾಡಿದಾಗ, ಅವರ ಅಪ್ಪನ ಧ್ವನಿ ಕೇಳಿಬಂತು, ಪ್ರತಾಪ್ ಅವರ ತಂದೆ ಕಾಲ್ ಮೂಲಕ ಕೇಳಿಬಂದು, ಮಗನಿಗೆ ಚೆನ್ನಾಗಿ ಆಡು, ಗೆದ್ದುಬಾ, ನಾವೆಲ್ಲರೂ ನೋಡ್ತಾ ಇದ್ದೀವಿ, ನೋಡೋಕೆ ಬರ್ತೀವಿ ಎಂದು ಮಗನಿಗೆ ಧೈರ್ಯ ಹೇಳಿದರು. ಇದರಿಂದ ಪ್ರತಾಪ್ ಭಾವುಕರಾಗಿ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ಹೇಳಿದರು. ಒಟ್ಟಿನಲ್ಲಿ ಈ ಬಾರಿ ಬಿಗ್ ಬಾಸ್ ಮನೆ ಒಂದು ರೀತಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು ಎಂದರೆ ತಪ್ಪಲ್ಲ.

Leave a Comment