Bigg Boss: ವಿನಯ್ ಮಾತಿಗೆ ಸರಿಯಾಗಿ ತಿರುಗೇಟು ನೀಡಿದ ಪ್ರತಾಪ್! ಭೇಷ್ ಎಂದ ವೀಕ್ಷಕರು!

0 2

Bigg Boss; ಬಿಗ್ ಬಾಸ್ ಮನೆಯಲ್ಲಿ ಈಗ ಅಂತಿಮ ವಾರ ನಡೆಯುತ್ತಿದೆ. ಬಿಗ್ ಬಾಸ್ ಈಗ ಕೊನೆಯ ವಾರದಲ್ಲಿ ಬೇರೆ ರೀತಿಯ ಟಾಸ್ಕ್ ಗಳನ್ನು ನೀಡುತ್ತಿದ್ದಾರೆ. ಫಿನಾಲೆ ವೀಕ್ ನಲ್ಲಿ ಎಲ್ಲರಿ ಕೂಡ ಜನರ ವೋಟಿಂಗ್ ಇಂದಲೇ ಮನೆಯಲ್ಲಿ ಇರಲಿದ್ದು, ಮಿಡ್ ವೀಕ್ ನಲ್ಲಿ ಒಂದು ಎಲಿಮಿನೇಷನ್ ನಡೆಯಲಿದೆ. ಇನ್ನು 5 ಸ್ಪರ್ಧಿಗಳು ಫಿನಾಲೆ ವೇಳೆ ಇರಲಿದ್ದಾರೆ.

ನಿನ್ನೆಯ ಸಂಚಿಕೆಯಲ್ಲಿ ಬಿಗ್ ಬಾಸ್ ನೀಡಿದ್ದ ಆಕ್ಟಿವಿಟಿಯಲ್ಲಿ ಸ್ಪರ್ಧಿಗಳ ನಡುವೆ ಮುನಿಸು, ಕೋಪ, ಜಗಳ ಎಲ್ಲವೂ ನಡೆಯಿತು. ಇದರ ನಡುವೆ ಇಂದಿನ ಸಂಚಿಕೆಯ ಪ್ರೋಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಬಿಟ್ಟಿದ್ದು, ಇದರಲ್ಲಿ ನಾವು ವಿನಯ್ ಹಾಗೂ ಪ್ರತಾಪ್ ನಡುವೆ ಆಗುತ್ತಿರುವ ಕದನದ ಬಗ್ಗೆ ನೋಡಬಹುದು. ವಿನಯ್ ಮಾತಿಗೆ ಪ್ರತಾಪ್ ಅವರು ಪ್ರತ್ಯುತ್ತರ ನೀಡಿದ್ದಾರೆ.

ನನ್ನ ಬಗ್ಗೆ ಮಾತಾಡೋವಾಗ ನೋಡ್ಕೊಂಡು ಮಾತಾಡು, ಇಲ್ಲಾಂದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ವಿನಯ್ ಹೇಳುತ್ತಾರೆ. ಆಗ ಪ್ರತಾಪ್ ಕೂಡ ಪ್ರತ್ಯುತ್ತರ ನೀಡಿ, ಅದೆಲ್ಲಾ ಆಗಲ್ಲ ಅಣ್ಣ ಅಂತ ಹೇಳಿ, ನೀವು ಅತ್ರೆ ಅದು ಪ್ರೀತಿ, ನಾನು ಅಪ್ಪ ಅಮ್ಮನ ನೆನಪಲ್ಲಿ ಅತ್ರೆ ಅದು ಸಿಂಪತಿ, ಇದು ಹೇಗೆ ಎಂದು ವಿನಯ್ ಗೆ ಪ್ರತ್ಯುತ್ತರ ನೀಡಿದ್ದಾರೆ ಪ್ರತಾಪ್. ಈ ಪ್ರೋಮೋ ಈಗ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು, ಪ್ರತಾಪ್ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ.

Leave A Reply

Your email address will not be published.