Bigg Boss: ಸ್ನೇಹಿತ್ ಜೊತೆಗೆ ಸಂಗೀತ ಮದುವೆ ಫಿಕ್ಸ್ ಮಾಡಿದ ಕುಟುಂಬದವರು, ಏನಿದು ಹೊಸ ಸ್ಟೋರಿ!

0 13

Bigg Boss: ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ಲವ್, ರಿಲೇಶನ್ಶಿಪ್ ಸೇರಿದ ಹಾಗೆ ಸಾಕಷ್ಟು ವಿಷಯದ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಈ ಸೀಸನ್ ನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಮದುವೆ ವಿಚಾರದ ಚರ್ಚೆ ಕೂಡ ನಡೆದಿದೆ. ಅದು ಮನೆಯವರೇ ಒಪ್ಪಿ ಮದುವೆ ಮಾಡಿಸಿದ್ದಾರೆ. ಮದುವೆ ಆದದ್ದು ಯಾರಿಗೆ ಎಂದು ಗೊತ್ತಾದರೆ ನೀವು ಶಾಕ್ ಆಗೋದು ಗ್ಯಾರಂಟಿ.

ಇದೀಗ ಮದುವೆ ಆಗುವ ಹಾಗೆ ಸುದ್ದಿ ಆಗುತ್ತಿರುವುದು ಸಂಗೀತ ಶೃಂಗೇರಿ ಮತ್ತು ಸ್ನೇಹಿತ್ ಮದುವೆ ವಿಷಯ ಆಗಿದೆ. ಇವರಿಬ್ಬರ ಮದುವೆಯನ್ನು ಖುದ್ದು ಮನೆಯವರೇ ಅರೇಂಜ್ ಮಾಡಿದ್ದಾರೆ ಎಂದು ಸಂಗೀತ ಅವರೇ ಹೇಳಿದ್ದಾರೆ. ಅರೆರೆ ಇದು ನಿಜವೇ ಎಂದು ನಿಮಗೆ ಅನ್ನಿಸಬಹುದು, ಸಂಗೀತ ಅವರು ಈ ರೀತಿ ಹೇಳಿದ್ದಂತೂ ನಿಜ, ಆದರೆ ಈ ಘಟನೆ ನಡೆದಿರುವುದು ಸಂಗೀತ ಅವರ ಕನಸಿನಲ್ಲಿ.

ವಿನಯ್ ಅವರೊಡನೆ ಈ ರೀತಿ ಮಾತನಾಡುತ್ತಾರೆ ಸಂಗೀತ. ತಮ್ಮ ಕನಸಿನಲ್ಲಿ ಸ್ನೇಹಿತ್ ಜೊತೆಗೆ ಮದುವೆ ಫಿಕ್ಸ್ ಆಗಿದೆ. ಎರಡು ಮನೆಯವರು ಒಪ್ಪಿ, ಈ ಮದುವೆಯನ್ನು ಅರೇಂಜ್ ಮಾಡಿರುತ್ತಾರೆ. ಆದರೆ ಸಂಗೀತ ಅವರಿಗೆ ಮದುವೆ ಇಷ್ಟವಿರುವುದಿಲ್ಲ, ವಿನಯ್ ಜೊತೆಗೆ ಹೇಳುತ್ತಾ ಕನಸಲ್ಲಿ ಇವನಿಗಿಂತ ಕಾರ್ತಿಕ್ ಜೊತೆಗೆ ಮದುವೆ ಫಿಕ್ಸ್ ಆಗಿದ್ರೆ ಚೆನ್ನಾಗಿರ್ತಿತ್ತು ಅಂತ ಅಂದುಕೊಂಡಿದ್ದಾಗಿ ಹೇಳುತ್ತಾರೆ ಸಂಗೀತ. ಆಗ ವಿನಯ್ ಕೂಡ ನಕ್ಕಿದ್ದಾರೆ.

ನಂತರ ಕನಸ್ಸಲ್ಲಿ ಸ್ನೇಹಿತ್ ಹತ್ತಿರ ಹೋಗಿ, ನೀವಾದರು ಅವರು ಆರೋಗೆಂಟ್ ನನಗೆ ಇಷ್ಟವಿಲ್ಲ ಅಂತ ಹೇಳಬಾರದಿತ್ತಾ ಎಂದು ಹೇಳುತ್ತಾರೆ. ಆಗ ಸ್ನೇಹಿತ್, ಹುಡುಗಿ ಯಾರಾದರೂ ಆಗಲಿ ನನಗೆ ಮದುವೆ ಆದರೆ ಸಾಕು ಎನ್ನುತ್ತಾರಂತೆ. ಕನಸಲ್ಲಿ ನಡೆದ ಈ ಘಟನೆಯನ್ನು ವಿನಯ್ ಜೊತೆಗೆ ಹೇಳಿ ತಮಾಷೆ ಮಾಡಿದ್ದಾರೆ ಸಂಗೀತ. ವಿನಯ್ ಕೂಡ ಸಂಗೀತ ಕನಸಿನ ಬಗ್ಗೆ ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ.

ಇದು ಕನಸು, ಆದರೆ ನಿಜವಾದರು ಆಗಬಹುದು ಎಂದು ತಮಾಷೆ ಮಾಡಿದ್ದಾರೆ ವಿನಯ್. ಇಷ್ಟು ದಿವಸ ವಿನಯ್ ಸಂಗೀತ ಜಗಳಗಳ ಕಾರಣದಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದರು. ಆದರೆ ಈಗ ಇವರಿಬ್ಬರು ಹೀಗೆ ಚೆನ್ನಾಗಿ ಮಾತನಾಡುತ್ತಿರುವುದು ಆಶ್ಚರ್ಯ ಅನ್ನಿಸಿದರೂ, ವೀಕ್ಷಕರಿಗೆ ಕೂಡ ಇಷ್ಟವಾಗಿದೆ. ಸಂಗೀತ ಅವರ ಕನಸಿನ ಬಗ್ಗೆಯೇ ಈಗ ಚರ್ಚೆ ನಡೆಯುತ್ತಿದೆ.

Leave A Reply

Your email address will not be published.