Bigg Boss: ಫಿನಾಲೆಗೆ ಆಯ್ಕೆಯಾದ ಮೊದಲ ಸ್ಪರ್ಧಿ ಸಂಗೀತ ಶೃಂಗೇರಿ! ಗೆಲುವು ಕೂಡ ಇವರಿಗೇ ಸಿಗುತ್ತಾ?

0 21

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10 ಫಿನಾಲೆಗೆ ಅತ್ಯಂತ ಹತ್ತಿರವಾಗಿದೆ. ಗ್ರ್ಯಾಂಡ್ ಫಿನಾಲೆಗೆ ಉಳಿದಿರುವುದು ಇನ್ನು ಕೇವಲ 2 ವಾರಗಳು. ಈ ವಾರ ಇಡೀ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಬಿಗ್ ಬಾಸ್ ಟಿಕೆಟ್ ಟು ಫಿನಾಲೆ ಟಾಸ್ಕ್ ನೀಡಿದ್ದರು. 8 ಸ್ಪರ್ಧಿಗಳಿಗೆ ಒಬ್ಬೊಬ್ಬರಿಗೂ ಒಂದೊಂದು ಟಾಸ್ಕ್ ಕೊಡಲಾಗಿತ್ತು, ಸ್ಪರ್ಧಿಗಳು 3 ಪ್ರತಿಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಂಡು, ಟಾಸ್ಕ್ ಆಡಬೇಕು.

ಟಾಸ್ಕ್ ಗೆದ್ದವರಿಗೆ 100 ಪಾಯಿಂಟ್ಸ್, ಎರಡನೇ ಸ್ಥಾನಕ್ಕೆ ಬಂದವರಿಗೆ 50 ಪಾಯಿಂಟ್ಸ್, ಮೂರನೇ ಸ್ಥಾನಕ್ಕೆ ಬಂದವರಿಗೆ 30 ಪಾಯಿಂಟ್ಸ್ ಸಿಗುವ ನಿಯಮ ಇತ್ತು. ಈ ಟಾಸ್ಕ್ ನಲ್ಲಿ ಲೀಡ್ ನಲ್ಲಿ ಇದ್ದಿದ್ದು ಪ್ರತಾಪ್ ಹಾಗೂ ಸಂಗೀತ. ಕೊನೆಯ ಆಟವನ್ನು ಆಡುವ ಅವಕಾಶ ಸಂಗೀತ ಅವರಿಗೆ ಸಿಕ್ಕಿತ್ತು. ಆದರೆ ಪ್ರತಾಪ್ ಅವರು ಸಂಗೀತ ಅವರನ್ನು ಟಾಸ್ಕ್ ಇಂದ ಹೊರಗೆ ಇಟ್ಟು, ತಾವೇ ಆಡಿ ಟಾಸ್ಕ್ ಗೆದ್ದರು..

ಆದರೆ ಅತಿಹೆಚ್ಚು ಅಂಕ ಗಳಿಸಿದ್ದ 3 ಸ್ಪರ್ಧಿಗಳು, ಪ್ರತಾಪ್ ಸಂಗೀತ ಹಾಗೂ ನಮ್ರತಾ ಮೂವರು ಕೂಡ ಕೊನೆಯ ಹಂತಕ್ಕೆ ಆಯ್ಕೆಯಾದರು. ಮೂವರು ಕೂಡ ತಾವು ಟಿಕೆಟ್ ಟು ಫಿನಾಲೆ ಪಡೆಯಲು ಯಾಕೆ ಅರ್ಹರು ಎಂದು ಹೇಳಿಕೊಳ್ಳಬೇಕಿತ್ತು. ಅದೆಲ್ಲವೂ ಮುಗಿದ ಬಳಿಕ ಕೊನೆಗೆ ಮನೆಯ ಇತರ ಸ್ಪರ್ಧಿಗಳು ತಮ್ಮ ವೈಯಕ್ತಿಕ ನಿರ್ಧಾರದ ಪ್ರಕಾರ ಯಾರಿಗೆ ಟಿಕೆಟ್ ಟು ಫಿನಾಲೆ ಸಿಗಬೇಕು ಎಂದು ವೋಟ್ ಮಾಡಬೇಕಿತ್ತು..

ಈ ಪ್ರಕ್ರಿಯೆಯಲ್ಲಿ ತುಕಾಲಿ ಸಂತೋಷ್, ತನಿಷಾ ಹಾಗೂ ಕಾರ್ತಿಕ್ ಮೂವರು ಕೂಡ ಸಂಗೀತ ಅವರಿಗೆ ವೋಟ್ ಮಾಡಿದರು, ವಿನಯ್ ನಮ್ರತಾ ಅವರಿಗೆ, ವರ್ತೂರ್ ಸಂತೋಷ್ ಪ್ರತಾಪ್ ಅವರಿಗೆ ವೋಟ್ ಮಾಡಿದರು. ಹೀಗೆ ಹೆಚ್ಚು ವೋಟ್ಸ್ ಪಡೆದು ಸಂಗೀತ ಟಿಕೆಟ್ ಟು ಫಿನಾಲೆ ಪಡೆದು, ಫಿನಾಲೆಗೆ ಆಯ್ಕೆಯಾದ ಮೊದಲ ಸ್ಪರ್ಧಿ ಆಗಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ಸಂತೋಷ ಆಗಿದೆ. ಈ ಸಲ ಬಿಗ್ ಬಾಸ್ ಸೀಸನ್ 10ರ ಟ್ರೋಫಿಯನ್ನು ಕೂಡ ಸಂಗೀತ ಅವರೇ ಗೆಲ್ಲುವ ನಿರೀಕ್ಷೆ ಇದೆ.

Leave A Reply

Your email address will not be published.