Bigg Boss: ಕಿಚ್ಚ ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ಒದ್ದಾಡಿದ ಸಂಗೀತ! ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್!

0 2

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ವಾರದಿಂದ ವಾರಕ್ಕೆ ಬದಲಾವಣೆಗಳು ಕಂಡುಬರುತ್ತಿವೆ ಎಂದರೆ ತಪ್ಪಲ್ಲ. ಇಂದು ಸ್ನೇಹಿತರಾಗಿದ್ದವರು ಮುಂದಿನ ವಾರ ಬರುವ ವೇಳೆಗೆ ಶತ್ರುಗಳಾಗಿದ್ದಾರೆ. ಈ ವಿಚಾರದ ಬಗ್ಗೆ ಖುದ್ದು ಕಿಚ್ಚ ಸುದೀಪ್ ಅವರು ವೀಕೆಂಡ್ ಪಂಚಾಯ್ತಿಯಲ್ಲಿ ಮಾತನಾಡಿದ್ದು, ಉತ್ತರ ಕೊಡಲಾಗದೆ ಸಂಗೀತ ಒದ್ದಾಡಿದ್ದಾರೆ. ಇದರಿಂದ ಟ್ರೋಲ್ ಕೂಡ ಆಗಿದ್ದಾರೆ.

ಬಿಗ್ ಬಾಸ್ ಶೋ ಶುರು ಆದಾಗಿನಿಂದ ನಾಲ್ಕೈದು ವಾರಗಳ ವರೆಗು ಸಂಗೀತ, ಕಾರ್ತಿಕ್ ಮತ್ತು ತನಿಷಾ ಬಹಳ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರ ಜೊತೆಗೆ ಸಂಗೀತ ಅವರಿಗೆ ಅಸಮಾಧಾನ ಮೂಡುವುದಕ್ಕೆ ಶುರುವಾಯಿತು. ಇದರಿಂದ ಜಗಳಗಳು ನಡೆದವು, ಕೊನೆಗೆ ಸಂಗೀತ ಕಾರ್ತಿಕ್ ಮತ್ತು ತನಿಷಾ ಅವರಿಂದ ದೂರವಾದರು. ವಿನಯ್ ಗ್ಯಾಂಗ್ ಜೊತೆಗೆ ಹೆಚ್ಚು ಸಮಯ ಕಳೆಯುವುದಕ್ಕೆ ಶುರು ಮಾಡಿದರು..

ಕಳೆದ ವಾರ ಬಿಗ್ ಬಾಸ್ ಕೂಡ ಟೀಮ್ ಗಳನ್ನು ಚೇಂಜ್ ಮಾಡುವ ಮೂಲಕ ಸಂಗೀತ ವಿನಯ್ ನಮ್ರತಾ ಅವರನ್ನು ಒಂದೇ ಟೀಮ್ ಗೆ ಹಾಕಿದರು. ಆಗಿನಿಂದ ಸಂಗೀತ ನಮ್ರತಾ ಮತ್ತು ವಿನಯ್ ಜೊತೆಗೆ ಹೆಚ್ಚು ಕ್ಲೋಸ್ ಆಗಿದ್ದಾರೆ. ಕಾರ್ತಿಕ್ ಹಾಗೂ ತನಿಷಾ ಈಗ ಸಂಗೀತ ಅವರ ಕಣ್ಣಿಗೆ ಬೇರೆ ರೀತಿಯಲ್ಲೇ ಕಾಣುತ್ತಿದ್ದಾರೆ. ಇದರಿಂದ ಮನೆಯ ವಾತಾವರಣ ಪೂರ್ತಿಯಾಗಿ ಬದಲಾಗಿತ್ತು. ಇದೇ ವಿಷಯಕ್ಕೆ ಸುದೀಪ್ ಅವರು ನಿನ್ನೆಯ ಸಂಚಿಕೆಯಲ್ಲಿ ಪ್ರಶ್ನೆ ಮಾಡಿದ್ದಾರೆ.

6 ವಾರದಿಂದ ಇದ್ದ ಅಭಿಪ್ರಾಯ ಒಂದೇ ರಾತ್ರಿಯಲ್ಲಿ ಹೇಗೆ ಬದಲಾಯಿತು ಎಂದು ಸಂಗೀತ ಅವರನ್ನು ಕೇಳಿದ್ದಾರೆ. ಹಾಗೆಯೇ ವಿನಯ್ ಜೊತೆಗೆ ಇರೋದು ಕಾರ್ತಿಕ್ ಜೊತೆಗೆ ಇರೋದು ಈ ಎರಡರ ಮಧ್ಯೆ ಕಾಣಿಸ್ತಿರೋ ವ್ಯತ್ಯಾಸ ಏನು ಎಂದು ಸಂಗೀತ ಅವರನ್ನ ಕೇಳಿದ್ದಾರೆ. ಆದರೆ ಸುದೀಪ್ ಅವರು ಕೇಳಿದ ಈ ಪ್ರಶ್ನೆಗೆ ಸಂಗೀತ ಅವರಿಂದ ಸರಿಯಾದ ಉತ್ತರ ಕೊಡಲು ಸಾಧ್ಯ ಆಗಲೇ ಇಲ್ಲ. ಪ್ರಶ್ನೆಗೆ ಅನುಸಾರವಾಗಿ ಅವರು ಉತ್ತರ ಕೊಡಲೇ ಇಲ್ಲ, ಸುದೀಪ್ ಅವರು ಕೂಡ ನೀವು ಕೊಡುತ್ತಿರುವ ಉತ್ತರ ಸಮಂಜಸವಾಗಿಲ್ಲ ಎಂದು ಹೇಳಿದರು.

ಕೊನೆಗೆ ಸುದೀಪ್ ಅವರು Influence ಆಗಿದ್ದಾರೆ ಎನ್ನುವುದು Influence ಆಗಿರುವ ವ್ಯಕ್ತಿಯನ್ನು ಬಿಟ್ಟು ಬೇರೆ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಕೂಡ ಕೇಳಿದರು. ಆದರೆ ಅದ್ಯಾವುದು ಕೂಡ ಸಂಗೀತ ಅವರಿಗೆ ಅರ್ಥ ಆದ ಹಾಗೆ ಕಾಣುತ್ತಿಲ್ಲ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಈಗ ಸ್ಪರ್ಧಿಗಳ ಈಕ್ವೆಶನ್ ಏರುಪೇರಾಗಿದ್ದು, ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ..

Leave A Reply

Your email address will not be published.