Bigg Boss: ಕಾರ್ತಿಕ್ ಸ್ನೇಹ ಬಿಟ್ಟಮೇಲೆ ಅಭಿಮಾನಿಗಳನ್ನೇ ಕಳೆದುಕೊಂಡ ಸಂಗೀತ!

Written by Pooja Siddaraj

Published on:

Bigg Boss: ಬಿಗ್ ಬಾಸ್ ಮನೆವಾರದಿಂದ ವಾರಕ್ಕೆ ಬದಲಾಗುತ್ತಲೇ ಇದೆ. ನಿನ್ನೆ ಮೊನ್ನೆ ಬೆಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಿದ್ದವರು ಒಂದು ವೈರಿಗಳ ಹಾಗೆ ಮಾತನಾಡುತ್ತಿದ್ದಾರೆ. ಈ ವಾರದ ಟಾಸ್ಕ್ ನಲ್ಲಿ ತಂಡಗಳು ಕೂಡ ಬದಲಾಗಿದೆ. ಖುದ್ಧು ಬಿಗ್ ಬಾಸ್ ತಂಡ ರಚಿಸಿದ್ದು, ಅನಿರೀಕ್ಷಿತ ವ್ಯಕ್ತಿಗಳು ಒಂದು ತಂಡದಲ್ಲಿ ನಿನ್ನೆ ಜೊತೆಯಾಗಿದ್ದಾರೆ. ಮನೆಯ ಕ್ಯಾಪ್ಟನ್ ಕಾರ್ತಿಕ್ ಆಗಿದ್ದು, ಅವರ ತಂಡ ಸಂಪತ್ತಿಗೆ ಸವಾಲ್. ಈ ತಂಡದಲ್ಲಿ ಕಾರ್ತಿಕ್, ಮೈಕಲ್, ತನಿಷಾ, ನೀತು, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಇದ್ದಾರೆ.

ಈ ತಂಡದ ಕ್ಯಾಪ್ಟನ್ ಮೈಕಲ್ ಆಗಿದ್ದಾರೆ. ಮತ್ತೊಂದು ತಂಡದಲ್ಲಿ ವಿನಯ್, ಸಂಗೀತ, ನಮ್ರತಾ, ಸಿರಿ, ಸ್ನೇಹಿತ್, ಪ್ರತಾಪ್ ಇದ್ದಾರೆ. ಈ ತಂಡದ ಹೆಸರು ಗಜಕೇಸರಿ ಆಗಿದ್ದು ಈ ತಂಡಕ್ಕೆ ಕ್ಯಾಪ್ಟನ್ ಸಂಗೀತ ಆಗಿದ್ದಾರೆ. ಈ ಎರಡು ತಂಡಗಳಿಗೆ ಬಿಗ್ ಬಾಸ್ ಕೊಟ್ಟಿರುವ ಟಾಸ್ಕ್ ಗಳಲ್ಲಿ ಬಹುತೇಕ ಎಲ್ಲಾ ಟಾಸ್ಕ್ ಗಳಲ್ಲೂ ಕಾರ್ತಿಕ್ ಅವರ ತಂಡವೇ ಗೆದ್ದಿದೆ. ಆದರೆ ಕ್ಯಾಪ್ಟನ್ಸಿ ಟಾಸ್ಕ್ ವಿಚಾರದಲ್ಲಿ ಈ ಎರಡು ತಂಡಗಳ ನಡುವೆ ಭಿನ್ನಾಭಿಪ್ರಾಯ ಸಹ ಮೂಡಿದೆ.

ಇದೆಲ್ಲವೂ ಒಂದು ಕಡೆಯಾದರೆ, ಮತ್ತೊಂದು ಈ ಬದಲಾವಣೆಗಳು ಸಂಗೀತ ಅವರ ಮೇಲೆ ವೈಯಕ್ತಿಕವಾಗಿ ಕೂಡ ಪರಿಣಾಮ ಬೀರಿದೆ ಎಂದರೆ ತಪ್ಪಲ್ಲ. ಸಂಗೀತ ಅವರು ಆರಂಭಿಕ ವಾರಗಳಲ್ಲಿ ಕಾರ್ತಿಕ್ ಮತ್ತು ತನಿಶಾ ಜೊತೆಗೆ ತುಂಬಾ ಕ್ಲೋಸ್ ಆಗಿದ್ದರು. ಆದರೆ ಹಲವು ಕಾರಣಗಳಿಂದ ಜಗಳ ಆಗಿ, ಈಗ ಕಾರ್ತಿಕ್ ತನಿಷಾ ಇಂದ ದೂರವಾಗಿದ್ದಾರೆ ಸಂಗೀತ. ಈಗ ವಿನಯ್ ನಮ್ರತಾ ಜೊತೆಗೆ ಕ್ಲೋಸ್ ಆಗಿದ್ದಾರೆ.

ಈ ವಾರ ಬಿಗ್ ಬಾಸ್ ಅವರೇ ಟೀಮ್ ಮಾಡಿದ್ರು ಕೂಡ, ಸಂಗೀತ ಅವರು ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಜನರು ಇವರ ಮೇಲೆ ಅಸಮಾಧಾನ ಮಾಡಿಕೊಂಡಿದ್ದಾರೆ. ಸಂಗೀತ ಅವರು ಟ್ರೋಲ್ ಸಹ ಆಗುತ್ತಿದ್ದಾರೆ. ಸಂಗೀತ ವಿನಯ್ ಟೀಮ್ ನಲ್ಲಿ ಇರುವುದಕ್ಕೆ ಹೊರಗಿನ ಜನರ ಕೋಪಕ್ಕೂ ಗುರಿಯಾಗಿದ್ದು, ಅದು ಅವರ ಫ್ಯಾನ್ ಬೇಸ್ ಮೇಲೆ ಕೂಡ ಪರಿಣಾಮ ಬೀರಿದೆ. ಇದೀಗ ಸಂಗೀತ ಅವರ ಫಾಲೋವರ್ಸ್ ಇಳಿಕೆ ಆಗಿದೆ..

ಬಿಗ್ ಬಾಸ್ ಗೆ ಹೋಗಿ ಕಾರ್ತಿಕ್ ಜೊತೆಗೆ ಚೆನ್ನಾಗಿದ್ದಾಗ ಸಂಗೀತ ಅವರಿಗೆ 449( ಫಾಲೋವರ್ಸ್ ಇದ್ದರು, ಕಾರ್ತಿಕ್ ಸಂಗೀತ ಸ್ನೇಹ ಜನರಿಗೆ ತುಂಬಾ ಇಷ್ಟವಾಗಿತ್ತು. ಆದರೆ ವಿನಯ್ ಫ್ರೆಂಡ್ಶಿಪ್ ಶುರುವಾದ ಮೇಲೆ ಸಂಗೀತ ಅವರ ಫಾಲೋವರ್ಸ್ ಸಂಖ್ಯೆ ಇಳಿಕೆ ಆಗಿದ್ದು, ಈಗ 438k ಫಾಲೋವರ್ಸ್ ಆಗಿದ್ದಾರೆ. ಒಟ್ಟಿನಲ್ಲಿ ಸಂಗೀತ ಅವರ ಈ ನಡೆ ಮುಂದೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಿದೆ.

Leave a Comment