Bigg Boss: ಮಾನವೀಯತೆ ಮರೆತ ಬಿಗ್ ಬಾಸ್ ಸ್ಪರ್ಧಿಗಳು! ಏನಾಗ್ತಿದೆ ದೊಡ್ಮನೆಯಲ್ಲಿ?

Written by Pooja Siddaraj

Published on:

Bigg Boss: ಬಿಗ್ ಬಾಸ್ ಮನೆಯ ವಾಸದಲ್ಲಿ ಈಗ ಸೆಕೆಂಡ್ ಹಾಫ್ ಶುರುವಾಗಿದೆ. 50 ದಿನಗಳ ಜರ್ನಿ ಮುಗಿಸಿದ ಬಳಿಕ ಮನೆಯಲ್ಲಿ ಕಾಂಪಿಟೇಶನ್ ಇನ್ನಷ್ಟು ಜೋರಾಗಿದೆ. ಟಾಸ್ಕ್ ಗಳು ಕೂಡ ಅಷ್ಟೇ ವಿಭಿನ್ನವಾಗಿ ಸಾಗುತ್ತಿದೆ. ಅದರ ಜೊತೆಗೆ ಜಗಳ ಮತ್ತು ಕದನಗಳು ಕೂಡ ಜೋರಾಗಿಯೇ ನಡೆಯುತ್ತಿದೆ. ಈ ವಾರ ಬಿಗ್ ಬಾಸ್ ಮನೆ ಎರಡು ತಂಡಗಳಾಗಿ ವಿಭಜನೆ ಆಗಿದ್ದು, ಒಂದು ಗಂಧರ್ವರ ತಂಡ, ಮತ್ತೊಂದು ರಾಕ್ಷಸರ ತಂಡ.

ಗಂಧರ್ವದ ತಂಡದ ಕ್ಯಾಪ್ಟನ್ ವರ್ತೂರ್ ಸಂತೋಷ್ ಆಗಿದ್ದು, ಇವರ ತಂಡದಲ್ಲಿ ವಿನಯ್, ನಮ್ರತಾ, ಮೈಕಲ್, ತುಕಾಲಿ ಸಂತೋಷ್ ಹಾಗೂ ಪವಿ ಇದ್ದಾರೆ. ಮತ್ತೊಂದು ರಾಕ್ಷಸರ ತಂಡದ ನಾಯಕಿ ಸಂಗೀತ ಆಗಿದ್ದು ಇವರ ತಂಡದಲ್ಲಿ ಕಾರ್ತಿಕ್, ತನಿಷಾ, ಪ್ರತಾಪ್, ಸಿರಿ ಮತ್ತು ಅವಿ ಇದ್ದಾರೆ. ನಿನ್ನೆ ಸಂಗೀತ ಅಂಡ್ ಟೀಮ್ ರಾಕ್ಷಸರಾಗಿದ್ದು, ವರ್ತೂರ್ ಸಂತೋಷ್ ಟೀಮ್ ಗಂಧರ್ವರಗಿದ್ದರು. ಆಗ ಏನೆಲ್ಲ ನಡೆದಿದೆ ಎಂದು ನಿನ್ನೆಯ ಸಂಚಿಕೆಯಲ್ಲಿ ನೋಡಿದ್ದಾಗಿದೆ.

ರಾಕ್ಷಸರ ಟೀಮ್ ಒಂದು ರೀತಿ ಮಾನವೀಯತೆ ಇಲ್ಲದೆಯೇ ವರ್ತಿಸಿತು, ಇನ್ನು ಇಂದಿನ ಸಂಚಿಕೆಯಲ್ಲಿ ಉಲ್ಟಾ ಆಗಿದ್ದು, ರಾಕ್ಷಸರಾಗಿರುವ ವರ್ತೂರ್ ಅಂಡ್ ಟೀಮ್ ಅವರಿಗಿಂತ ಹೆಚ್ಚಾಗಿ ಮಾನವೀಯತೆ ಇಲ್ಲದ ಹಾಗೆ ನಡೆದುಕೊಂಡಿದ್ದಾರೆ. ಸಂಗೀತ ಟೀಮ್ ಕೂಡ ಕುರ್ಚಿಯ ಮೇಲೆ ಕೂತಿದ್ದು, ಅವರನ್ನು ಎಬ್ಬಿಸಲು ವಿನಯ್ ಅಂಡ್ ಟೀಮ್ ಅಮಾನವೀಯ ತಂತ್ರಗಳನ್ನು ಬಳಸಿದೆ ಎಂದು ಹೇಳಲಾಗುತ್ತಿದೆ.

ಕೆಮಿಕಲ್ ಗಳನ್ನು ಹಾಕಿರುವ ನೀರನ್ನು ಎರಚಿರುವ ಕಾರಣ ಸಂಗೀತ ಮತ್ತು ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಕಲರ್ಸ್ ಕನ್ನಡ ಚಾನೆಲ್ ಇಂದ ಅಥವಾ ಸಂಗೀತ ಪ್ರತಾಪ್ ಇಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಕೆಲವು ನೆಟ್ಟಿಗರು ಇದು ಸುಳ್ಳು ಎಂದು ಕೂಡ ಹೇಳುತ್ತಿದ್ದಾರೆ. ಆದರೆ ಇಂಥ ಕಮೆಂಟ್ಸ್ ಗಳು ಕೇಳಿಬರುತ್ತಿರುವುದಂತೂ ನಿಜ. ಇದರಲ್ಲಿ ಇರುವ ಸತ್ಯ ಎಷ್ಟು ಎಂದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

Leave a Comment