Bigg Boss: ಇದ್ದಕ್ಕಿದ್ದಂತೆ ಕಾಣೆಯಾದ ಸಂಗೀತ! ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ್ರ?

Written by Pooja Siddaraj

Published on:

Bigg Boss: ಬಿಗ್ ಬಾಸ್ ಶೋ ಅಂದ್ರೆ ಬಿಗ್ ಬಾಸ್ ಕೊಡುವ ವಿಭಿನ್ನವಾದ ಟಾಸ್ಕ್ ಗಳಿಂದಲೇ ಹೆಚ್ಚು ಜನರ ಗಮನ ಸೆಳೆಯುತ್ತದೆ. ಕೆಲವೊಮ್ಮೆ ಗ್ರೂಪ್ ಮಾಡಿ ಟಾಸ್ಕ್ ಕೊಡುವ ಬಿಗ್ ಬಾಸ್ ಇನ್ನು ಕೆಲವೊಮ್ಮೆ ಪ್ರತಿ ಸ್ಪರ್ಧಿಗೆ ವಿಭಿನ್ನವಾಗಿ ಅಥವಾ ವಿಶೇಷವಾಗಿ ಟಾಸ್ಕ್ ನೀಡುತ್ತಾರೆ. ಇದು ಕೆಲವೊಮ್ಮೆ ಮನೆಯ ಇತರ ಸ್ಪರ್ಧಿಗಳಿಗೆ ಟೆನ್ಷನ್ ಶಸ್ ಕೊಡಬಹುದು.

ಇದೇ ಕಾರಣಕ್ಕೆ ಬಿಗ್ ಬಾಸ್ ಇಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಪ್ರಸ್ತುತ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಇಂಥದ್ದೇ ಒಂದು ಟ್ವಿಸ್ಟ್ ಸಿಕ್ಕಿದೆ. ಮನೆಯ ಸ್ಪರ್ಧಿಗಳು ಸಂಗೀತ ಶೃಂಗೇರಿ ಅವರು ಮನೆಯಲ್ಲಿ ಕಾಣುತ್ತಿಲ್ಲ ಎಂದು ಶಾಕ್ ಆಗಿದ್ದಾರೆ. ಹೌದು, ಇದ್ದಕ್ಕಿದ್ದ ಹಾಗೆ ಸಂಗೀತ ಶೃಂಗೇರಿ ಅವರು ಬಿಗ್ ಬಾಸ್ ಮನೆಯಲ್ಲಿ ಕಾಣುತ್ತಿಲ್ಲ, ಅವರ ಇಬ್ಬರು ಫ್ರೆಂಡ್ಸ್ ಇದರಿಂದ ಟೆನ್ಷನ್ ಮಾಡಿಕೊಂಡಿದ್ದಾರೆ..

ಸಂಗೀತ ಶೃಂಗೇರಿ ಅವರು ಬಿಗ್ ಬಾಸ್ ಮನೆಯ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರು. ಉತ್ತಮವಾಗಿ ಆಟವಾಡುತ್ತಾ ಬಂದಿರುವ ಇವರು ಈ ವಾರ ಟಾಸ್ಕ್ ಗೆದ್ದು ನಾಮಿನೇಷನ್ ಇಂದ ಪಾರಾಗಿದ್ದಾರೆ. ಆದರೆ ಸಂಗೀತ ಅವರು ಇದ್ದಕ್ಕಿದ್ದ ಹಾಗೆ ಬಿಗ್ ಬಾಸ್ ಮನೆಯಿಂದ ಕಾಣೆಯಾಗಿದ್ದಾರೆ. ಇಡೀ ಮನೆಯಲ್ಲಿ ಎಲ್ಲೂ ಕೂಡ ಸಂಗೀತ ಅವರು ಕಾಣಿಸುತ್ತಿಲ್ಲ. ಕಾರ್ತಿಕ್ ಮತ್ತು ತನಿಷಾ ಇಬ್ಬರು ಕೂಡ ಸಂಗೀತ ಅವರಿಗಾಗಿ ಹುಡುಕಾಡಿದ್ದಾರೆ..

ಕಾರ್ತಿಕ್ ಅವರು ಇಡೀ ಮನೆಯ ಮೂಲೆ ಮೂಲೆಯಲ್ಲೂ ಹುಡುಕಿ ಸಂಗೀತ ಅವರು ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ. ಈ ಕಡೆ ತನಿಷಾ ಕೂಡ ಸಂಗೀತ ಅವರನ್ನು ಹುಡುಕಿ ಫ್ರೆಂಡ್ ಕಾಣಿಸದೆ ಇರುವುದಕ್ಕೇ ಟೆನ್ಷನ್ ಆಗಿದ್ದಾರೆ. ಮನೆಯವರೆಲ್ಲಾ ಹುಡುಕುವಾಗ ಪ್ರತಾಪ್ ಅವರು ಬಂದು ಅವರು ಏನಾದರು ಬಚ್ಚಿಟ್ಟುಕೊಳ್ಳುತ್ತೀನಿ ಅಂತ ಹೇಳಿದ್ರಾ ಎಂದು ಕೇಳಿದ್ದಾರೆ, ಅದಕ್ಕೆ ತನಿಷಾ ಇಲ್ಲ ಎಂದು ಹೇಳಿದ್ದು, ನನಗೆ ಗೊತ್ತಿಲ್ಲದೆ ಕೇಳಿದೆ ಎಂದಿದ್ದಾರೆ ಪ್ರತಾಪ್. ಕೊನೆಗೆ ಕಾರ್ತಿಕ್ ಸಂಗೀತ ಇಬ್ಬರು ಬಿಗ್ ಬಾಸ್ ಗೆ ಮನವಿ ಮಾಡಿಕೊಂಡಿದ್ದಾರೆ.

ನಿಜಕ್ಕೂ ಸಂಗೀತ ಅವರು ಕಾಣೆಯಾಗಿದ್ದಾರಾ? ಅಥವಾ ಇದ್ದಕ್ಕಿದ್ದ ಹಾಗೆ ಮನೆಯಿಂದ ಎಲಿಮಿನೇಟ್ ಆಗಿದ್ದಾರಾ? ಅಲ್ಲಿ ಏನಾಗಿದೆ? ಎನ್ನುವ ಟೆನ್ಷನ್ ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಮಾತ್ರವಲ್ಲ, ಹೊರಗಿರುವ ವೀಕ್ಷಕರಿಗೂ ಶುರುವಾಗಿದೆ. ಸಂಗೀತ ಅವರ ವಿಚಾರದಲ್ಲಿ ಏನಾಗಿದೆ ಎನ್ನುವುದನ್ನು ತಿಳಿಯಲು ಇಂದಿನ ಸಂಚಿಕೆ ಶುರುವಾಗುವ ವರೆಗು ಕಾದು ನೋಡಬೇಕಿದೆ.

Leave a Comment