Bigg Boss: ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರಬರಬೇಕು ಅಂದ್ರೆ ಎಷ್ಟು ದೊಡ್ಡ ಮೊತ್ತದ ದಂಡ ಕಟ್ಟಬೇಕು ಗೊತ್ತಾ?

Written by Pooja Siddaraj

Published on:

Bigg Boss: ವೀಕೆಂಡ್ ಬಂತು ಎಂದರೆ ಬಿಗ್ ಬಾಸ್ ಮನೆಯಲ್ಲಿ ಸಂತೋಷ್ ಆತಂಕ ಎರಡು ಇರುತ್ತದೆ. ಕಿಚ್ಚ ಸುದೀಪ್ ಅವರು ಮನೆಯ ಸ್ಪರ್ಧಿಗಳೊಡನೆ ಮಾತನಾಡಿ, ಸರಿತಪ್ಪುಗಳನ್ನು ತಿಳಿಸಿ ಕೊಡುತ್ತಾರೆ. ಹಾಗೆಯೇ ಸ್ಪರ್ಧಿಗಳ ಜೊತೆಗೆ ಸಾಕಷ್ಟು ತಮಾಷೆಯನ್ನು ಕೂಡ ಮಾಡುತ್ತಾರೆ. ಇದೆಲ್ಲವೂ ಸಂತೋಷ ತರುವಂಥ ವಿಷಯವಾದರೆ, ದುಃಖದ ವಿಚಾರ ವೀಕೆಂಡ್ ಎಪಿಸೋಡ್ ನಲ್ಲಿ ಎಲಿಮಿನೇಷನ್ ಇರುತ್ತದೆ.

ಪ್ರತಿ ಭಾನುವಾರ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬರುತ್ತಾರೆ. ಕನ್ನಡ ಬಿಗ್ ಬಾಸ್ ನಲ್ಲಿ ಈ ವಾರ ಬೇರೆ ರೀತಿಯ ಸಂದರ್ಭ ಎದುರಾಗಿದೆ. ಈ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ವರ್ತೂರ್ ಸಂತೋಷ್ ಅವರನ್ನು ಮನೆಯಿಂದ ಸೇವ್ ಮಾಡಿದ್ದಾರೆ. ವರ್ತೂರ್ ಸಂತೋಷ್ ಅವರೇ ನೀವು ಸೇಫ್ ಆಗಿದ್ದೀರಿ ಎಂದು ಹೇಳಿದಾಗ ಸಂತೋಷ್ ಅವರು ಮನೆಯಿಂದ ಹೊರಗಡೆ ನಡೆದ ಒಂದು ಘಟನೆ ಇಂದ ನನಗೆ ಮನೆಯಲ್ಲಿ ಇರೋದಕ್ಕೆ ಆಗ್ತಾ ಇಲ್ಲ. ನಾನು ಹೋಗ್ತೀನಿ ಎಂದು ಕಣ್ಣೀರು ಹಾಕಿದ್ದಾರೆ.

ಆಗ ಸುದೀಪ್ ಅವರು ವರ್ತೂರ್ ಸಂತೋಷ್ ಅವರಿಗೆ ಸುಮಾರು 34 ಲಕ್ಷದ 15 ಸಾವಿರ ವೋಟ್ ಗಳು ಬಂದಿವೆ ಎನ್ನುವುದನ್ನು ಹೇಳುತ್ತಾರೆ. ಹಾಗೆಯೇ ಇದು ಜನರ ತೀರ್ಮಾನ ತಾವು ಜನರ ವಿರುದ್ಧ ಹೋಗೋದಿಲ್ಲ ಎಂದು ಹೇಳುವ ಸುದೀಪ್ ಅವರು ವೇದಿಕೆಯಿಂದ ಹೊರಹೋಗಿದ್ದಾರೆ. ಇತ್ತ ವರ್ತೂರ್ ಸಂತೋಷ್ ಅವರನ್ನು ಮನೆಯವರು ಮನೆಯಲ್ಲೇ ಇರಿ ಎಂದು ಕನ್ವಿನ್ಸ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ವರ್ತೂರ್ ಸಂತೋಷ್ ಅವರು ಮನೆಯವರ ಮಾತನ್ನು ಕೇಳದೆ..

ತಾವು ಹೋಗಬೇಕು ಎಂದು ಬಾಗಿಲಿನಿಂದ ಹೊರ ಹೋಗುತ್ತಿರುವ ರೀತಿ ಪ್ರೋಮೋದಲ್ಲಿ ನೋಡಬಹುದು. ಇದೀಗ ಈ ಪ್ರೊಮೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿಜಕ್ಕೂ ಇಂದು ನೀತು ಅವರು ಎಲಿಮಿನೇಟ್ ಆಗಿದ್ದು, ವರ್ತೂರ್ ಸಂತೋಷ್ ಅವರು ಮನೆಯಿಂದ ಹೊರಹೋಗಬೇಕು ಎನ್ನುತ್ತಿರುವ ಕಾರಣ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕಾದು ನೋಡಬೇಕಿದೆ. ಆದರೆ ಸ್ಪರ್ಧಿಗಳು ಯಾವಾಗೆಂದರೆ ಆಗ ಬಿಗ್ ಬಾಸ್ ಮನೆಯಿಂದ ಹೊರಬರಲು ಆಗೋದಿಲ್ಲ.

ಶೋಗೆ ಹೋಗುವುದಕ್ಕಿಂತ ಮೊದಲೇ ಒಂದು ಅಗ್ರಿಮೆಂಟ್ ಗೆ ಸಹಿ ಹಾಕಿಸಿರಲಾಗುತ್ತದೆ. ಎಲ್ಲವೂ ನಡೆಯುವುದು ಅಗ್ರಿಮೆಂಟ್ ಪ್ರಕಾರವೇ ಆಗಿರುತ್ತದೆ. ಪ್ರತಿ ಸೀಸನ್ ನಲ್ಲೂ ಕೆಲವು ಸ್ಪರ್ಧಿಗಳು ಈ ರೀತಿ ಅರ್ಧದಲ್ಲೇ ಹೊರಬರಬೇಕು ಎಂದುಕೊಳ್ಳುವುದು ಸಹಜ. ಆದರೆ ಹೀಗೆ ತಮ್ಮಿಷ್ಟದ ಹಾಗೆ ಎಲಿಮಿನೇಟ್ ಆಗದೆಯೇ ಶೋ ಇಂದ ಹೊರಬರಬೇಕು ಎಂದರೆ ಅಗ್ರಿಮೆಂಟ್ ಪ್ರಕಾರ ದೊಡ್ಡ ದಂಡವನ್ನೇ ತೆರಬೇಕು.

ಹಿಂದಿ ಬಿಗ್ ಬಾಸ್ ನಲ್ಲಿ ಒಬ್ಬ ಸ್ಪರ್ಧಿ ಮನೆಯಲ್ಲಿರಲು ಇಷ್ಟವಿಲ್ಲದೆ ಹೊರಗಡೆ ಬರಬೇಕು ಎಂದರೆ, ವಾಹಿನಿಗೆ 2ಕೋಟಿ ರೂಪಾಯಿ ದಂಡ ಪಾವತಿ ಮಾಡಲೇಬೇಕು. ಆದರೆ ಕನ್ನಡದಲ್ಲಿ ಕೂಡ ಇಷ್ಟೇ ದಂಡ ಪಾವತಿ ಮಾಡಬೇಕಾ ಎನ್ನುವುದು ಗೊತ್ತಿಲ್ಲ. ವರ್ತೂರ್ ಸಂತೋಷ್ ಅವರು ಹೊರಬರುತ್ತಾರಾ ಇವರು ಕೂಡ ದಂಡ ಕಟ್ಟಬೇಕಾ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Leave a Comment