Bigg Boss: ಬಿಗ್ ಬಾಸ್ ಮನೆ ಎಂದಮೇಲೆ ಒಂದಲ್ಲಾ ಒಂದು ಕಾರಣಕ್ಕೆ ಜಗಳ ಆಗುತ್ತಲೇ ಇರುತ್ತದೆ. ಕಳೆದ ವಾರ ನಡೆದ ಜಗಳ ದೊಡ್ಡ ಪರಿಣಾಮ ಬೀರಿದೆ. ಕಿಚ್ಚ ಸುದೀಪ್ ಅವರು ಮನೆಮಂದಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಅದರಿಂದ ಈಗ ಮನೆಯ ಸ್ಪರ್ಧಿಗಳು ಬುದ್ಧಿ ಕಲಿತಿದ್ದಾರೆ. ಆದರೆ ಜಗಳ ಅಂತೂ ಸಂಪೂರ್ಣವಾಗಿ ಕಡಿಮೆ ಆಗಿಲ್ಲ. ಇದೀಗ ತನಿಷಾ ಮತ್ತು ಸ್ನೇಹಿತ್ ನಡುವೆ ಹೊಸದಾಗಿ ಜಗಳ ಶುರುವಾಗಿದೆ.
ಈ ಬಾರಿ ಜಗಳ ನಡೆದಿರುವುದು ಸಣ್ಣದೊಂದು ಕಾರಣಕ್ಕೆ. ಮನೆಯಲ್ಲಿ ಲೈಟ್ ಆಫ್ ಆದ ಮೇಲೆ ಮಲಗುವ ವಿಚಾರಕ್ಕೆ ತನಿಷಾ ಮತ್ತು ಸ್ನೇಹಿತ್ ನಡುವೆ ಜಗಳ ಆಗಿದೆ. ಮನೆಯಲ್ಲಿ ಲೈಟ್ ಆಫ್ ಆದ ನಂತರ ಮನೆಯಲ್ಲಿ ಎಲ್ಲರೂ ಪಿಸಿಪಿಸಿ ಅಂತ ಮಾತನಾಡುವ ವಿಷಯಕ್ಕೆ ತನಿಷಾ ಒಂದು ಮಾತು ಹೇಳಿದರು. ಎಲ್ಲರೂ ಇಷ್ಟು ಹೊತ್ತಿಗೆ ಮಲಗಬೇಕು, ಲೈಟ್ಸ್ ಆಫ್ ಆದ ಮೇಲೆ ಬಾಗಿಲು ಹಾಕಿಕೊಂಡು ಮಲಗಬೇಕು ಎಂದು ಹೇಳಿದರು.
ಅದಕ್ಕೆ ಸ್ನೇಹಿತ್ ಈಗಲೇ ಮಲಗಬೇಕು, ಆಗಲೇ ಮಲಗಬೇಕು, ಬಾಗಿಲು ಹಾಕೊಂಡು ಮಲಗಬೇಕು ಅಂತ ಹೇಳೋಕೆ ನೀವು ಸ್ಕೂಲ್ ಅಲ್ಲ ಅಂತ ಹೇಳಿದ್ದಾರೆ. ಸ್ನೇಹಿತ್ ಮಾತಿಗೆ ತನಿಷಾ, ನಾನೇನು ತಪ್ಪಾಗಿ ಮಾತನಾಡಿಲ್ಲ ಹೇಳಿದ್ದು ಸರಿಯಿದೆ ಎಂದಿದ್ದಾರೆ. ಈ ವಿಷಯಕ್ಕೆ ಹೆಚ್ಚಿಗೆ ಮಾತು ಬೆಳೆದು, ರೂಲ್ಸ್ ಮಾಡೋಕೆ ನೀವು ಬಿಗ್ ಬಾಸ್ ಅಲ್ಲ, ನಿಮ್ಮನ್ನ ಇಲ್ಲಿಗೆ ಕಳಿಸಿರೋದು ಸ್ಪರ್ಧಿಯಾಗಿ, ಕ್ಲಾಸ್ ಲೀಡರ್ ಆಗಿ ಅಲ್ಲ, ಬಿಗ್ ಬಾಸ್ ಥರ ವರ್ತನೆ ಮಾಡಬೇಡಿ ಎಂದು ಹೇಳುತ್ತಾರೆ ಸ್ನೇಹಿತ್.
ಅದಕ್ಕೆ ತನಿಷಾ, ನಾನು ಬಿಗ್ ಬಾಸ್ ಥರ ವರ್ತನೆ ಮಾಡ್ತಿಲ್ಲ, ನಾನು ಹೇಳೋದ್ರಲ್ಲಿ ತಪ್ಪಿಲ್ಲ, ನೀವು ಯಾಕೆ ಬಿಲೋ ಲೆವೆಲ್ ಸ್ಟುಡೆಂಟ್ ಥರ ಆಡ್ತಿದ್ದೀರಾ ಎಂದು ಹೇಳಿದ್ದಾರೆ. ಇವರಿಬ್ಬರ ನಡುವೆ ಈ ವಾದ ವಿವಾದ ನಡೆಯುವಾಗ ಮನೆಯವರು ಏನನ್ನು ಹೇಳಲಿಲ್ಲ. ಕೊನೆಯಲ್ಲಿ ಸ್ನೇಹಿತ್ ನೀವು ಇಲ್ಲಿ ಬ್ಯುಸಿನೆಸ್ ಶುರು ಮಾಡ್ತಾ ಇಲ್ಲ. ನಾವು ನಿಮ್ಮ ಎಂಪ್ಲಾಯಿಗಳಲ್ಲ ಎಂದು ಹೇಳುತ್ತಾರೆ. ಆಗ ಸಂಗೀತ ಅವರು ತನಿಷಾ ಅವರ ಸಪೋರ್ಟ್ ಗೆ ಬಂದು, ನಾವು ಆ ರೀತಿ ಹೇಳಿಲ್ಲ ಕಾರ್ತಿಕ್ ಥ್ಯಾಂಕ್ ಯೂ ಹೇಳಿದ್ದಾರೆ.
ಈ ಒಂದು ಜಗಳ ನಡೆಯುವಾಗ ಬೇರೆ ಯಾರು ಮಾತಾನಾಡಿಲ್ಲ, ಜಗಳಕ್ಕೆ ಬರುವ ವಿನಯ್ ಅವರು ಕೂಡ ಸೈಲೆಂಟ್ ಆಗಿದ್ದರು. ಈ ಒಂದು ಬದಲಾವಣೆ ಒಂದು ರೀತಿ ಆಶ್ಚರ್ಯ ತಂದಿದ್ದು, ಸುದೀಪ್ ಅವರ ಮಾತುಗಳು ಮನೆಯವರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎನ್ನುವುದು ಈ ಮಾತುಗಳಿಂದ ಗೊತ್ತಾಗುತ್ತಿದೆ.