Bigg Boss: ವಿನಯ್ ನಮ್ರತಾರನ್ನು ಕ್ಯಾಪ್ಟನ್ಸಿ ಟಾಸ್ಕ್ ಇಂದ ಹೊರಗಿಟ್ಟ ಸ್ನೇಹಿತ್! ಮುರಿಯಿತಾ ಸ್ನೇಹ?

0 1

Bigg Boss: ಬಿಗ್ ಬಾಸ್ ಮನೆಯ ವಾಸದಲ್ಲಿ ಈಗ ಸೆಕೆಂಡ್ ಹಾಫ್ ಶುರುವಾಗಿದೆ. 50 ದಿನಗಳ ಜರ್ನಿ ಮುಗಿಸಿದ ಬಳಿಕ ಮನೆಯಲ್ಲಿ ಕಾಂಪಿಟೇಶನ್ ಇನ್ನಷ್ಟು ಜೋರಾಗಿದೆ. ಟಾಸ್ಕ್ ಗಳು ಕೂಡ ಅಷ್ಟೇ ವಿಭಿನ್ನವಾಗಿ ಸಾಗುತ್ತಿದೆ. ಅದರ ಜೊತೆಗೆ ಜಗಳ ಮತ್ತು ಕದನಗಳು ಕೂಡ ಜೋರಾಗಿಯೇ ನಡೆಯುತ್ತಿದೆ. ಈ ವಾರ ಬಿಗ್ ಬಾಸ್ ಮನೆ ಎರಡು ತಂಡಗಳಾಗಿ ವಿಭಜನೆ ಆಗಿದ್ದು, ಒಂದು ಗಂಧರ್ವರ ತಂಡ, ಮತ್ತೊಂದು ರಾಕ್ಷಸರ ತಂಡ.

ಗಂಧರ್ವದ ತಂಡದ ಕ್ಯಾಪ್ಟನ್ ವರ್ತೂರ್ ಸಂತೋಷ್ ಆಗಿದ್ದು, ಇವರ ತಂಡದಲ್ಲಿ ವಿನಯ್, ನಮ್ರತಾ, ಮೈಕಲ್, ತುಕಾಲಿ ಸಂತೋಷ್ ಹಾಗೂ ಪವಿ ಇದ್ದಾರೆ. ಮತ್ತೊಂದು ರಾಕ್ಷಸರ ತಂಡದ ನಾಯಕಿ ಸಂಗೀತ ಆಗಿದ್ದು ಇವರ ತಂಡದಲ್ಲಿ ಕಾರ್ತಿಕ್, ತನಿಷಾ, ಪ್ರತಾಪ್, ಸಿರಿ ಮತ್ತು ಅವಿ ಇದ್ದಾರೆ. ಸಂಗೀತ ಅಂಡ್ ಟೀಮ್ ರಾಕ್ಷಸರಾಗಿದ್ದಾಗ ನಡೆದದ್ದು, ಹಾಗೆಯೇ ವಿನಯ್ ಅಂಡ್ ಟೀಮ್ ರಾಕ್ಷಸರಾಗಿದ್ದಾಗ ಏನೆಲ್ಲಾ ನಡೆಯಿತು ಎಂದು ನೋಡಿದ್ದಾಗಿದೆ.

ನಿನ್ನೆ ನಡೆದಿರುವ ಮಾಹಿತಿ ಪ್ರಕಾರ, ವಿನಯ್ ಅಂಡ್ ಟೀಮ್ ಕೆಮಿಕಲ್ ಬಳಸಿರುವ ನೀರನ್ನು ಪದೇ ಪದೇ ಸಂಗೀತ ಪ್ರತಾಪ್ ಮುಖಕ್ಕೆ ಎರಚಿದ ಕಾರಣ ಅವರಿಬ್ಬರ ಆರೋಗ್ಯಕ್ಕೆ ತೊಂದರೆಯಾಗಿ ಆಸ್ಪತ್ರೆ ಪಾಲಾಗಿದ್ದಾರೆ. ಇನ್ನು ಕಲರ್ಸ್ ಕನ್ನಡ ಚಾನೆಲ್ ಇಂದು ಬಿಡುಗಡೆ ಮಾಡಿರುವ ಪ್ರೋಮೋ ನೋಡಿದರೆ, ಸ್ನೇಹಿತ್ ಕ್ಯಾಪ್ಟನ್ಸಿ ಟಾಸ್ಕ್ ಇಂದ ವಿನಯ್ ಹಾಗೂ ನಮ್ರತಾ ಅವರನ್ನು ದೂರ ಇಟ್ಟಿದ್ದಾರೆ.

ತಂಡದಿಂದ ಇಬ್ಬರು ಸದಸ್ಯರನ್ನು ದೂರ ಇಡುವ ಅಧಿಕಾರವನ್ನು ಸ್ನೇಹಿತ್ ಅವರಿಗೆ ಬಿಗ್ ಬಾಸ್ ಕೊಟ್ಟಿದ್ದು, ತಾವು ನೀಡಿದ ಆಜ್ಞೆಯನ್ನು ನಮ್ರತಾ ಹಾಗೂ ವಿನಯ್ ಸರಿಯಾಗಿ ಪಾಲಿಸಲಿಲ್ಲ ಎನ್ನುವ ಕಾರಣಕ್ಕೆ ಅವರಿಬ್ಬರನ್ನು ಸ್ನೇಹಿತ್ ಅವರು ಕ್ಯಾಪ್ಟನ್ಸಿ ಟಾಸ್ಕ್ ಇಂದ ದೂರವಿಟ್ಟಿದ್ದಾರೆ. ಇದಕ್ಕೆ ಕೋಪಗೊಂಡ ನಮ್ರತಾ, ಪುಟಗೊಸಿ, ಬುಲ್ ಶಿಟ್ ಸರಿಯಾದ ರೀಸಂಸ್ ಕೊಡು..

ಇವನು ಯಾವ ಸೀಮೆ ಫ್ರೆಂಡ್, ಇವನು ಕೊಟ್ಟ ಯಾವ ಆರ್ಡರ್ ನ ನಾವು ಫಾಲೋ ಮಾಡಿಲ್ಲ, ಇವನು ಯಾರು ನಮಗೆ ಅರ್ಹತೆ ಇಲ್ಲ ಅಂತ ಡಿಸೈಡ್ ಮಾಡೋಕೆ ಎಂದು ಸ್ನೇಹಿತ್ ಮೇಲೆ ಕೋಪ ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ.

Leave A Reply

Your email address will not be published.