Bigg Boss: ಸಂಗೀತ ಕಾರ್ತಿಕ್ ಇಂದಲೂ ಸಾಧ್ಯವಾಗಿಲ್ಲ, ಅಂಥದ್ದೊಂದು ಸಾಧನೆ ಮಾಡಿ ಫಿನಾಲೆ ತಲುಪಿರುವ ಸ್ಫರ್ಧಿ ಇವರು

Written by Pooja Siddaraj

Published on:

Bigg Boss: ಬಿಗ್ ಬಾಸ್ ಮನೆಯಲ್ಲಿ ಈಗ ಫಿನಾಲೆ ವಾರ ನಡೆಯುತ್ತಿದೆ. ಮನೆಯಲ್ಲಿ 6 ಸ್ಪರ್ಧಿಗಳಿದ್ದಾರೆ. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ವಿಭಿನ್ನವಾದ ಟಾಸ್ಕ್ ಗಳನ್ನು ನೀಡಲಾಗುತ್ತಿದೆ. ಜನವರಿ 27 ಹಾಗು ಜನವರಿ 28ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳೇ ಆಗಿದ್ದು, ವಿನ್ನರ್ ಆಗೋದು ಎನ್ನುವ ಕುತೂಹಲ ಸಹ ಜಾಸ್ತಿಯಾಗಿದೆ.

ಸಾಮಾನ್ಯವಾಗಿ ಬಿಗ್ ಬಾಸ್ ಫಿನಾಲೆ ವೀಕ್ ನಲ್ಲಿ ಇರುವುದು 5 ಸ್ಪರ್ಧಿಗಳು, ಆದರೆ ಈ ಸೀಸನ್ ನಲ್ಲಿ 6 ಸ್ಪರ್ಧಿಗಳಿದ್ದಾರೆ. ಅವರುಗಳಲ್ಲಿ ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಬಹುದು. ಇನ್ನು 5 ಜನರು ಫಿನಾಲೆ ದಿನದ ವರೆಗು ಇರುತ್ತಾರೆ ಎಂದು ಹೇಳಲಾಗಿದೆ. ಈ ರೀತಿಯಲ್ಲಿ ಫಿನಾಲೆ ವಾರ ಸಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸದ್ದು ಮಾಡಿದ್ದು ಸಂಗೀತ ಕಾರ್ತಿಕ್ ಎಂದರೆ ತಪ್ಪಲ್ಲ.

ಇವರಿಬ್ಬರಿಂದಲು ಸಾಧ್ಯವಾಗದ ಅದೊಂದು ಕಾರಣಕ್ಕೆ ಮತ್ತೊಬ್ಬ ಸ್ಪರ್ಧಿ ಫಿನಾಲೆಗೆ ಕಾಲಿಟ್ಟಿದ್ದಾರೆ. ಅವರು ಮತ್ಯಾರು ಅಲ್ಲ, ಬಿಗ್ ಬಾಸ್ ಕನ್ನಡ ಸೀಸನ್ 10ರ ಆನೆ ಎಂದೇ ಖ್ಯಾತಿ ಪಡೆದಿರುವ ವಿನಯ್ ಗೌಡ. ಹೌದು, ವಿನಯ್ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದು ಅಗ್ರೆಶನ್ ಇಂದ. ಟಾಸ್ಕ್ ಎಂದು ಬಂದರೆ ಸದಾ ಮುನ್ನುಗ್ಗುತ್ತಾರೆ ವಿನಯ್. ಇಂಥ ವಿನಯ್ ಅವರಲ್ಲಿ ಅದೊಂದು ವಿಶೇಷತೆ ಇದೆ.

ಆ ವಿಶೇಷತೆ ಏನು ಎಂದರೆ, ಇದುವರೆಗೂ ವಿನಯ್ ಅವರು ಕಳಪೆ ಪಡೆದು ಜೈಲಿಗೆ ಹೋಗಿಲ್ಲ. ಹೌದು, ಇಡೀ ಸೀಸನ್ ನಲ್ಲಿ ಒಂದು ಸಾರಿ ಕೂಡ ಕಳಪೆ ಪಡೆಯದೇ ಜೈಲಿಗೆ ಹೋಗಿರುವ ಸ್ಪರ್ಧಿ ವಿನಯ್. ಈ ರೀತಿಯಾಗಿ ವಿನಯ್ ಅವರು ಬಿಗ್ ಬಾಸ್ ಮನೆಯೊಳಗೆ ಹೊಸ ಸಾಧನೆ ಮಾಡಿದ್ದಾರೆ ಎಂದರೆ ತಪ್ಪಲ್ಲ. ಮನೆಯ ಎಲ್ಲಾ ಸ್ಪರ್ಧಿಗಳು ಕೂಡ ಒಮ್ಮೆಯಾದರೂ ಕಳಪೆ ಪಡೆದು ಜೈಲಿಗೆ ಹೋಗಿದ್ದಾರೆ. ಆದರೆ ವಿನಯ್ ಒಂದು ಸಾರಿ ಕೂಡ ಹೋಗಿಲ್ಲ.

Leave a Comment